ಜನ್ಮ ದಿನದ ನಿಮಿತ್ಯ ಜನೋಪಯೋಗಿ ಕಾರ್ಯಕ್ರಮ: ಮೂಗಬಸವ

ಚನ್ನಮ್ಮ ಕಿತ್ತೂರು, ಆ 30: ಶಾಸಕ ಮಹಾಂತೇಶ ದೊಡ್ಡಗೌಡರ ಜನ್ಮ ದಿನದ ನಿಮಿತ್ಯ ಕಾರ್ಯಕರ್ತರು ಮತ್ತು ಮುಖಂಡರು ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು 45000 ಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆಂದು ಅಭಿಮಾನಿ ಬಳಗದ ಪ್ರಕಾಶ ಮೂಗಬಸವ ಹೇಳಿದರು.
ಶಾಸಕರ 49ನೇ ಹುಟ್ಟುಹಬ್ಬದ ನಿಮಿತ್ಯ ಸೆ. 2 ರಂದು ತಾಲೂಕಿನ ಎಂ. ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ಆಯೋಜಿಸಿದ ಅಭಿನಂದನೆ ಸಮಾರಂಭ ಮತ್ತು ಬೃಹತ್ ಆರೋಗ್ಯ ಶಿಬಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಳಪ್ಪ ಭಜಂತ್ರಿ ಸೇರಿದಂತೆ ಹಲವರಿಗೆ ಸತ್ಕಾರ ನಡೆಯಲಿದೆ. ಜಿಲ್ಲೆ ಹಲವು ಆಸ್ಪತ್ರೆಗಳ ಆಶ್ರಯದಲ್ಲಿ ಸುಮಾರು 75ಕ್ಕೂ ಹೆಚ್ಚು ನುರಿತ ತಜ್ಞರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳುವರು. ಇದರ ಲಾಭವನ್ನು ಸುಮಾರು ಜನ ಪಡೆಯಲಿದ್ದಾರೆ. ಕಿತ್ತೂರು, ಬೈಲಹೊಂಗಲ ಮತಕ್ಷೇತ್ರದ 50ಕ್ಕೂ ಹೆಚ್ಚು ಮಠಾದೀಶರು ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಕರ ಕುಲಕರ್ಣಿ ಮಾತನಾಡಿ ಕಿತ್ತೂರು, ಬೈಲಹೊಂಗಲ ಮತಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. ಕಿತ್ತೂರಿನಿಂದ ರಾಯಣ್ಣ ಸಮಾಧಿ ನಂದಗಡವರೆಗೆ ಪಾದಯಾತ್ರೆ ಹಮ್ಮಿಕೊಂಡಾಗ ಆ ಯಾತ್ರೆಯಲ್ಲಿ ಸುಮಾರು 8 ಸಾವಿರಕ್ಕೂ ಜನ ಪಾಲ್ಗೊಂಡು ದೊಡ್ಡಗೌಡರ ಅವರಿಗೆ ಅಪಾರ ಶಕ್ತಿ ತುಂಬಿದ್ದಾರೆಂದರು. ಕಿತ್ತೂರು ಪ್ರಾಧಿಕಾರ ಸದಸ್ಯ ಚಿನ್ನಪ್ಪಾ ಮುತ್ನಾಳ ಮಾತನಾಡಿ ಎಂ. ಕೆ. ಹುಬ್ಬಳ್ಳಿ ಹೊರ ವಲಯದ 30 ಎಕರೆ ಜಾಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 10 ಎಕರೆಯಲ್ಲಿ ವೇದಿಕೆ ಮತ್ತು ವಾಹನ ನಿಲ್ಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಾ. ಬಸವರಾಜ ಪರವಣ್ಣವರ ಮಾತನಾಡಿ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರು ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು. ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹುಟ್ಟುಹಬ್ಬದ ನಿಮಿತ್ಯ ಆಯೋಜಿಸಿದ ಕಾರ್ಯಕ್ರಮದ ಪ್ರಚಾರ ಪತ್ರ ಬಿಡುಗಡೆಗೊಳಿಸಿದರು. ಈಶ್ವರ ಉಳ್ಳಾಗಡ್ಡಿ, ಚನ್ನಬಸಪ್ಪ ಮೋಕಾಶಿ, ಎಸ್. ಆರ್, ಪಾಟೀಲ್, ಕುಮಾರ್ ಪಾಟೀಲ, ಉಳವಪ್ಪ ಉಳ್ಳಾಗಡ್ಡಿ, ಬಿ. ಎಪ್. ಕೊಳದೂರ, ಎಸ್. ದೇಶಪಾಂಡೆ, ಡಿ. ಆರ್. ಪಾಟೀಲ, ಕಿರಣ ಪಾಟೀಲ್, ಶ್ರೀಶೈಲ ಪಾಗಾದ, ಬಸವರಾಜ ಡುಗನವರ, ದೊಡ್ಡಪಾ, ಗಣಾಚಾರಿ ಸೇರಿದಂತೆ ಹಲವರಿದ್ದರು.