ಜನ್ಮ ದಿನದ ನಿಮಿತ್ತ ಕುಷ್ಠ ರೋಗಿಗಳಿಗೆ ಎಂಎಲ್ಸಿ ಅರಳಿಯವರಿಂದ ಹೊದಿಕೆ ವಿತರಣೆ

ಬೀದರ್:ಡಿ.19: ಜನ್ಮ ದಿನದ ನಿಮಿತ್ತ ಬೀದರ್ ತಾಲೂಕಿನ ಚಟ್ನಳ್ಳಿ ಹತ್ತಿರದ ನವಜೀವನ ಕೇಂದ್ರದಲ್ಲಿರುವ ಕುಷ್ಟ ರೋಗಿಗಳಿಗೆ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹೊದಿಕೆ, ಶ್ವ್ವೆಟರ್ ಸೇರಿದಂತೆ ಇತರೆ ವಸ್ತುಗಳನ್ನು ವಿತರಣೆ ಮಾಡಿದರು.

ಅಲ್ಲಿನ ಎಲ್ಲ ಕುಷ್ಠ ರೋಗಿಗಳಿಗೆ ಹೊದಿಕೆ ವಿತರಣೆ ಮಾಡಿ ಮಾತನಾಡಿದ ಅರವಿಂದ ಅರಳಿ, ಕುಷ್ಠ ರೋಗಿಗಳ ಜತೆ ನಾನು ಜನ್ಮ ದಿನ ಆಚರಿಸಿಕೊಳ್ಳುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.

ಚಟ್ನಳ್ಳಿ ಹತ್ತಿರದ ಈ ಕೇಂದ್ರಕ್ಕೆ ಹಲವು ಸಮಸ್ಯೆಗಳಿವೆ. ಇಲ್ಲಿಗೆ ಬರಲು ಸರಿಯಾಗಿ ರಸ್ತೆ ಇಲ್ಲ. ಅಲ್ಲದೆ ಇಲ್ಲಿ ಸಹ ಕೆಲ ಸೌಲಭ್ಯಗಳ ಕೊರತೆ ಇದೆ. ಬರುವ ದಿನಗಳಲ್ಲಿ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.

ಪ್ರಮುಖರಾದ ಸೂರ್ಯಕಾಂತ ಕಾಡವಾದ, ಸತೀಶ್ ಚಟ್ನಳ್ಳಿ, ಪ್ರಶಾಂತ ಭಾವಿಕಟ್ಟಿ, ಗೋಪಾಲ ದೊಡ್ಡಿ, ರೂಬಿನ್ ಮೈಲೂರು, ಆನಂದ ಇತರರಿದ್ದರು.