ಜನ್ಮದಿನ ಆಚರಣೆ ಬೇಡ ಹಿರೇಕಲ್ಮಠ ಶ್ರೀ ಕರೆ

ಹೊನ್ನಾಳಿ.ಏ.೨೩; ಸ್ಥಳೀಯ ಹಿರೇಕಲ್ಮಠದಲ್ಲಿ ಶ್ರೀ  ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಯವರು ಮಾಸ್ಕ್ ಜಾಗೃತಿ ಬಗ್ಗೆ ಭಕ್ತರಿಗೆ ಸಲಹೆ ನೀಡಿದರು.ತಮ್ಮ ಜನ್ಮದಿನ ಆಚರಿಸದಂತೆ ಭಕ್ತರಲ್ಲಿ ಮನವಿ ಮಾಡಿದರು. ಈ ವೇಳೆ ಸಂಜೆವಾಣಿ ಪತ್ರಿಕೆ ಓದುತ್ತಾ ಸುದ್ದಿ ಹಾಗೂ ವಿಶ್ಲೇಷಣೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ನಂತರ ಮಾತನಾಡಿದ ಅವರು ನನ್ನ ಹುಟ್ಟುಹಬ್ಬ ಮುಖ್ಯವಲ್ಲ ಈಗ ನಮ್ಮ ದೇಶಕ್ಕೆ ಬಂದಿರುವ ಮಹಾಮಾರಿ ಕೊರೋನಾ ತಡೆಗಟ್ಟುವಲ್ಲಿ ಎಲ್ಲರೂ ಸಹ ಎಚ್ಚರದಿಂದ ಇರಬೇಕು. ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ನನ್ನ ಹುಟ್ಟುಹಬ್ಬ ಇಂದು ಇಲ್ಲ ನಾಳೆ ಮಾಡಬಹುದು ಆದರೆ ಜನಗಳಿಗೆ ಆಗುವಂತಹ ತೊಂದರೆ ನಮ್ಮ ಭಕ್ತ ಸಂಕುಲಕ್ಕೆ ಇಂಥ ಕಾಯಿಲೆಯನ್ನು ಹೊಡೆದೋಡಿಸುವ ಶಕ್ತಿಯನ್ನು ಗುರು ಚೆನ್ನೇಶ ಹಾಗೂ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು  ಪತ್ರಿಕೆಯೊಂದಿಗೆ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಸಂಸ್ಕೃತಿ ಸಂಸ್ಕಾರ ತಂಡ ಭಾಗವಹಿಸಿತ್ತು.