ಜನಾರ್ಧನರೆಡ್ಡಿಯ ಮೀನಿನ‌ ಗಾಳ ನನಗೆ ಗೊತ್ತಿಲ್ಲ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,7- ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿರುವ  ಮೀನಿಗೆ ಗಾಳ ಹಾಕಿದ ಕಥೆ ವಿಚಾರ ನನಗೆ ತಿಳಿದಿಲ್ಲ.
ಯಾವುದರ ಬಗ್ಗೆ ಅವರು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅದರ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರಿಗೆ ಎನ್ ಒಳ್ಳೆಯದು ಆಗಿದೆ ಅನ್ನೋದು ಸಹ ಅವರು ವಿಚಾರ ಮಾಡಬೇಕಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರು ನಗರದಲ್ಲಿಂದು‌ ಮಾತನಾಡಿ ಹಾವೇರಿ ಜಿಲ್ಲೆ ಹಾನಗಲ್ಲಿನಲ್ಲಿ ಜನಾರ್ಧನರೆಡ್ಡಿ ರೆಡ್ಡಿ ಆಡಿದ ಮಾತುಗಳಿಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಜನಾರ್ದನ ರೆಡ್ಡಿ ಮೀನಿನ ಗಾಳ ಅನ್ನೋದರ ಬಗ್ಗೆ ನಾನು ಮಾತನಾಡಲ್ಲ ಅದರ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆಂದರು.
ನಾನು ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ದೆ ಮಾಡ್ತೇನಿ
ಗ್ರಾಮೀಣ. ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅಂತಾ ಇದೇನಿ. ಆದರೆ ಎಕಕಾಲಕ್ಕೆ ಎರೆಡು ಕಡೆ ಸ್ಪರ್ಧೆ ಮಾಡಲು ಆಗಲ್ಲ. ಪಕ್ಷ ಒಂದು ಕಡೆ ಎಲ್ಲಿ ಹೇಳುತ್ತೋ ಅಲ್ಲಿ ಸ್ಪರ್ಧೆ  ಮಾಡುವೆ ಎಂದರು.
ಕಾಂಗ್ರೆಸ್ ಪಕ್ಷದ ನಾಯಕರು ಬುದ್ದಿ ಕೆಟ್ಟಿರುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಅವರು ಪರೀಕ್ಷೆ ಇರುವ ವೇಳೆ ರಾಜ್ಯ ಬಂದ್ ಗೆ  ಕರೆ ನೀಡಿದ್ದಾರೆ. ಪರೀಕ್ಷೆ ನಡೆಯುವ ವೇಳೆ ಪೋಷಕರು. ಮಕ್ಕಳ ಮೇಲೆ ಬಂದ್ ನಿಂದ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಗಮನಿಸುತ್ತಿಲ್ಲ. ಅಧಿಕಾರಕ್ಕೆ ಬರೋ ಹಗಲು ಕನಸಿನಿಂದ ರಾಜ್ಯ ಬಂದ್ ಕರೆ ನೀಡಿದ್ದಾರೆ. ಬುದ್ದಿಯಿಂದ ಯೋಚನೆ ಮಾಡದೇ ಬಂದ್ ಮಾಡಲು ಹೊರಟ್ಟಿದ್ದಾರೆ. ಅವರು ಕರೆ ನೀಡಿರುವ ರಾಜ್ಯ ಬಂದ್ ಕರೆ ಹಿಂದೆ ಪಡೆಯಬೇಕು ಎಂದು ಆಗ್ರಹಿಸುವೆಂದರು.
ಭ್ರಷ್ಟಾಚಾರ ವಿಚಾರದಲ್ಲಿ ಬ್ರಹ್ಮಾಂಡದ ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್. ಅಧಿಕಾರಕ್ಕೆ ಬರುವ ಸಲುವಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಿದ್ರೆ ದಾಖಲೆಗಳನ್ನ ಕೊಡಲಿ. ಮಾಡಾಳ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ. ಅವರ ಮಗ ಮಾಡಿದ್ದು. ಅವನು ಸರ್ಕಾರಿ‌ ನೌಕರ
ಈ ತನಿಖೆ ವಿಚಾರದಲ್ಲಿ ಆರೋಪಿಯ ತಂದೆ  ಶಾಸಕರು ಆಗಿದ್ರು ನಮ್ಮ ಸಿಎಂ ಕ್ರಮ‌ ಕೈಗೊಂಡಿದ್ದಾರೆ. ನಮ್ಮ ಸರ್ಕಾರದಲ್ಲಿ ಪಿಎಸ್ ಐ ಹಗರಣ ಹುಡುಕಿದ್ಸು ನಾವೇ. 
ಮಾಡಾಳ್ ಮಗನ ತಪ್ಪು ಕಂಡು ಹಿಡಿದಿದ್ದು ಸಹ ನಮ್ಮ ಸರ್ಕಾರ. ನಾವೂ ಪಾರದರ್ಶಕವಾಗಿ ತನಿಖೆ ಮಾಡುತ್ತಿದ್ದೇವೆ ಎಂದರು.