ಜನಾರ್ಧನರೆಡ್ಡಿ ಪಕ್ಷದಿಂದ ಬಿಜೆಪಿಗೆ ಧಕ್ಕೆ ಇಲ್ಲ: ಜಗದೀಶ್ ಶೆಟ್ಟರ್

ಬಳ್ಳಾರಿ: ರಾಜ್ಯದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕೆಅರ್ ಪಿ ಪಕ್ಷದಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬಿರಲ್ಲ. ನನ್ನ ಅನುಭವದಲ್ಲಿ ಹೊಸ ಪಕ್ಷದಿಂದ ಜನತೆ ಏನು ಪರಿಣಾಮ ಆಗಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಳ್ಳಾರಿಯಲ್ಲಿಂದು ಹಮ್ಮಿಕಂಡಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದ ಜನತೆ ಹೆಚ್ಚನ ಮಹತ್ವ ನೀಡಲ್ಲ ಎಂದರು.
ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತ, ಮತ್ತೆ ಶಾಸಕ, ಮುಖ್ಯ ಮಂತ್ರಿ ಆಗ್ಬೇಕೆಂದು ರಾಜಕೀಯದಲ್ಲಿ ಇರುವೆನೆಂದು ಭಾವಿಸಬೇಕಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯ ಮಂತ್ರಿ ಯಾರಾಗ್ಬೇಕು ಅಂತಾ ಪಕ್ಷವೇ ನಿರ್ಧಾರ ಮಾಡುತ್ತದೆಂದರು.

ಯಾರೇ ಆಗಲಿ ಒಂದು ಸಮಯದಾಯದ ಬಗ್ಗೆ ಮಾತಾಡೋದು ಸರಿಯಲ್ಲ.
ಲಿಂಗಾಯತ ಸಮಯದಾಯ ಎಲ್ಲಿದ್ದಾರೆ ಯಾರ ಬೆಂಬಲಕ್ಕೆ ಇದ್ದಾರೆಂದು ಗೊತ್ತಿದೆ. ಕಳೆದ 15 ವರ್ಷದಿಂದ ಎಲ್ಲ ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಪರವಾಗಿದೆ.
ಆ ಹಿನ್ನಲೆಯಲ್ಲಿ ಮಾಜಿ ಎಂಎಲ್‌ಸಿ ರಘು ಆಚಾರ್ ವಿವಾದಾತ್ಮಕ ಹೇಳಿಕೆ ನೀಡಿರಬಹುದು. ಒಂದು ಸಮಾಜದ ಬಗ್ಗೆ ಅವರು ಕೀಳುಮಟ್ಟದಲ್ಲಿ ಮಾತಾಡೋದು ಸರಿಯಲ್ಲ ಎಂದರು‌‌