ಜನೋಪಯೋಗಿ ಆವಿಷ್ಕಾರಗಳಿಗೆ ಕಾರ್ಯಾಗಾರ ಸಹಾಯಕ

ಬಳ್ಳಾರಿ, ಏ.27: ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ವೆಬಿನಾರ್ “ಐ.ಪಿ.ಆರ್ & ಐ.ಪಿ ಮ್ಯಾನೇಜ್‍ಮೆಂಟ್ ಫಾರ್ ಸ್ಟಾರ್ಟ್-ಅಪ್” ಆರು ದಿನದ ತಾಂತ್ರಿಕ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ ಮಾತನಾಡಿ, “ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉಪಯುಕ್ತವಾಗುವ, ಸಮಾನ್ಯರಿಗೆ ತಲುಪುವ ಆವಿಷ್ಕಾರಗಳು ಬರುವುದಕ್ಕೆ ಈ ತರಹದ ಕಾರ್ಯಕ್ರಮಗಳು ಪುಷ್ಠಿಯನ್ನು ಒದಗಿಸುತ್ತವೆ. ಭಾಗವಹಿಸಿದ ಎಲ್ಲಾರು ಇದರ ಸದುಪಯೋಗವನ್ನು ಪಡೆದು ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕೆಂದರು.
ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, “ಈ ಕಾರ್ಯಗಾರದಿಂದ ತಾಂತ್ರಿಕ ಜಿಜ್ಞಾಸೆ , ಹೊಸತನವನ್ನು ಕಂಡುಹಿಡಿಯುದು ಪ್ರೇರಕವಾಗಲು ಉದ್ಧೇಶಿಸಲಾಗಿದೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಈ ವರ್ಷ ಅನೇಕ ಸಾಧನೆಗಳನ್ನು ಮಾಡಿರುತ್ತಾರೆ – ಶ್ರೀಮತಿ ರಾಧಿಕ ವೈ.ಟಿ ವಿ.ತಾ.ವಿ. ವಿಶ್ವವಿದ್ಯಾಲಯದಲ್ಲಿ 4ನೇಯ ರ್ಯಾಂಕ್ ಗಳಿಸಿರುತ್ತಾರೆ, ಕರ್ನಾಟಕದ ವಿ.ಜಿ.ಎಸ್.ಟಿ ಎರಡನೇಯ ಹಂತದಿಂದ 10 ಲಕ್ಷ ಅನುದಾನ, ನೈನ್ ವತಿಯಿಂದ 3ಲಕ್ಷ ಅನುದಾನ ಹಾಗೂ 2 ಕೆ.ಸಿ.ಎಸ್.ಟಿ ಪ್ರಾಜೆಕ್ಟ್ ಗಳಿಗೆ ಅನುದಾನ ಪಡೆದಿದ್ದು, ಮುಂದಿನ ಮೇ ತಿಂಗಳಲ್ಲಿ ಅಂತರಾಷ್ಟೀಯ ಮಟ್ಟದ ತಾಂತ್ರಿಕ ಸಮ್ಮೇಳನ ಜರುಗಲಿದೆ ಎಂದು ತಿಳಿಸುತ್ತಾ ಸಭೆಯನ್ನು ಸ್ವಾಗತಿಸಿದರು.
ಮಹಾವಿದ್ಯಾಲಯದ ಐಕ್ಯೂಎಸಿ ಕನ್ವಿನರ್ ಡಾ|| ವೀರಗಂಗಾಧರಸ್ವಾಮಿ , ಮಾತನಾಡುತ್ತಾ “ಇತ್ತೀಚಿನ ದಶಕಗಳಲ್ಲಿ ಭಾರತೀಯ ಸರ್ಕಾರದ ಎನ್.ಬಿ.ಎ ಮತ್ತು ನ್ಯಾಕ್ ಅಕ್ರೀಡಿಟೀಷನ್‍ಗಳು ಮುಖ್ಯವಾಗಿದ್ದು ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡುತ್ತಿರುವುದು ಹಾಗೂ ಪೆಟೆಂಟ್‍ಗಳು ಭಾರತೀಯರಿಂದ ಆಗಬೇಕೆಂದು ವಿಷೇಷ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಇಂತಹ ಒಳ್ಳೆಯ ಕಾರ್ಯಕ್ರಮ ನಡೆಸಿದ್ದು ತುಂಬಾ ಶ್ಲಾಘನೀಯ” ಎಂದರು.
ಉಪನ್ಯಾಸಕಿ ಶ್ರೀಮತಿ ಅಶ್ವಿನಿ ಮತ್ತು ಶ್ರೀಮತಿ ಅನಿತ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಪನ್ನೂಲ ವ್ಯಕ್ತಿಗಳಾದ- ಶ್ರೀಮತಿ ಪ್ರೀಯದರ್ಶಿನಿ ಸಿಂಗ್ ಐಐಟಿ ಖರಗ್ಪುರ್, ಶ್ರೀಮತಿ ಸರಸಿಜ ಪದ್ಮನಾಭನ್ ಕೆ.ಎಸ್.ಸಿ.ಎಸ್ಟಿ, ಐಐಎಸ್‍ಸಿ- ಬೆಂಗಳೂರು, ಶ್ರೀಮತಿ ಸಂಗೀತ ಮುರಳಿ .ಎಸ್ ಪ್ರೋಫೆಸರ್ ರಾಮಯ್ಯ ಐಪಿಆರ್‍ಸೆಲ್ ಬೆಂಗಳೂರು, ಬಿ. ವಿವೇಕ್ ಆನಂದ್ ಸಾಗರ್ ಕೆ.ಎಸ್.ಸಿ.ಎಸ್ಟಿ, ಐಐಎಸ್‍ಸಿ- ಬೆಂಗಳೂರು, ಡಾ|| ಗೀರೀಶ್ ಹೆಚ್ ಡೀನ್-ಅಕೆಡೆಮಿಕ್, ಡಾ|| ಎಸ್. ಪ್ರಭಾವತಿ, ವಿವಿಧ ವಿಭಾಗದ ಮುಖ್ಯಸ್ಥರು ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ಸಂಯೋಜಕರಾದ ಶ್ರೀಮತಿ ಅನಿತ, ಶ್ರೀಮತಿ ಅಶ್ವಿನಿ, ಚಂದ್ರಶೇಖರ್ ರೆಡ್ಡಿ .ಪಿ, ಶಂಭುಲಿಂಗನಗೌಡ ಇನ್ನೀತರರು ಭಾಗವಹಿಸಿದ್ದರು.
ವಿ.ವೀ.ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಗಳಾದ ಬಿ.ವಿ ಬಸವರಾಜ, ಸಹ ಕಾರ್ಯದರ್ಶಿಗಳಾದ ದರೂರು ಶಾಂತನಗೌಡ, ಖಜಾಂಚಿಗಳಾದ ಗೋನಾಳ್ ರಾಜಶೇಖರ್ ಗೌಡ ಶುಭ ಹಾರೈಸಿದರು.