ಜನಾರ್ಧನರೆಡ್ಡಿಯ‌ನ್ನು ಬಿಜೆಪಿಗೆ ಸೇರಿಸಿಕೊಳ್ಳುವುದು

ಸರಿನಾ: ಟಪಾಲ್ ಗಣೇಶ್(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.31: ಅಯೋದ್ಯಯಲ್ಲಿ ರಾಮ ಮಂದಿರ ನಿರ್ಮಿಸಿ, ಬಾಲ ರಾಮನ ವಿಗ್ರಹ ಪ್ರತಿಷ್ಟಾಪನೆ ಮಾಡಿ ವಿಶ್ವದ ಗಮನ ಭಾರತದ ಕಡೆ ಸೆಳೆದ ಬಿಜೆಪಿ. ಅಕ್ರಮ ಗಣಿಕಾರಿಕೆ ಮೂಲಕ ಕುಖ್ಯಾತಿ ಪಡೆದ ಜನಾರ್ಧನರೆಡ್ಡಿ ಯನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವುದು ಸರಿನಾ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ  ಪತ್ರಿಕಾ ಹೇಳಿಕೆ ನೀಡಿರುವ ಅವರು. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಇದ್ದಂತ. ಈ ಹಿಂದಿನ ಅರಣ್ಯ ಉಪ ಸಂರಕ್ಷಣಾಧಿಕಾರಿ ಎನ್. ಮುತ್ತಯ್ಯ 2008  ಮತ್ತು 2010 ರಲ್ಲಿ ಬಳ್ಳಾರಿಯ ಉಪ ಸಂರಕ್ಷಣಾಧಿಕಾರಿಯಾಗಿ  ಕಾರ್ಯ ನಿರ್ವಹಿಸಿ.  ಅಂದು  ಆಂಧ್ರಪ್ರದೇಶದ ಓಬಳಾಪುರಂ ಸಿದ್ದಾಪುರಂ ಮಲಪಂಗುಡಿ ಗ್ರಾಮಗಳಲ್ಲಿ   ಓಬಳಾಪುರಂ ಮೈನಿಂಗ್ ಕಂಪನಿ  ಸಂಸ್ಥಾಪಕ ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಆಗಿದ್ದ ಗಾಲಿ ಜನಾರ್ದನ ರೆಡ್ಡಿ.  ಜಿಲ್ಲಾ ಆಡಳಿತವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು. ಅಧಿಕಾರ ಬಲದಿಂದ  ತಮ್ಮ  ಒಡೆತನದ ಓಬಳಾಪುರ ಮೈನಿಂಗ್ ಕಂಪನಿ ಮೂಲಕ  ನಕಲಿ  ಪರ್ಮಿಟ್ ಗಳನ್ನು ಸೃಷ್ಟಿ ಮಾಡಿ  ಕರ್ನಾಟಕ ವ್ಯಾಪ್ತಿಯಲ್ಲಿರುವ  ಹಲಕುಂದಿ ಅರಣ್ಯ ಚೆಕ್ ಪೋಸ್ಟ್ ಅನ್ನು  ತಮ್ಮ ಅಧಿಕಾರ ಬಲದಿಂದ  ತರುವುಗೊಳಿಸಿ ಕರ್ನಾಟಕದ  ಕನಿಜ ಸಂಪತ್ತನ್ನು  ಕೊಳ್ಳೆ ಹೊಡೆದು ಸಾಗಾಣಿಕೆ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಭಾಗಿಯಾದ   ಮುತ್ತಯ್ಯ ನವರು ತಮ್ಮ ಮೇಲೆ ಇರುವ  ಪ್ರಕರಣದ ಆದೇಶವನ್ನು ರದ್ದತಿಗೆ ಶಿಫಾರಸ್ ಮಾಡಿ ಅಂತ ಕರ್ನಾಟಕದ ಉಚ್ಚ ನ್ಯಾಯಾಲಯ ಮೊರೆ ಹೋದಾಗ ಅವರ ಮನವಿಯನ್ನು ನ್ಯಾಯಾಲಯ  ವಜಾ ಮಾಡಿರುತ್ತದೆ.
ಈ ಪ್ರಕರಣದಲ್ಲಿ ನ್ಯಾಯಾಲಯ  ನೀಡಿದಂತ ಅಂಶಗಳು ನೋಡಿದಾಗ ಮಾಜಿ ಸಚಿವ ಜನಾರ್ಧನರೆಡ್ಡಿ  ಮತ್ತು ಅಧಿಕಾರಿಗಳು ಯಾವ ರೀತಿ  ಅಕ್ರಮಕ್ಕೆ ಕುಮ್ಮಕ್ಕು ನೀಡಿ  ಕರ್ನಾಟಕದ ಖನಿಜ  ಸಂಪತ್ತನ್ನು  ಯಾವುದೇ ರಾಜಧಾನ ನೀಡದೆ ಸಾಗಾಣಿಕೆ ಮಾಡಿರೋದು, ಕರ್ನಾಟಕ ರಾಜ್ಯಕ್ಕೆ ದ್ರೋಹ ಎಸಿಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಇಂಥ ಗಂಭೀರ ಪ್ರಕರಣಗಳನ್ನು ಕಾಲ ಕಾಲಕ್ಕೆ ಬಂದಂತ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸದೆ ಇರುವುದು. ಸರಿಸುಮಾರು 15 ವರ್ಷ ಕಳೆದರೂ ಕೂಡ ತಾರ್ಕಿಕ ಅಂತ್ಯಕ್ಕೆ ಕಾಣದೆ ಇರುವದು ನಮ್ಮ ದುರ್ದೈವ. ಈ  ಅಕ್ರಮ  ಗಣಿಗಾರಿಕೆ ರೂವಾರಿಯಾದಂತ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಾರ್ಲಿಮೆಂಟ್ ಎಲೆಕ್ಷನ್ ಗೋಸ್ಕರ ಭಾರತೀಯ ಜನತಾ ಪಾರ್ಟಿ ಮತ್ತೆ  ಸೇರ್ಪಡೆ ಮಾಡಿಕೊಳ್ಳುವ ಚರ್ಚೆ ಆರಂಭಗೊಂಡಿದೆ. ಇದು ಸರಿನಾ ಎಂದು ಗಣೇಶ್ ಪ್ರಶ್ನಿಸಿದ್ದಾರೆ.

One attachment • Scanned by Gmail