ಜನಾರ್ಧನರೆಡ್ಡಿ ಕಾಲದ ಅಭಿವೃದ್ಧಿ ನೋಡಿ ಕೆ.ಆರ್.ಪಿ.ಗೆ ಮತ ನೀಡಿ: ಶಾಂತನಗೌಡ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.28: ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜನಾರ್ಧನರೆಡ್ಡಿ ಅವರ ಕಾಲದಲ್ಲಿ ನಗರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಶಾಶ್ವತವಾಗಿರುವುದನ್ನು ಪರಿಗಣಿಸಿ ಜನತೆ ಕೆಆರ್ ಪಿಗೆ ಮತ ನೀಡಬೇಕೆಂದು ವೀರಶೈವ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದರ್ಶಿ ದರೂರು ಶಾಂತನಗೌಡ ಹೇಳಿದ್ದಾರೆ
ಅವರು ಇಂದು ನಗರದಲ್ಲಿನ ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ಈವರಗೆ ಕಾಂಗ್ರೆಸ್ ಪಕ್ಷದಲ್ಲಿದ್ದ ನಾನು ಈಗ ಕೆಆರ್ ಪಿ ಪಕ್ಷ ಸೇರಿದ್ದಾನೆಂದ ಅವರು
ಚಿಕ್ಕವಯಸ್ಸಿನ ಸುರೇಶ್ ಬಾಬು ಅವರನ್ನು ಶಾಸಕರನ್ನಾಗಿ ಮಾಡಿದರು, ನಗರ ಸಭೆ ಸದಸ್ಯರಿದ್ದ ಶ್ರೀರಾಮುಲು ಅವರನ್ನು  ಶಾಸಕರು, ಸಚಿವರನ್ನಾಗಿ ಮಾಡಿದರು. ನಗರದ ಹಲವು ರಸ್ತೆಗಳ ಅಭಿವೃದ್ಧಿಗೆ ಸಹಕರಿಸಿದ್ದಾರೆ.  ಅವು ಇಂದಿಗೂ ಸಾಕ್ಷಿಯಾಗಿವೆ. ಟೋಲ್ ಇಲ್ಲದೆ ನಗರದಿಂದ ಆಂದ್ರಪ್ರದೇಶದ ಗಡಿ ವರೆಗೆ ಅವರು ರಸ್ತೆ ಅಭಿವೃದ್ಧಿ ಮಾಡಿಸಿದರು ಎಂದರು. ವಿಮಾನ‌ನಿಲ್ದಾಣ, ಸುಸಜ್ಜಿತ ಸ್ಟೇಡಿಯಂ ಸೇರಿದಂತೆ ಇನ್ನಿತರ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡಿದ್ದರು. ಅವರು ಆಧಿಕಾರ ಕಳೆದುಕೊಂಡಿದ್ದರಿಮನದ ಆ ಯೋಜನೆಗಳು ಈವರಗೆ ಈಡೇರಿಲ್ಲ. ಅದಕ್ಕಾಗಿ ಅಭಿವೃದ್ಧಿಗಾಗಿ ಕೆಆರ್ ಪಿ ಅಭ್ಯರ್ಥಿ ಲಕ್ಷೀ ಅರುಣ ಅವರಿಗೆ ಮತ ನೀಡುವಂತೆ ಪ್ರಚಾರ ಮಾಡಲಿದೆಂದರು. ವೀರಶೈವ ಸಂಘದ ಹಲವು ಕಾರ್ಯಗಳಿಗೂ ಜನಾರ್ಧನರೆಡ್ಡಿ ರೆಡ್ಡಿ ಅವರು ಸಹಕಾರ ಮಾಡಿದ್ದಾರೆ‌ಂದರು.
ಪಕ್ಷದ ಜಿಲ್ಲಾ ಅಧ್ಯಕ್ಷ  ಗೋನಾಳ್ ರಾಜಶೇಖರ ಗೌಡ ಮಾತನಾಡಿ, ಯಾರೋ ಕೆಲವರು ಒಬ್ಬರ ಪರವಾಗಿ ಸುದ್ದಿಗೋಷ್ಡಿ ನಡೆಸಿದ ಮಾತ್ರಕ್ಕೆ ವೀರಶೈವ ಸಮಾಜವೆಲ್ಲ ಅವರಿಗೆ ಬೆಂಬಲ ಇದೆ ಎಂದಲ್ಲ. ವೀರಶೈವ ಸಮಾಜವೆಲ್ಲ ಒಂದೇ ಪಕ್ಷದ ಪರ ಇಲ್ಲ. ಎಲ್ಲಾ ಪಕ್ಷದಲ್ಲೂ ಸಮುದಾಯದ ಮುಖಂಡರಿದ್ದಾರೆ. ಸಮಾಜಕ್ಕೆ ಯಾರಿಂದ ಸಹಕಾರ ಆಗಬಹುದು ಎಂದು ಅರಿತು ಮತ ನೀಡಲಿದ್ದಾರೆಂದರು.
ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ ಮಾತನಾಡಿ, ಅಧಿಕಾರ ಇದ್ದಾಗ ಎಲ್ಲರೂ ಅಕ್ರಮ ಮಾಡಿದವರೇ, ಜನಾರ್ಧನರೆಡ್ಡಿ,  ಅವರ ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪವನ್ನು ಸಮರ್ಥಿಸಿಕೊಂಡರು.
ಪಕ್ಷದ ಮುಖಂಡರುಗಳಾದ ಬಸವೇಶ್ವರ ನಗರದ ದಿವಾಕರ್, ಜಾನೆಕುಂಟೆ ಸಿದ್ದಲಿಂಗಪ್ಪ,  ಮೊದಲಾದವರು ಇದ್ದರು.