(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.03: ಮಾಜಿ ಸಚಿವ ಜನಾರ್ಧನರೆಡ್ಡಿ ಅವರ ಸಹೋದರ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಟೀಕೆ ಮಾಡಿದ್ದರ ಬಗ್ಗೆ ಇಂದು ಕೆ. ಆರ್.ಪಿ ಪಕ್ಷದ ಮುಖಂಡರು ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ನಡೆಸಿದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ ಅವರು ನಗರದಲ್ಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,. ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವರು ನಮ್ಮ ಪಕ್ಷದ ನಾಯಕ ಜಬಾರ್ಧನ ರೆಡ್ಡಿ ಅವರು ಅಕ್ರಮ ಮಾಡಿದ್ದಾರೆ. ಸ್ವಾರ್ಥಿ, ತಾನು ಬೆಳೆಯಲು ಇತರರನ್ನು ಬಳಸಿಕೊಂಡರು ಮುಂತಾಗಿ ಟೀಕಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಅವರನ್ನು ಖರೀದಿ ಮಾಡಿ ಕರುಣಾಕರ ರೆಡ್ಡಿ ಅವರನ್ನು ಗೆಲ್ಲಿಸಿಕೊಂಡಿತು ಎಂದು ಹೇಳಿದ್ದಾರೆ.
ಹಾಗದರೇ ಕರುಣಾಕರ ರೆಡ್ಡಿ ಗೆಲುವು ಅಕ್ರಮವೇ ಎಂದು ಪ್ರಶ್ನಿಸಿದರು. ಸೋಲಿನ ಹತಾಸೆಯಿಂದ ಏನೆಲ್ಲಾ ಮಾತನಾಡುತ್ತಿದ್ದಾರೆ ಎನಿಸುತ್ತದೆಂದರು.
ಅಕ್ರಮ ಮಾಡಿದ್ದಾರೆಂದು ಸೋಮಶೇಖರ ರೆಡ್ಡಿ ಅವರು ಹೇಳಿದ್ದಾರೆ. ಆದರೆ ಅವರೇ ಈ ಹಿಂದೆ ಜನಾರ್ಧನರೆಡ್ಡಿ ಅವರ ಬಗ್ಗೆ ಏನು ಹೇಳುತ್ತಿದ್ದರು ಎಂಬುದರ ಬಗ್ಗೆ ತೆಲುಗಿನಲ್ಲಿ ನೀಡಿದ ಸಂದರ್ಶನದ ಭಾಗವನ್ನು ಪತ್ರಕರ್ತರಿಗೆ ಪ್ರದರ್ಶಿಸಿದರು. ಅದರಲ್ಲಿ ಸೋಮಶೇಖರ ರೆಡ್ಡಿ ಅವರು ” ಜನಾರ್ಧನರೆಡ್ಡಿ ಲ್ಯಾಕ ಪೋತೆ ಶ್ರೀರಾಮುಲು ಚೇರಿ ಅಂದರಿನಿ ಪೆಂಚಾರು ಅದೇ ವಿದಂಗ
ತಮ್ಮಡು ನೆನ್ನನ್ನೀ ರಾಜಕೀಯಂಗ ಪೆದ್ದಗ ಪೆಂಚಾಡು. ಕುಟುಂಬಲೋ ಇಲಾ ಒಕರು ಉಂಟಾರು ಎಂದಿರುವ ಬಗ್ಗೆ ಪ್ರದರ್ಶಿಸಿದರು.
ಅಷ್ಟೇ ಅಲ್ಲದೆ ಜನಾರ್ಧನರೆಡ್ಡಿ ಅವರಿಂದ ಪಕ್ಷಕ್ಕೆ ಸಹಕಾರ ಆಗಿದೆಂದು ಬಿಜೆಪಿಯ ಈಶ್ವರಪ್ಪ, ಯಡಿಯೂರಪ್ಪ ಹೇಳಿದ್ದ ಮಾತುಗಳನ್ನು ಪ್ರದರ್ಶಿಸಿದರು.
ಸೋಲಿನ ಹತಾಶೆಯಿಂದ ಏನೆಲ್ಲಾ ಮಾತಮಾಡುವುದು ಸರಿಯಲ್ಲ. ನಾನು ಸೋತಿದ್ದೆ ನನಗ್ಯಾರು ನೀವು ಬಂದು ಧೈರ್ಯತುಂಬಲಿಲ್ಲ.
ಪಾಲಿಕೆ ಚುನಾವಣೆಯಲ್ಲಿ ಸ್ವತಃ ನಿಮ್ಮ ಮಗನನ್ನು ಗೆಲ್ಲಿಸಿಕೊಳ್ಳಲಾಗಿಲ್ಲ. ಹೀಗಿರುವಾಗ ನೀವು ನಮ್ಮ ಪಕ್ಷದ ನಾಯಕರ ಬಗ್ಗೆ ಟೀಕೆ ಸರಿಯಲ್ಲ. ನಮ್ಮ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಸೋತಿದ್ದಾರೆ. ಅವರೇನು ಹತಾಸೆಯಾಗಿ ಮಾತನಾಡಿಲ್ಲ ಎಂದರು. ಮುಂದಿನ ಚುನಾವಣೆಗೂ ಲಕ್ಷ್ಮೀ ಅರುಣಾ ಅವರನ್ನೇ ನಮ್ಮ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂದಿನಿಂದಲೇ ಸಂಘಟನೆ, ಹೋರಾಟ ಮಾಡಲಿದೆ. ನೀವು ಮಾಡಿ. ಅದು ಬಿಟ್ಟು ಪಕ್ಷದ ಮುಖಂಡರ ಮೇಲೆ ಆಧಾರ ರಹಿತ ಟೀಕೆ ಬೇಡ ಎಂದರು.
ಪಕ್ಷದ ಅಲಿಖಾನ್ ಮಾತನಾಡಿ, ಜನಾರ್ಧನರೆಡ್ಡಿ ಅವರಿಗೆ ಸೋಮಶೇಖರ ರೆಡ್ಡಿ, ಬ್ಲಾಕ್ ಮೇಲ್ , ಕುತಂತ್ರ ಮಾಡಿದ್ದನ್ನು ಹೇಳಬೇಕಾಗುತ್ತದೆ. ಜನಾರ್ಧನರೆಡ್ಡಿ ಅವರು ನನ್ನ ಹೆಜ್ಜೆಯಲ್ಲಿ ಹೆಜ್ಜೆ ಹಾಕಲು ಬಾರದವರು ಹೇಡಿಗಳೆಂದರೆ. ಇವರೇಕೆ ಕುಂಬಳಕಾಯಿ ಕಳ್ಳ ಎಂದರೆ ತಮ್ಮ ಹೆಗಲು ನೋಡಿಕೊಳ್ಳುತ್ತಾರೆಂದು ಟೀಕಿಸಿದರು.
ಬಳ್ಳಾರಿಯಲ್ಲಿ ಇವರು ಅಕ್ರಮ ಮಾಡುವುದನ್ನು ನಿಲ್ಲಿಸಲಾಗುತ್ತದೆ ಎಂದು. ಜನಾರ್ಧನರೆಡ್ಡಿ ಅವರು ಬಳ್ಳಾರಿಗೆ ಬರದಂತೆ ಮಾಡಿದ್ದೇ ಇವರು ಎಂದು ಆರೋಪಿಸಿದರು.
:ಮತ್ತೆ ಸಾಮೂಹಿಕ ವಿವಾಹ:
ಪಕ್ಷದ ವಕ್ತಾರ ಸಂಜಯ್ ಬೆಟಗೇರಿ ಅವರು ವರ ಮಹಾ ಲಕ್ಷ್ಮೀ ಹಬ್ಬದ ಅಂಗವಾಗಿ ಬರುವ ಅಗಷ್ಟ್ 24, 25 ರಂದು ಕೆಆರ್ ಪಿ ಪಕ್ಷದಿಂದ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ನೇತೃತ್ವದಲ್ಲಿ
ಬಳ್ಳಾರಿ ಜಿಲ್ಲೆಯ ಜನತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಬಳ್ಳಾರಿ ನಗರದಲ್ಲಿ ಹಮ್ಮಿಕೊಂಡಿದೆಂದು ತಿಳಿಸಿದರು.
ಬಿಜೆಪಿ ಸೋಲಿಗೆ ಕೆಅರ್ಪಿ ಪಕ್ಷ ಕಾರಣ ಅಲ್ಲ. ಅವರು ಮಾಡಿದ ತಪ್ಪುಗಳಿಂದ ಸೋತಿದ್ದಾರೆಂದರು.
ಸ್ಪರ್ಧೆ:
ಮುಂಬರುವ ಜಿಪಂ, ತಾಪಂ ಚುನಾವಣೆಗಳನ್ನು ಎದುರಿಸಲು ಪಕ್ಷ ಸಂಘಟನೆ ನಡೆಯಲಿದೆ. ಪಕ್ಷ ಯಾವುದೇ ಕಾರಣಕ್ಕೆ ಬೇರೆಯವರ ಜೊತೆ ಹೋಗಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರುಗಳಾದ ವಿ.ಎಸ್.ಮರಿದೇವಯ್ಯ, ಬಿ.ಕೆ.ಬಿಎನ್.ಮೂರ್ತಿ, ಹಂಪಿ ರಮಣ, ಮಲ್ಲಿಕಾರ್ಜುನ ಆಚಾರ್ ಮೊದಲಾದವರು ಇದ್ದರು.