ಜನಾರ್ಧನರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರ ನಾನು ರೆಡಿ ನೀವು ಸಿಗ್ನಲ್ ಕೊಡಿ


ನಡವಿ ವೀರಭದ್ರಗೌಡ
* ಬಿಜೆಪಿ ಸೇರಲು ತುದಿಗಾಲ‌ ಮೇಲೆ ನಿಂತಿರುವ ಜಿಜೆಆರ್
* ಕಾಂಗ್ರೆಸ್ ಗೆ ಹೋಗಲ್ಲ ಬಿಜೆಪಿ  ಸೇರಲು ಸಿದ್ದ
* ಬಂದರೆ ಸ್ವಾಗತ, ವರಿಷ್ಟರ ತೀರ್ಮಾನ
ಬಳ್ಳಾರಿ, ಜ.29: ಅಕ್ರಮ ಗಣಿಗಾರಿಕೆ, ಸಾಗಾಣಿಕೆ, ಸಂಪತ್ತು, ಹಣದ ವಹಿವಾಟಿನ ಆರೋಪ ಎದಿರಿಸುತ್ತಿರುವ, ಮಾಜಿ ಸಚಿವ, ಗಂಗಾವತಿ ಶಾಸಕ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಗಾಲಿ ಜನಾರ್ಧನರೆಡ್ಡಿ ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಂತಿದ್ದು. ಬಿಜೆಪಿ ವರಿಷ್ಟರ ಗ್ರೀನ್ ಸಿಗ್ನಲ್ ಗಾಗಿ ಕಾದು ಕುಳಿತಂತಿದೆ.
ನಾನು ಸತ್ತರೆ ನನ್ನ ಮೃತ ದೇಹದ ಮೇಲೆ ಬಿಜೆಪಿ ಬಾವುಟ ಇರುತ್ತೆ ಬಿಟ್ಟು ಬೇರಾವುದೇ ಪಕ್ಷದ ಬಾವುಟ ಅಲ್ಲ ಎಂದು ಈ ಹಿಂದೆ ನಗರದ ಮುನಿಷಿಪಲ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಗುಡಿಗಿದ್ದರು ಜನಾರ್ಧನರೆಡ್ಡಿ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಗಳ ಹಿನ್ನಲೆಯಲ್ಲಿ ಇಗ ಅವರದೇ ಪಕ್ಷ ಕಟ್ಟಿ ಶಾಸಕರಾಗಿದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಮಲ ಅರಳುವಂತೆ ಮಾಡುವಲ್ಲಿ ಕಾರಣರಾದ ಜನಾರ್ದ್ನ ರೆಡ್ಡಿಯವರು,
2006 ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ 150 ಕೋಟಿ ರೂ ಲಂಚದ ಆರೋಪ ಮಾಡಿ ಬಿಜೆಪಿಯಿಂದ ಅಮಾನತಾಗಿದ್ದರು.
ನಂತರ ಮತ್ತೆ ಪಕ್ಷ ಸೇರಿ, ರಾಜ್ಯದಲ್ಲಿ 2008 ರಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಪರೇಷನ್ ಕಮಲ ನಡೆಸಿ ಬಿಜೆಪಿ  ಅಧಿಕಾರಕ್ಕೆ ಬರಲು ಕಾರಣರಾಗಿದ್ದರು.
ಜೊತೆಗೆ ಸ್ವತಃ ತಾವು, ಸಹೋದರ ಕರುಣಾಕರ ರೆಡ್ಡಿ, ಶ್ರೀರಾಮುಲು ಸಚಿವರಾದರು. ಸೋಮಶೇಖರ ರೆಡ್ಡಿ ಅವರನ್ನು ಶಾಸಕರನ್ನಾಗಿ, ಕೆಎಂಎಪ್ ಅಧ್ಯಕ್ಷರನ್ನಾಗಿ ಮಾಡಿದ್ದಲ್ಲದೆ. ಜಿಲ್ಲೆಯ ಸಂಡೂರನ್ನು ಹೊರತು ಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿ ಕಮಲದ ಹೂ ಅರಳಿಸಿದ್ದರು.
ಬಳ್ಳಾರಿಯೇ ಅಂದು ರಾಜ್ಯದ ಶಕ್ತಿ ಕೇಂದ್ರ ಆಗಿತ್ತು. ಅಕ್ರಮ ಗಣಗಾರಿಕೆ, ಸಾಗಾಣಿಗೆ ಆರೋಪದ ಬಗ್ಗೆ. ಕಾಂಗ್ರೆಸ್ ನ‌ ಪಾದಯಾತ್ರೆ,  ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ನೀಡಿದ  ಅಕ್ರಮಗಣಿಗಾರಿಕೆ ಆರೋಪದ ವರದಿಯಿಂದ ಅಧಿಕಾರ ಹೋಯ್ತು, ಜೊತೆಗೆ 2011 ರ ಸೆ 5 ರಂದು ಸಿಬಿಐನಿಂದ ಬಂಧಿತರಾಗಿ, ಐದು ವರ್ಷಗಳ‌ಕಾಲ ಜೈಲು ವಾಸ ಅನುಭವಿಸಿ, ಮತ್ತೆ ಬಿಜೆಪಿ ಸೇರಲು ಪ್ರಯತ್ನಿಸಿದರು. ಇದಕ್ಕೆ ರಾಜ್ಯದಲ್ಲೂ ವಿರೋಧ ಕಂಡು ಬರಲಿಲ್ಲ.
ಆದರೆ ಬಿಜೆಪಿ ವರಿಷ್ಟರಲ್ಲಿ ಒಬ್ಬರಾಗಿರುವ ಅಮಿತ್ ಷಾ ಅವರು 2018 ರಲ್ಲಿ ಮೈಸೂರಿನಲ್ಲಿ ಜಬಾರ್ಧನ ರೆಡ್ಡಿ ಬಿಜೆಪಿಗೆ ಬರುವ ಬಗ್ಗೆ ಕೇಳಿದ್ದಕ್ಕೆ ಅವರಿಗೂ ನಮಗೂ ಸಂಬಂಧ ಇಲ್ಲ ಎಂದಿದ್ದರು. 2023 ರ ವಿಧಾನ ಸಭಾ ಚುನಾವಣೆಯ ಮುನ್ನ ಸಂಡೂರಿನಲ್ಲಿ ನಡೆದ ಆಂತರಿಕ ಸಭೆಯಲ್ಲಿ ಜನಾರ್ಧನರೆಡ್ಡಿ ಅವರನ್ನು ಪಕ್ಷಕ್ಕೆ ಸೇತಿಸಿಕೊಳ್ಳುವ ಪ್ರಸ್ತಾವನೆ ಬಗ್ಗೆ ಆ ಮಾತು ಇಲ್ಲಿ ಬೇಕಿಲ್ಲ ಎಂದಿದ್ದರಂತೆ.
ಅದಕ್ಕಾಗಿ ರೆಡ್ಡಿ ಕೆಆರ್ಪಿ ಕಟ್ಟಿ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೆಲೆ ಇಲ್ಲದಂತೆ ಮಾಡುವ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆಗೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವ ಬಗ್ಗೆ ತಿಳಿಸಿದ್ದರು.
ಸ್ವಾಭಿಮಾನಕ್ಕೆ ಧಕ್ಕೆ ಎಂದು ಪಕ್ಷ ಬಿಟ್ಟಿದ್ದ ಜಗದೀಶ್ ಶೆಟ್ಟರ ಅವರನ್ನು ಮರಳಿ ಪಕ್ಷಕ್ಕೆ ಕರೆತಂದ ಮೇಲೆ,   ಬಳ್ಲಕಾರಿ, ಕೊಪ್ಪಳ, ರಾಯಚೂರು ಕ್ಷೇತ್ರಗಳ ಬಿಜೆಪಿಗೆ ತೊಡರುಗಾಲಾಗಬಹುದಾದ ಗಾಲಿಯನ್ನು ಮತ್ತೆ ಕ್ಷಕ್ಕೆ ಕರೆತರುವ ಪ್ರಯತ್ನ ರಾಜ್ಯದ ಹಲವು ಮುಖಂಡರದ್ದಾಗಿದೆಯಂತೆ.
ಮತ್ತೆ ಈಗ ಸ್ವತಃ ಜನಾರ್ಧನರೆಡ್ಡಿ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ, ಬಿಜೆಪಿಗೆ ಹೋಗಲು ಸಿದ್ದ ಎಂದಿದ್ದಾರೆ.  ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ರೆಡ್ಡಿ ಬಂದರೆ ಸ್ವಾಗತ ತೀರ್ಮಾನ ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು ಎಂದಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನ‌ ನಾಯಕ, 150 ಕೋಟಿ ರೂ ಲಂಚ ಆರೋಪದ  ಹೆಚ್.ಡಿ. ಕುಮಾರಸ್ವಾಮಿ ಜೊತೆ ಬಿಜೆಪಿ ಸೇರುವ ಬಗ್ಗೆ ಪ್ರಸ್ತಾಪ ನಡೆಸಿದ್ದಾರೆಂಬ ಮಾತುಗಳು ಸಹ ಕೇಳಿಬರುತ್ತಿದೆ.
ಒಟ್ಟಾರೆ ಜನಾರ್ಧನರೆಡ್ಡಿ ಬಿಜೆಪಿ ಸೇರಲು ಹೈಕಮಾಂಡ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ ಎನ್ನಬಹುದು.