ಜನೋತ್ಸವ ರದ್ದು : ಅಡುಗೆ ಹಾಸ್ಟೆಲ್‌ಗೆ ರವಾನೆ


ದೊಡ್ಡಬಳ್ಳಾಪುರು, ಜು. ೨೮- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಸಾಧನಾ ಸಮಾವೇಶ ರದ್ದುಗೊಂಡ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಸಿದ್ಧಪಡಿಸಲಾಗಿದ್ದ ಅಡುಗೆಯನ್ನು ಶಾಲೆ ಮತ್ತು ಹಾಸ್ಟೆಲ್‌ಗಳಿಗೆ ವಿತರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿತ್ತು. ಸಮಾವೇಶಕ್ಕೆ ಬರುವವರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನಕ್ಕೂ ಸಿದ್ಧತೆ ಮಾಡಿಕೊಳ್ಳಲಾಯಿತು.
ಇಲ್ಲಿನ ಶೆಟ್ಟಿಹಳ್ಳಿಯಲ್ಲಿ ಬೃಹತ್ ಜನೋತ್ಸವ ಆಯೋಜಿಸಲಾಗಿತ್ತು. ಆದರೆ ಪ್ರವೀಣ್ ಹತ್ಯೆಯಿಂದಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಸಾಧನಾ ಸಮಾವೇಶ ರಾತ್ರೋರಾತ್ರಿ ರದ್ದುಪಡಿಸಲಾಯಿತು.
ಮೊಸರನ್ನ, ಬಾದುಶಾ, ಪಲವ್‌ಗಳನ್ನು ಹಾಸ್ಟೆಲ್ ಮತ್ತು ಸಮೀಪದ ಶಾಲೆಗಳಿಗೆ ವಿತರಿಸಲಾಗಿದೆ. ಕಳೆದ ೧೦ ದಿನಗಳಿಂದ ಜನೋತ್ಸವ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಾಯಕರ ಫ್ಲೆಕ್ಸ್‌ಗಳು, ಕಟೌಟ್‌ಗಳನ್ನು ನಿಲ್ಲಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿತ್ತು. ಅದಕ್ಕಾಗಿ ಅಡುಗೆ ಸಿದ್ಧತೆ ಮಾಡಲಾಗಿತ್ತು.
ಕಾರ್ಯಕ್ರಮ ರದ್ದುಗೊಂಡ ಕಾರಣ ಸರ್ಕಾರದ ಅನುಮತಿ ಪಡೆದು ಶಾಲೆಗಳಿಗೆ ಮತ್ತು ಹಾಸ್ಟೆಲ್‌ಗಳಿಗೆ ಸಿದ್ದಪಡಿಸಲಾಗಿದ್ದ ಆಹಾರವನ್ನು ವಿತರಿಸಲಾಯಿತು. ಬಂದೊಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರು ರಾತ್ರಿಯೇ ವಾಪಸ್ ತೆರಳಿದ್ದಾರೆ. ವೇದಿಕೆಯಲ್ಲಿ ಜನರಿಲ್ಲದ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂತು.