ಜನ್ಮದಿನವೇ ಪ್ಲಾಸ್ಮಾ ದಾನ ಮಾಡಲು ತೆಂಡೂಲ್ಕರ್ ನಿರ್ಧಾರ

ಮುಂಬೈ, ಏ 24- ಕೋವಿಡ್​ ಸೋಂಕಿನಿಂದ ಗುಣಮುಖರಾಗಿರುವ ಭಾರತೀಯ ಕ್ರಿಕೆಟ್‌ ತಂಡದ ಮಾಸ್ಟರ್ ಬ್ಲಾಸ್ಟರ್ ಪ್ಕಾಸ್ಮಾ ದಾನ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
​ತೆಂಡೂಲ್ಕರ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ ಹುಟ್ಟುಹಬ್ಬದಂದೇ ಈ ನಿರ್ಧಾರ ಕೈಗೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕೋವಿಡ್​ನಿಂದ ಗುಣಮುಖರಾಗಿರುವ ಅವರು ಈಗ ಪ್ಲಾಸ್ಮಾ ದಾನ ಮಾಡಲು ಮುಂದಾಗುವ ಮೂಲಕ ಮತ್ತೊಬ್ಬ ಸೋಂಕಿರತ ಜೀವ ಉಳಿಸಲು ಅವರು ಸಂಕಲ್ಪ ಮಾಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಚಿನ್ ಪ್ರಕಟಿಸಿದ್ದಾರೆ.
ಪ್ಲಾಸ್ಮಾದಾನಕ್ಕೆ ತಾವು ನಿರ್ಧರಿಸಿರುವುದಾಗಿ ಕಳೆದ ವರ್ಷ ನಾನು ಪ್ಮಾಸ್ಮಾ ಕೇಂದ್ರವನ್ನು ಉದ್ಘಾಟಿಸಿದ್ದೆ. ಈ ವೇಳೆ ವೈದ್ಯರು ಸರಿಯಾದ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದರೆ, ಇದರಿಂದ ಇತರೆ ರೋಗಿಗಳು ಚೇತರಿಸಿಕೊಳ್ಳಬಹುದು ಎಂದಿದ್ದರು. ಅದರಂತೆ ಈಗ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೊರೊನಾದಿಂದ ಗುಣಮುಖರಾಗಿದ್ದೇನೆ. ಪ್ಲಾಸ್ಮಾ ದಾನಕ್ಕೆ ಅರ್ಹನಾಗುತ್ತಿದ್ದಂತೆ ವೈದ್ಯರ ಸಲಹೆ ಪಡೆದು ಪ್ಲಾಸ್ಮಾ ದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.