
ಸಂಜೆವಾಣಿ ವಾರ್ತೆ
ಸಂಡೂರು:ಮೇ: 16; ಭಾರತೀಯ ಜನತಾ ಪಕ್ಷದಲ್ಲಿ ತತ್ವ ಸಿದ್ದಾಂತವಿಲ್ಲ, ಕೆಲವರು ಪಕ್ಷವನ್ನು ಹಾಳು ಮಾಡಲು ಸಂಕಲ್ಪ ಮಾಡುತ್ತಿದ್ದಾರೆ. ನಾನು ಕೆ.ಅರ್. ಪಿ. ಪಕ್ಷ ಸೇರ್ಪಡೆಗೊಂಡ ನಂತರದ 15 ರಿಂದ 20 ದಿನಗಳಲ್ಲಿ ಪಕ್ಷದಿಂದ ಸ್ಪರ್ಧಿಸಿ 32561 ಮತಪಡೆದಿದ್ದೇನೆ. ಕ್ಷೇತ್ರದ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಮತದಾರ ಪ್ರಭುವಿಗೆ ಕೃತಜ್ಞತೆ ಸಲ್ಲಿಸಬೇಕಾದುದು ನನ್ನ ಕರ್ತವ್ಯ. ಕೆಅರ್.ಪಿ. ಪಕ್ಷದ ಸಂಸ್ಥಾಪಕರಾದ ಜನಾರ್ಧನ ರೆಡ್ಡಿಯವರು ನಮಗೆ ದೊಡ್ಡ ಶಕ್ತಿ ಅವರ ಮಾರ್ಗದರ್ಶನದಲ್ಲಿಯೇ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕದಸಭಾ ಚುನಾವಣೆಗಾಗಿ ಕೆ.ಅರ್.ಪಿ ಪಕ್ಷ ಸಂಘಟನಯನ್ನು ಬಲಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಲು ಪ್ರಯತ್ನಿಸುತ್ತೇನೆ ಎಂದು ಕೆ.ಅರ್.ಪಿ. ಪಕ್ಷದ ಪರಾಜಿತ ಅಭ್ಯರ್ಥಿ ಕೆ.ಎಸ್. ದಿವಾಕರ್ ತಮ್ಮ ಮನದಾಳದ ಮಾಥುಗಳನ್ನಾಡಿದರು.
ಅವರು ಸ್ಕಂದಪುರ ಲೇಔಟ್ ನಲ್ಲಿಯ ತಮ್ಮ ನಿವಾಸಲದ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕ್ಷೇತ್ರದಲ್ಲಿ ವಿಜೇತರಾದ ಈ.ತುಕರಾಂ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ ಉತ್ತಮ ಬಸ್ ನಿಲ್ದಾಣವಿಲ್ಲ, ಶುದ್ದ ಕುಡಿಯವ ನೀರಿಲ್ಲ ಪೂರೈಕೆ ಸರಿಯಾಗಿಲ್ಲ, ಹೈಟೆಕ್ ಅಸ್ಪತ್ರೆ ಇಲ್ಲ, ಸಾರಿಗೆ ಸಮಸ್ಯೆ ಇದೆ, ಶಾಸಕರು ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾದುದು ಅನಿವಾರ್ಯವಿದೆ ಎಂದರು. ಪಕ್ಷದ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳಬಾರದು ಕಾರ್ಯಕರ್ತರ ಬೆಂಬಲಕ್ಕೆ ನಾನಿದ್ದೇನೆ ನಾನು ಕ್ಷೇತ್ರ ಬಿಟ್ಟು ಹೋಗದೇ ಕ್ಷೇತ್ರದಲ್ಲಿಯೇ ಇದ್ದು ಜನರ ನಿರಂತರ ಸೇವೆಯಲ್ಲಿ ನಾನಿದ್ದೇನೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತೆರೆದ ಮನಸ್ಸಿನಿಂದ ಕೆ.ಎಸ್. ದಿವಾಕರರವರು ಮಾತನಾಡಿದರು.
ಪಕ್ಷದ ತಾಲೂಕು ಅಧ್ಯಕ್ಷ ಪಿ.ವಿ. ಶ್ರೀನಿವಾಸಲು ಮುಖಂಡರಾದ ದೊಡ್ಡನಗೌಡ ಉಪಸ್ಥಿತರಿದ್ದರು.
One attachment • Scanned by Gmail