ಜನಾರ್ಧನರೆಡ್ಡಿ ಅರ್ಥಾತ್‌ ಬಾಂಬ್, ಸೋಮಶೇಖರ ರೆಡ್ಡಿ ಗೆಲುವು ಕಷ್ಟ: ರಾಮಲಿಂಗಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ರೆಡ್ಡಿ ಸಾಮಾಜ್ಯದ ವಿರುದ್ದ ಬಿಜೆಪಿ ಪಕ್ಷದ ಜಿಲ್ಲೆಯ ಹಿರಿಯ ಮುಖಂಡ ಕೆ.ಎ.ರಾಮಲಿಂಗಪ್ಪ ಕಿಡಿಕಾರಿದ್ದು ಮಾಜಿ ಸಚಿವ ಜನಾರ್ಧನರೆಡ್ಡಿ ಸಹೋದರರ ವಿರುದ್ದ ಹರಿಹಾಯ್ದಿದ್ದಾರೆ. 

ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು. ನಾನು ಪಕ್ಷದ ಪರ, ರೈತರ ಪರ ನಡೆಸಿದ ಹೋರಾಟವೇ ನನಗೆ ಹೆಸರು ತಂದುಕೊಟ್ಟಿದೆ. 1984 ರಿಂದ ಪಕ್ಷದಲ್ಲಿರುವೆ. 1994  ರಲ್ಲಿ ಸಿರುಗುಪ್ಪದಿಂದ, 2004  ರಲ್ಲಿ  ಕುರುಗೋಡು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತು. ನಂತರ 2005 ರಲ್ಲಿ ಜಿಪಂ ಕೊರ್ಲಗುಂದಿ ಕ್ಷೇತ್ರದಿಂದ ಆಯ್ಕೆಯಾಗಿ  ಜಿಪಂ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದೆ.  ನಂತರ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದೆ. ಬೆಂಗಳೂರಿನಲ್ಲಿ ಪಾಳು ಬಿದ್ದಿದ್ದ ಪರಿಹಾರ ಕೇಂದ್ರವನ್ನು ಸರಿಪಡಿಸಿದೆ.ಪಕ್ಷಕ್ಕಾಗಿ ನಿಷ್ಟಾವಂತನಾಗಿ ದುಡಿದಿರುವೆ.

ಕಳೆದ ವರ್ಷ ಕನಕ‌ ಜಯಂತಿಯಂದು ಶಾಸಕ ಸೋಮಶೇಖರ ರೆಡ್ಡಿ ರಾಮಲಿಂಗಪ್ಪನವರಿಂದಲೇ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ  ಎಂದಿದ್ದರು.  ಆದರೆ ಬುಡಾ ಅಧ್ಯಕ್ಷನಾಗಿ ನೇಮಕ‌ ಮಾಡಿ ಸಚಿವ ಆನಂದ್ ಸಿಂಗ್ ಅವರು ಅಧಿಕಾರ ಸ್ವೀಕರಿಸಲು ಸೂಚಿಸಿದರು. ತಕ್ಷಣ ಸೋಮಶೇಖರ ರೆಡ್ಡಿ ಅವರಿಗೆ ಕರೆ ಮಾಡಿ ತಿಳಿಸಿದೆ. ಶುಭಾಷಯ ಕೋರಿ ಸಂತಸ ವ್ಯಕ್ತಪಡಿಸಿದ್ದರು ಅವರು, ಆದರೆ  ಮರು ದಿನ ಸಂಜೆ ಒಳಗೆ ಅದೇ ಸೋಮಶೇಖರ ರೆಡ್ಡಿ ಅವರು. ಯಡಿಯೂರಪ್ಪ ಅವರ ಬೆನ್ನು ಬಿದ್ದುಪಾಲಿಕೆ ಚುನಾವಣೆ ನೆಪ ಹೇಳಿ ನನ್ನನ್ನು ತೆಗೆಸಿದರು.  

ಅದಕ್ಕಾಗಿ ನಾನು ಹೇಳುವೆ ಈ ಜನಾರ್ಧನರೆಡ್ಡಿ ಅವರು ಅರ್ಥಾತ್ ಬಾಂಬ್ ರೆಡ್ಡಿ ಎಂದು. ಯಾಕೆಂದರೆ ಕಳೆದ ಕೆಲ ದಿನಗಳ ಹಿಂದೆ ಜನಾರ್ಧನರೆಡ್ಡಿ ಅವರು  ಕಾಂಗ್ರೆಸ್ ನವರಿಗಿಂತ ಬಿಜೆಪಿಯವರಿಂದ ನನಗೆ ಸಮಸ್ಯೆ ಎಂದು ಹೇಳಿದರು.

ಈ ಬಗ್ಗೆ ಸಚಿವ ಶ್ರೀರಾಮುಲು ಅವರನ್ನು ಕೇಳಿದರೆ ನನಗೆ ಇದು ಗೊತ್ತಿಲ್ಲ ಎನ್ನುತ್ತಾರೆ. ಈ ಹಿಂದೆ ಯಡಿಯೂರಪ್ಪ ಅವರಲ್ಲಿ ಕಣ್ಣೀರು ತರಿಸಿದವರು ಇವರು.

ಸುಷ್ಮಾ ಸ್ವರಾಜ್ ಇಲ್ಲಿಂದ ಸ್ಪರ್ಧೆ ಮಾಡಿದ್ದರಿಂದ ಇಲ್ಲಿ ಪಕ್ಷ ಬಲವರ್ಧನೆಗೆ ಕಾರಣವಾಯ್ತೇ ಹೊರತು ಇವರಿಂದಲ್ಲ. ಇವರ ಅಕ್ರಮ ಗಣಿಗಾರಿಕೆ ಮೂಲಕ ಸುಷ್ಮಾ ಸ್ಬರಾಜ್ ಅವರು ನೊಂದು ಬಳ್ಳಾರಿಗೆ ಬರದಂತೆ ಮಾಡಿದರು.  ಮಾಜಿ‌ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ 150 ಕೋಟಿ ರೂ ಭ್ರಷ್ಟಾಚಾರ ಎಂದು ಹೇಳಿದರು. ಏನಾಯ್ತು. ಕುಮಾರಸ್ವಾಮಿ ಮತ್ತೆ ಮುಖ್ಯ ಮಂತ್ರಿ ಆದರು. ಇವರೇನಾದ್ರೂ ಎಂದು ಪ್ರಶ್ನಿಸಿದರು. 

ಪಕ್ಷದಿಂದ  ಈಗ ಇವರು ಎಲ್ಲ ಪಡೆದು ಈಗ ನನ್ನ ಬೆಂಬಲಕ್ಕಿಲ್ಲ ಎನ್ನುತ್ತಿದ್ದಾರೆ ಇದು ಎಷ್ಟು ಸರಿ. ಪಕ್ಷದಿಂದ ಒಂದೇ ಕುಟುಂಬ ಯಾಕೆ ಎಲ್ಲಾ ಸ್ಥಾನಮಾನ‌ ಪಡೆಯಬೇಕು ಎಂದರು. 

ಬುಡಾ ಅಧ್ಯಕ್ಷರನ್ನು ಜಾತಿ ಆಧಾರದ ಮೇಲೆ ಮಾಡಿದ್ದು ಸರಿಯಲ್ಲ ಕಾರ್ಯಕರ್ತರನ್ನು ಪರಿಗಣಿಸಲಿಲ್ಲ ಎಂದರು.

ಕಷ್ಟ ಇದೆ: 
ನಗರ ಶಾಸಕ ಸೋಮಶೇಖರ ರೆಡ್ಡಿ ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಗೆಲ್ಲವುದು ಕಷ್ಟ ಇದೆ. ಅದಕ್ಕಾಗಿ ಈ ಬಾರಿ ಲಿಂಗಾಯತ, ಕುರುಬ,ಕಮ್ಮ  ಇಲ್ಲಾ ಬಲಿಜ‌ ಸಮಾಜದಿಂದ ಪಕ್ಷಕ್ಕೆ ದುಡದವರಿಗೆ ಟಿಕೆಟ್ ನೀಡಿದರೆ ಒಳಿತು.  ಎಂದ ರಾಮಲಿಂಗಪ್ಪ ಅವರು ನಾನೂ ಸ್ಪರ್ಧೆಗೆ ರೆಡಿಯಾಗಿರುವೆಂದರು. 
ಕಾರ್ಯಕರ್ತರನ್ನು ರಕ್ಷಿಸಿ, ಕುಟುಂಬ ರಾಜಕೀಯ ನಿಲ್ಲಿಸಿ, ಬಿಜೆಪಿಯನ್ನು ಗೆಲ್ಲಿಸಿ ಎಂದು ನನ್ನ‌ ಮನವಿ ಎಂದರು. 

ಬಿಜೆಪಿಯಿಂದಲೇ ನನಗೆ ತೊಂದರೆ ಎನ್ನುವ ಜನಾರ್ಧನರೆಡ್ಡಿ ಅವರು ಏನು ತೊಂದರೆ ಎಂಬುದನ್ನು ಹೇಳಲಿ ಎಂದರು.

ಈ ರೀತಿ ರೆಡ್ಡಿ ಸಹೋದರರ ಬಗ್ಗೆ ಅನೇಕರಿಗೆ ಅಸಮಾಧಾನ ಇದ್ದರೂ ಹೇಳಲು ಧೈರ್ಯ ಇಲ್ಲ. ನನಗೆ ಭಯವಿಲ್ಲ ಅದಕ್ಕಾಗಿ ಪಕ್ಷದ ವಿರುದ್ದ ಹೇಳಿಕೆ ನೀಡಿದ ರೆಡ್ಡಿ ಅವರ ಬಗ್ಗೆ ಇದ್ದುದ್ದನ್ನು ಮಾತನಾಡಿರುವೆ ಎಂದರು. 

ವಿಜಯನಗರ ಜಿಲ್ಲೆ ಮಾಡುವಾಗ 
ವಿಧಾನಸಭೆಯಲ್ಲಿ ಬಾಯಿಮುಚ್ಚಿ ಕುಳಿತು. 
ವಿಜಯನಗರ ಜಿಲ್ಲೆ ಆಗಲು ನೀವೇ ಕಾರಣ. ಬೇಡ ಎಂದರೆ ನೀವು ಆದಿನ‌ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿತ್ತು. ಅದು ಬಿಟ್ಟು ಬಳ್ಳಾರಿಯಲ್ಲಿ ಮಾಧ್ಯಮಗಳಲ್ಲಿ ಮಾತಾಡಿ ಕೈತೊಳೆದುಕೊಂಡರು. 

ಪಕ್ಷಕ್ಕೆ ಡ್ಯಾಮೇಜ್ ಮಾಡುವವರ ಮೇಲೆ ಪಕ್ಷ ಕ್ರಮ ಜರುಗಿಸಬೇಕು. ರಾಜ್ಯ ನಾಯಕರು ಇಲ್ಲಿಗೆ ಬಂದು ಒಂದು ಮನೆಯಲ್ಲಿ ಕುಳಿತು ಮಾತನಾಡಬೇಡಿ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ  ಅಂಡ್ರಸ್ಟಾಂಡ್ ರಾಜಕಾರಣ ನಡೆಯುತ್ತೆ.  ಬೇರೆಯವರು ಬೆಳೆಯಬಾರದೆಂದು ಅವರವರೇ ಪ್ರಯತ್ನ ಮಾಡ್ತಾರೆ. ಬೇರೆಯವರು ಬೆಳೆಯದಂತೆ ಮಾಡ್ತಾರೆಂದು ಆರೋಪಿಸಿದರು. 

ಸಿರುಗುಪ್ಪದಲ್ಲಿ ಸೋಮಲಿಂಗಪ್ಪ ಒಳ್ಳೆ ಕೆಲಸ ಮಾಡಿದ್ದಾರೆ. ಕಂಪ್ಲಿ ಕ್ಷೇತ್ರದಲ್ಲಿ ಬೇರೆಯವರು ಟಿಕೆಟ್ ಕೇಳಿಲ್ಲ ಅದಕ್ಕಾಗಿ ಸುರೇಶ್ ಬಾಬುಗೆ ನೀಡಲಿ. ಸಂಡೂರಲ್ಲಿ ಕೆ.ಎಸ್.  ದಿವಾಕರ್ ಕೆಲಸ ಮಾಡ್ತಿದ್ದಾರೆ ಯಾರಿಗಾದರೂ ಕೊಡಲಿ. ಗ್ರಾಮೀಣದಲ್ಲಿ ಶ್ರೀರಾಮುಲು ಇಲ್ಲ ಸಣ್ಣ ಪಕ್ಕೀರಪ್ಪ ಯಾರಿಗಾದರೂ ಕೊಡಲಿ ಎಂದರು.