ಜನಾರ್ಧನರೆಡ್ಡಿ ಜನನಾಯಕ: ಲಕ್ಷ್ಮೀಅರುಣಾ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.11: ನನ್ನ ಪತಿ ಜನಾರ್ಧನರೆಡ್ಡಿ ಮಾಜಿ ಸಚಿವರು. ಆಗ ಅವರು ನಗರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನಿಜವಾದ ಜನ ನಾಯಕ ಎಂಬುದನ್ನು ಸಾಕ್ಷೀಕರಿಸಿವೆ ಎಂದು ಕೆಆರ್ ಪಿ ಪಕ್ಷದ ನಾಯಕಿ ಲಕ್ಷ್ಮೀ ಅರುಣಾ ಹೇಳಿದರು.
ಅವರು ಇಂದು ಜನಾರ್ಧನ ರೆಡ್ಡಿ ಅವರ 56 ನೇ ಜನ್ಮದಿನದ ಅಂಗವಾಗಿ ನಗರದ ಅವರ ನಿವಾಸದ ಬಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅವರು ನಗರದಲ್ಲಿ  ಮಾಡಿದ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ. ಉಳಿದಿರುವ ಕೆಲಸಗಳನ್ನು ಮಾಡಲು ಅವರನ್ನು ಬೆಂಬಲಿಸಿ. ಬುದ್ದಿವಂತಿಕೆ ನನ್ನ ಗಂಡನಿಗೆ ಬಿಟ್ಟರೆ ಬೇರೆ ಯಾರಿಗೂ ಇಲ್ಲ. ಜನಾರ್ಧನರೆಡ್ಡಿ ಅವರನ್ನು ಜನರಿಂದ ದೂರಮಾಡಲು ಯಾರಿಂದಲೂ ಆಗಲ್ಲ‌. ಕುತಂತ್ರದಿಂದ ಕೇಸು ಹಾಕಿಸಿ ಬಳ್ಳಾರಿಗೆ ಬರದಂತೆ ಮಾಡಿರುವುದು ಬಹಳ ದಿನ ನಡೆಯದು ಎಂದರು.
ರೆಡ್ಡಿ ಪುತ್ರಿ ಜನಾರ್ಧನರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮೊದಲ ಬಾರಿಗೆ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಅವರೇ ಕಟ್ಟಿದ ಸಾಮ್ರಾಜ್ಯದಿಂದ ದೂರ ಇರುವ ಪರಿಸ್ಥಿತಿ ಬಂದಿದೆ ಎಂದರು.
ಅವರು ಯಾವಾಗಲೂ ಬಳ್ಳಾರಿಗೆ ಬರಲು ತವಕಿಸುತ್ತಿದ್ದಾರೆ. ತಂದೆ, ತಾಯಿ ಜೊತೆ ನಾನೂ ಇರುತ್ತೇನೆ. ನಾವೆಲ್ಲ ಒಗ್ಗಟ್ಟಿನಿಂದ ಚುನಾವಣೆ ಎದಿರಿಸೋಣ. ನಿಂತಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಮನೆ ಮನೆಗೆ ಹೋಗಿ ತಿಳಿಸಿ ಮತ ಕೇಳೋಣ. ನನ್ನ ತಂದೆ ಒಬ್ಬಂಟಿಗ ಅಲ್ಲ, ನೀವೆಲ್ಲ ಅವರ ನಮ್ಮ‌ಜೊತೆ ಇದ್ದೀರೆಂದು ಭಾವಿಸುವೆ ಎಂದರು.
ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಾ ವರ್ಗದ, ಸಮುದಾಯದ, ಜಾತಿಯ, ಧರ್ಮೀಯರ ಅಭಿವೃದ್ಧಿಗೆ ಪೂರಕವಾಗಿರಲಿದೆಂದರು. ಸಮಾರಂಭದಲ್ಲಿ  ಕಲ್ಯಾಣ  ಮಠದ ಶ್ರೀಗಳು ಉದ್ಘಾಟಿಸಿ ಮಾತನಾಡಿ, ರೆಡ್ಡಿ ಅವರ ಕಾರ್ಯಚಟುವಟಿಕೆ, ಈ ಹಿಂದೆ ಸಚಿವರಾದಾಗ ಕೈಗೊಂಡ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು.
ನಂದಿಪುರ ಸೇರಿದಂತೆ ವಿವಿಧ ಮಠಾಧೀಶರು, ಮುಸ್ಲೀಂ ಸಮುದಾಯದ ಗುರುಗಳು, ಓಎಂಸಿ ಎಂಡಿ ಶ್ರೀನಿವಾಸರೆಡ್ಡಿ ಪಾಲ್ಗೊಂಡಿದ್ದರು.
ದರಪ್ಪ ನಾಯಕ, ಹಂಪಿ ರಮಣ ಸೇರಿದಂತೆ ಅನೇಕ ಜನ ಗ್ರಾಪಂ ಸದಸ್ಯರು, ಮುಖಂಡರು ರೆಡ್ಡಿ ಅವರ ಪಕ್ಷಕ್ಕೆ ಸೇರಿದರು. ಸಂಜಯ್ ಬೆಟಗೇರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಸಮಾರಂಭದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ತಂಪು ಪಾನಿಯ, ಭರ್ಜರಿ ಊಟದ ವ್ಯವಸ್ಥೆ ಮಾಡಿತ್ತು. ಒಟ್ಟಾರೆ ಕಾರ್ಯಕ್ರಮ ನೋಡಿದರೆ. ನಿನ್ನೆ ಸಂಡೂರಿನಲ್ಲಿ  ಸಚಿವ ಶ್ರೀರಾಮುಲು ಅವರು ಹೇಳಿದಂತೆ ನಮ್ಮ ಪಕ್ಷದ ಜೊಳ್ಳುಗಳೆಲ್ಲ ಅಲ್ಲಿಗೆ ಹೋದರೆ ಹೋಗಲಿ ಎಂಬ ಮಾತು ಗುನುಗುವಂತಿತ್ತು.
 ಬೈಕ್ ಱ್ಯಾಲಿ
ಜನಾರ್ದನ ರೆಡ್ಡಿ ಅವರ  56 ನೇ ಹುಟ್ಟು ಹಬ್ಬದ ಹೆಸರಿನಲ್ಲಿ ಇಂದು ನಗರದಲ್ಲಿ ರೆಡ್ಡಿ  ಅಭಿಮಾನಿಗಳು ಬೈಕ್ ಱ್ಯಾಲಿ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಬೈಕ್ ಱ್ಯಾಲಿಗೆ ಚಾಲನೆ ನೀಡಿದ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ಸ್ವತಃ ಆಕ್ಟೀವಾ ಗಾಡಿಯಲ್ಲಿ ಕುಳಿತು ಸಾಗಿ  ಱ್ಯಾಲಿಗೆ ಹುಮ್ಮಸ್ಸು ತುಂಬಿದರು. ಕೆಆರ್ ಪಿ  ಪಕ್ಷದ ಧ್ವಜ ಹಿಡಿದು ಕಾರ್ಯಕರ್ತರು ಱ್ಯಾಲಿಯಲ್ಲಿ ಸಾಗಿದರು.
 ಅಭಿಷೇಕ:
ಕಾರ್ಯಕ್ರಮ ಆಯೋಜಿಸಿದ್ದ ರೆಡ್ಡಿ ನಿವಾಸದ ಬಳಿ ನೂರು ಅಡಿ ಎತ್ತರದ ರೆಡ್ಡಿಯ ಬೃಹತ್ ಕಟೌಟ್ ಗೆ  ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದರು.
ನಗರ ಮತ್ತು ಗ್ರಾಮೀಣ ಕ್ಷೇತ್ರದ  ಕೌಲ ಬಜಾರ್ ವ್ಯಾಪ್ತಿಯ ಹತ್ತು. ಕೀ ಮೀ ಬೈಕ್ ಱ್ಯಾಲಿ ನಡೆಸಲಾಯಿತು.
ಱ್ಯಾಲಿಗೆ ಬಂದವರಿಗೆ 200 ರೂ ಪೆಟ್ರೋಲ್
ಜನಾರ್ದನ ರೆಡ್ಡಿ ಅವರ  56 ನೇ ಬರ್ತಡೇ ಹಿನ್ನಲೆಯಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡ ಬೈಕ್ ಸವಾರರಿಗೆ ನಗರದ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ 200 ರೂ ಪೆಟ್ರೋಲ್  ಹಾಕಿಸುವ ವ್ಯವಸ್ಥೆ ಮಾಡಿತ್ತು
ಫ್ರೀ ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್ ಸವಾರರು ಮುಗಿ ಬಿದ್ದಿದ್ದರು.
ಆಕ್ಸಿಸ್ ಬ್ಯಾಂಕ್ ಪಕ್ಕದ ಪೆಟ್ರೋಲ್ ಬಂಕ್‌ನಲ್ಲಿ ಸಾಲುಗಟ್ಟಿ ನಿಂತಿದ್ದ ಬೈಕ್‌ಗಳು. 600 ಕ್ಕೂ ಹೆಚ್ಚು ಬೈಕ್‌ಗಳಿಗೆ ಉಚಿತ ಪೆಟ್ರೋಲ್ ವ್ಯವಸ್ಥೆ ಕಂಡು ಬಂತು. ನಗರದ  ಮೂರು ಪೆಟ್ರೋಲ್ ಬಂಕ್‍ಗಳಲ್ಲಿ ಉಚಿತ ಪೆಟ್ರೋಲ್ ವಿವರಣೆ ಮಾಡಿದೆ.