ಸಿರವಾರ,ಜು.೧೨-
ಮಾಜಿ ಸಚಿವ ಮತ್ತು ದೇವದುರ್ಗ ಕ್ಷೇತ್ರದ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಅವರ ೪೬ ನೇ ಜನ್ಮದಿನದ ಅಂಗವಾಗಿ ದಿ.೧೩ ರಂದು ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗು ಕೆಎಸ್‌ಎನ್ ಅಭಿಮಾನಿ ಬಳಗದ ಮುಖಂಡ ನರಸಿಂಹರಾವ್ ಕುಲಕರ್ಣಿ ಹೇಳಿದ್ದಾರೆ.
ಕೆಎಸ್‌ಎನ್ ಅಭಿಮಾನಿಗಳ ಸಮಾಜಿಕ ಸೇವಾ ಸಮಿತಿ ವತಿಯಿಂದ ಈಗಾಗಲೇ ವಿವಿಧ ಸಾಮಾಜಿಕ ಕಾರ್ಯಗಳಾದ ನೇತ್ರ ತಪಾಸಣಾ ಶಿಬಿರ, ಗ್ರಾಮೀಣ ಭಾಗದ ಯುವಕರಿಗಾಗಿ ದೇಸಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿದೆ.
ದಿ.೧೩ ರಂದು ಪಟ್ಟಣದ ಮರಾಟ ರಸ್ತೆಯಲ್ಲಿನ ಆರ್.ಕೆ. ಕಮಲಮ್ಮ ಕಾಲೋನಿಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜೇತ ಮಹಿಳೆಯರಿಗೆ ಪ್ರಥಮ ಬಹುಮಾನ ೨೦ ಸಾವಿರ ರೂ.ಗಳು, ದ್ವಿತೀಯ ಬಹುಮಾನ ೧೦ ಸಾವಿರ ರೂ.ಗಳು, ತೃತೀಯ ಬಹುಮಾನ ೫ ಸಾವಿರ ರೂ.ಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.