ಜನ್ಮಶತಮಾನೋತ್ಸವ ಕಾರ್ಯಕ್ರಮ


ಧಾರವಾಡ,ಮೇ.7:ಗ್ರಂಥಾಲಯ ವಿಜ್ಞಾನಕ್ಕೆಆಧುನಿಕ ಸ್ಪರ್ಶ ನೀಡಿ, ಗ್ರಂಥಾಲಯ ವಿಜ್ಞಾನದ ಬೀಜ ಬಿತ್ತಿದ ಮೊದಲ ವ್ಯಕ್ತಿ ಪ್ರೊ. ಕೆ.ಎಸ್. ದೇಶಪಾಂಡೆಯವರುಎಂದು ಹಿರಿಯಗ್ರಂಥಾಲಯ ವಿಜ್ಞಾನಿ ಡಾ.ಎಸ್‍ಆರ್.ಗುಂಜಾಳ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಗ್ರಂಥಾಲಯ ವಿಜ್ಞಾನಿ ಪ್ರೊ.ಕೆ.ಎಸ್. ದೇಶಪಾಂಡೆಜನ್ಮಶತಮಾನೋತ್ಸವಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಧಾರವಾಡದ ಕ.ವಿ.ವಿ. ಯಲ್ಲಿಗ್ರಂಥಪಾಲಕರಾಗಿತಮ್ಮ ವೃತ್ತಿಜೀವನ ಪ್ರಾರಂಭಿಸಿದ ಪ್ರೊ.ಕೆ.ಎಸ್. ದೇಶಪಾಂಡೆಗ್ರಂಥಾಲಯವನ್ನುಉತ್ಕøಷ್ಟದರ್ಜೆಗೆ ಏರಿಸಿದರು. ಕ.ವಿ.ವಿಯಲ್ಲಿಗ್ರಂಥಾಲಯ ವಿಜ್ಞಾನ ವಿಭಾಗ ಪ್ರಾರಂಭಿಸಿದ ಕೀರ್ತಿಇವರದಾಗಿದೆ.ಕ್ರಮೇಣ ಬಿ.ಲಿಬ್ ಹಾಗೂ ಎಂ.ಲಿಬ್ ಪ್ರಾರಂಭಿಸಿದ ನಂತರ ಅನೇಕ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಲ್ಲಿ ಗ್ರಂಥಾಲಯ ಅಧಿಕಾರಿಗಳಾಗಲು ಕಾರಣೀಭೂತರಾದರು. ಇವರಕಾರ್ಯವೈಖರಿ ಬದ್ಧತೆಕರ್ತವ್ಯ ಪ್ರಜ್ಞೆ ಗಮನಿಸಿದ ಆಗಿನ ಯು.ಜಿ.ಸಿ ಚೇರಮನ್ ಸಿ.ಡಿ. ದೇಶಮುಖಅವರು ಕ.ವಿ.ವಿ ಗ್ರಂಥಾಲಯವನ್ನು ಪ್ರೊ.ಕೆ.ಎಸ್. ದೇಶಪಾಂಡೆ ಬೆಳೆಸಿದಂತೆ ರಾಜ್ಯದಎಲ್ಲಾ ವಿಶ್ವವಿದ್ಯಾಲಯಗಳು ಮಾದರಿಯನ್ನಾಗಿಸಿ ಬೆಳೆಸಲು ಆದೇಶಿಸಿದ್ದರು.
ಸರಳ ಜೀವನ ಪ್ರೀತಿಸುವಗುಣದಿಂದರಾಜ್ಯದಾದ್ಯಂತಅಪಾರ ಶಿಷ್ಯಬಳಗ ಹೊಂದಿದ್ದಾರೆ.ವಿವಿಧ ಸಂಘ ಸಂಸ್ಥೆಗಳ ಜೊತೆ ನಿಕಟ ಸಂಪರ್ಕ ಹೊಂದಿ ಅವುಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರಅವರದಾಗಿದೆ.ಅಮೇರಿಕಾದಗ್ರಂಥಾಲಯಕ್ಕೆ ಸಂದರ್ಶನ ನೀಡಿ, ಲ್ಯಾಂಡ್‍ಆಫ್ ಲೈಬ್ರರಿ ಎಂಬ ಶ್ರೇಷ್ಠ ಕೃತಿ ರಚಿಸಿದರು.ಗ್ರಂಥಾಲಯ ವಿಜ್ಞಾನಕ್ಕೆಅವರು ಸಲ್ಲಿಸಿದ ಸೇವಾ ಸ್ಮರಣೆಗಾಗಿಒಂದು ಸ್ಮರಣ ಸಂಚಿಕೆ ಹೊರತರಬೇಕು.ಜೊತೆಗೆ ಕ.ವಿ.ವಿ. ಗ್ರಂಥಾಲಯದ ಮುಂದೆಅವರ ಪುತ್ಥಳಿ ಅನಾವರಣವಾಗ ಬೇಕೆಂಬ ಸದಾಶಯ ವ್ಯಕ್ತಪಡಿಸಿದರು.
ವಿಶ್ರಾಂತಜಿಲ್ಲಾಗ್ರಂಥಾಲಯಾಧಿಕಾರಿ ಜಿ.ಬಿ. ಹೊಂಬಳ ಮಾತನಾಡಿ, ಪ್ರೊ. ಕೆ.ಎಸ್. ದೇಶಪಾಂಡೆ ನಮಗೆಲ್ಲಾ ಪ್ರೇರಕ ಶಕ್ತಿ. ಮೈಸೂರ ವಿ.ವಿ. ಯಲ್ಲಿಉತ್ಕøಷ್ಟಗ್ರಂಥಾಲಯ ಸ್ಥಾಪಿಸಿ ಡಾ.ರಾಧಾಕೃಷ್ಟನ್‍ರಿಂದ ಉದ್ಘಾಟಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಸಾರ್ವಜನಿಕಗ್ರಂಥಾಲಯ ಕಾನೂನು ಪುನರ್ ಪರಿಶೀಲನಾ ಸಮಿತಿಅಧ್ಯಕ್ಷರಾಗಿ ಮಾಡಿದಕಾರ್ಯಅನನ್ಯ. ಕ.ವಿ.ವ. ಸಂಘಕ್ಕೆ ಅನುದಾನತರುವಲ್ಲಿಅವರಕೊಡುಗೆಅಪಾರಎಂದು ಹೇಳಿದರು.
ಕ.ವಿ.ವ. ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಪ್ರೊ.ಕೆ.ಎಸ್. ದೇಶಪಾಂಡೆಯವರ ಪತ್ನಿಕುಸುಮತಾಯಿದೇಶಪಾಂಡೆಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪ್ರಾರಂಭದಲ್ಲಿಜ್ಯೋತಿಕುಲಕರ್ಣಿ ಹಾಗೂ ದೀಪ್ತಿ ಪಾಟೀಲ ಸಂಗಡಿಗರಿಂದ ಸುಗಮ ಸಂಗೀತಕಾರ್ಯಕ್ರಮಜರುಗಿತು.
ಡಾ. ಸಂಜೀವಕುಲಕರ್ಣಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಸಿದರು. ವೀರಣ್ಣಒಡ್ಡೀನ ನಿರೂಪಿಸಿದರು.ಡಾ. ಧನವಂತ ಹಾಜವಗೋಳ ವಂದಿಸಿದರು.
ಗೋಷ್ಠಿ ಉಪನ್ಯಾಸಗಳು
ಪ್ರೊ.ಕೆ.ಎಸ್. ದೇಶಪಾಂಡೆಅವರಜನ್ಮ ಶತಮಾನೋತ್ಸವದ ನಿಮಿತ್ತ ಗ್ರಂಥಾಲಯಕ್ಕೆ ಪರ್ಯಾಯ ಪದದೇಶಪಾಂಡೆಯವರು'ದೇಶಪಾಂಡೆಯವರಜೀವನ ಮತ್ತು ಸಾಧನೆ’ ಕ.ವಿ.ವಿ. ಗ್ರಂಥಾಲಯಕ್ಕೆದೇಶಪಾಂಡೆಯವರಕೊಡುಗೆ'ದೇಶಪಾಂಡೆಯವರಜೊತೆಗಿನಒಡನಾಟ’ ಮತ್ತುಗ್ರಂಥಾಲಯದ ವಿಜ್ಞಾನದ ಪತ್ರಿಕೆಗಳು ಕುರಿತು ಶ್ರೀನಿವಾಸ ವಾಡಪ್ಪಿ, ಡಾ.ಸಂಜೀವಕುಲಕರ್ಣಿ, ಡಾ.ಎಸ್.ಎಲ್. ಸಂಗಮ, ಡಾ.ದಿಲೀಪ ದೇಶಪಾಂಡೆ, ಡಾ.ವಿನಾಯಕ ಬಂಕಾಪುರ ಮಾತನಾಡಿ, ಕನ್ನಡ ಭಾಷೆ ಸಂಸ್ಕøತಿ ಉಳಿವಿಗೆ ಪ್ರೊ.ಕೆ.ಎಸ್. ದೇಶಪಾಂಡೆಕೊಡುಗೆಅಪಾರಇವರು ಪುಸ್ತಕ ಪ್ರೇಮಿ ಮಾತ್ರವಲ್ಲ. ಜನರಲ್ಲಿ ಪುಸ್ತಕ ಓದುವ ಸಂಸ್ಕøತಿ ಬೆಳೆಸಿದರು.ಮನೆತನದಿಂದ ಅಷ್ಟೇನು ಶ್ರೀಮಂತರಾಗಿರದಿದ್ದರೂ ಹೃದಯ ಶ್ರೀಮಂತಿಕೆ ಉಳ್ಳವರಾಗಿದ್ದರು.ದೇಶದಲ್ಲಿಯೇ ಮಾದರಿಯಗ್ರಂಥಪಾಲಕರಲ್ಲಿಇವರೂಒಬ್ಬರು.ತಮ್ಮಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ವೃತ್ತಿಯ ಬಗ್ಗೆ ಬದ್ಧತೆಇದ್ದುದ್ದರಿಂದಜನಮಾನಸದಲ್ಲಿಜೀವಂತವಾಗಿದ್ದಾರೆ.
ಪ್ರೊ.ಕೆ.ಎಸ್. ದೇಶಪಾಂಡೆತಾವೊಬ್ಬರೇ ಬದುಕಲಿಲ್ಲ. ಇತರರಿಗೂಜೀವನದಲ್ಲಿ ಹೇಗೆ ಬದುಕಬೇಕೆಂಬುದನ್ನು, ಹೇಗೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂಬುದನ್ನು ಕಲಿಸಿದ್ದಾರೆ.ಶಾರೀರಿಕ ಶ್ರಮ, ಪುಸ್ತಕ ಪ್ರೀತಿಇವರಎರಡು ಆದ್ಯತೆಗಳಾಗಿದ್ದವು.ಪ್ರೊ.ಕೆ.ಎಸ್. ದೇಶಪಾಂಡೆ ಮುಕ್ತ ಮನಸ್ಸಿನ ಮುಗ್ಧ ಜೀವಿಗಳು ಅತಿಥಿ ಸತ್ಕಾರ್ಯ ಸತ್ಸಂಗದಲ್ಲಿಇವರಿಗೆ ಹೆಚ್ಚು ಆಸಕ್ತಿ.ಇನ್ನೊಬ್ಬರ ಒಳಿತಿಗಾಗಿ ಬಾಳಿದ ಹೃದಯವಂತರು.
ಗ್ರಂಥಾಲಯ ವಿಜ್ಞಾನದಲ್ಲಿ ಹೊಸ ಹೊಸ ಪ್ರಯೋಗ ಮಾಡಿ, ಗ್ರಂಥಾಲಯ ವಿಜ್ಞಾನಕ್ಕೆ ಬುನಾದಿ ಹಾಕಿದರು.ನಾವು ಅವರಿಂದಕಲಿತದ್ದೇ ಜಾಸ್ತಿ ಎಂದುಅಭಿಪ್ರಾಯಪಟ್ಟರು.
ದತ್ತಿಉಪನ್ಯಾಸ
ವಿಶ್ರಾಂತ ಹಿರಿಯಅಧಿಕಾರಿಡಾ.ಸದಾಶಿವ ಮರ್ಜಿ `ನಾನು ಮತ್ತು ಪುಸ್ತಕ ಪ್ರಪಂಚ’À ವಿಷಯಕುರಿತುಉಪನ್ಯಾಸ ನೀಡಿ, ನನ್ನ ಶೈಕ್ಷಣಿಕ ಓದಿಗೆ ಗ್ರಂಥಾಲಯಗಳು ಪ್ರೇರಕವಾಗಿತ್ತು.ಇಂದು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಬೇಕಿದೆ.ಪುಸ್ತಕ ಆತ್ಮ, ಹೃದಯ ಬೆಸೆಯುವ ಮಹತ್ಕಾರ್ಯ ಮಾಡುತ್ತಿದೆ. ಪುಸ್ತಕಗಳೇ ನಮ್ಮ ಸ್ನೇಹಿತರು. ಓದುಗರು ಕ್ರಿಯಾಶೀಲರಾದರೆ ಮಾತ್ರ ಸೃಜನಶೀಲ ಸಾಹಿತ್ಯರಚನೆ ಸಾಧ್ಯ.ಪುಸ್ತಕಗಳು ನಮ್ಮ ಬದುಕು ಶ್ರೀಮಂತಗೊಳಿಸುತ್ತವೆ. ಡಾ.ಬಿ.ಆರ್.ಅಂಬೇಡ್ಕರ್‍ದಣಿವರಿಯದಓದುಗರಾಗಿದ್ದರು. ಖರ್ಚು-ವೆಚ್ಚ ಕಡಿಮೆ ಮಾಡಿ ಪುಸ್ತಕ ಖರೀದಿಸಿ ಓದುವಅವರ ಹವ್ಯಾಸ ಸ್ಮರಣೀಯಎಂದು ಹೇಳಿದರು.
ಪ್ರೊ.ಮಾಲತಿ ಪಟ್ಟಣಶೆಟ್ಟಿಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೊ.ಕೆ.ಎಸ್. ದೇಶಪಾಂಡೆಅವರಲ್ಲಿಜೀವನೋತ್ಸಾಹಇತ್ತು.ನಾನು ಅವರಿಂದಲೇಜೀವನ ಪಾಠಕಲಿತೆಎಂದರು.ದೇಶಪಾಂಡೆಅವರಒಡನಾಟಕುರಿತುರೋಹಿಣಿರಾವ ಮತ್ತು ಶಿವಪುತ್ರಯ್ಯ ರಾಚಯ್ಯನವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಡಾ.ಮಹೇಶ ಹೊರಕೇರಿ, ವಿಶ್ವೇಶ್ವರಿ ಹಿರೇಮಠ, ನಿಂಗಣ್ಣಕುಂಟಿ, ಎಂ.ಎಂ.ಚಿಕ್ಕಮಠ, ದುಷ್ಯಂತ ನಾಡಗೌಡ, ಡಾ.ಆನಂದ ಪಾಟೀಲ, ಡಾ. ಶಶಿಧರ ನರೇಂದ್ರ, ರಾಧಾ ಶ್ಯಾಮರಾವ, ಜಯದೇವ ಹಿರೇಮಠ, ಅರುಣ ನಾಡಿಗೇರ, ಸುರೇಶ ಹೊರಕೇರಿ, ಎಂ.ಎಸ್. ನರೇಗಲ್, ಶಿವಾನಂದ ಹೂಗಾರ, ಸಮೀರದೇಶಪಾಂಡೆ, ಸೇರಿದಂತೆ ಪ್ರೊ. ಕೆ.ಎಸ್. ದೇಶಪಾಂಡೆ ಪರಿವಾರದವರುಇದ್ದರು.