ಜನೌಷಧಿ ಕೇಂದ್ರಗಳು ಬಡವರಿಗೆ ವರದಾನ : ಶೀಲವಂತ

ಗುಳೇದಗುಡ್ಡ ಸೆ.8-ಕೇಂದ್ರ ಸರ್ಕಾರದ ಔಷಧಿ ಶಾಸ್ತ್ರಗಳ ಇಲಾಖೆಯು, ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ದೇಶದ ವಿವಿಧ ಭಾಗಗಳಲ್ಲಿ ತೆರೆಯುವ ಮೂಲಕ ಅನುವು ಮಾಡಿಕೊಟ್ಟಿದೆ. ಅದರಂತೆ ಈಗ ಪಟ್ಟಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಆರಂಭಿಸಿದ್ದು, ಜನೌಷಧಿ ಕೇಂದ್ರಗಳು ಬಡವರ ಪಾಲಿಗೆ ವರದಾನವಾಗಿವೆ. ಗುಳೇದಗುಡ್ಡ ಸೇರಿದಂತೆ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದ್ದಾರೆ.
ಅವರು ಪಟ್ಟಣದ ಭಂಡಾರಿ ಕಾಲೇಜಿನ ಹತ್ತಿರದ ಶ್ರೀಕಾಂತ ಭಾವಿ ಮಾಲೀಕತ್ವದ ಕೇಂದ್ರ ಸರಕಾರದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಖಾಸಗಿ ಅಂಗಡಿಗಳಲ್ಲಿ ಔಷಧಿಗಳ ಬೆಲೆ ಹೆಚ್ಚಾಗಿ ಬಡವರಿಗೆ ಅದು ಕೈಗೆಟುತ್ತಿಲ್ಲ. ಬಡವರು ಪ್ರಾಣಕಳೆದು ಕೊಳ್ಳಬಾರದೆಂಬ ಉದ್ದೇಶದಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಶ್ರೇಷ್ಠ ಗುಣಮಟ್ಟದ ಔಷಧಿಗಳು ದೊರೆಯಬೇಕೆಂಬ ಉದ್ದೇಶದಿಂದ, ಪ್ರಧಾನಮಂತ್ರಿ ಭಾರತೀಯ ಜನಔಷಧಿ ಪರಿಯೋಜನೆ(ಪಿಎಂಬಿಜೆಪಿ) ಅಡಿಯಲ್ಲಿ, ಜನೌಷಧಿ ಕೇಂದ್ರಗಳು ಪ್ರಾರಂಭಿಸಿದ್ದಾರೆ. ಈ ಕೇಂದ್ರಗಳು ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿವೆ. ಗ್ರಾಹಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಜನೌಷಧಿ ಕೇಂದ್ರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಶ್ರೀಕಾಂತ ಭಾವಿ, ಶಶಿಧರ ಉದ್ನೂರ, ಸಿದ್ದು ಅರಕಾಲಚಿಟ್ಟಿ, ಪೋಲಿಸಪ್ಪ ರಾಮದುರ್ಗ, ಕಮಲಕಿಶೋರ ಮಾಲಪಾಣಿ, ಸಂಪತ್‍ಕುಮಾರ ರಾಠಿ, ಗಣೇಶ ಶೀಲವಂತ, ಮುರುಗೇಶ ರಾಜನಾಳ, ದೀಪಕ ನೇಮದಿ, ಈರಣ್ಣ ಬಂಡಿವಡ್ಡರ, ಶಿವಾನಂದ ಎಣ್ಣಿ, ಭಾಗ್ಯಾ ಉದ್ನೂರ, ಹನಮಂತ ರೂಢಗಿ ಮತ್ತಿತರರಿದ್ದರು.