ಜನಾರ್ದನ ರೆಡ್ಡಿ ಇಲ್ಲಾಂದ್ರೆ ಬಳ್ಳಾರಿಯಲ್ಲಿ ಬಿಜೆಪಿ ಇಲ್ಲಾ ಅನ್ನೋದನ್ನ ಒಪ್ಪಲ್ಲ: ಜಿಎಸ್ ಆರ್


* ಜನಾರ್ಧನರೆಡ್ಡಿ ಬಂದರೆ ನಮ್ಮ ಗೆಲುವು ಖಚಿತ
* ಚುನಾವಣಾ ತಂತ್ರದಲ್ಲಿ ಜನಾರ್ದನ ರೆಡ್ಡಿ ಮಾಸ್ಟರ್ ಮೈಂಡ್
*  ಜನರ ಜೊತೆಗೆ ಇರೋದ್ರಲ್ಲಿ ಶ್ರೀರಾಮುಲು  ನಂಬರ್ ಒನ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜ,30 ಸಹೋದರ, ಕೆಆರ್ ಪಿ ಪಕ್ಷದ ನಾಯಕ ಜಿ. ಜನಾರ್ದನ ರೆಡ್ಡಿ ಇಲ್ಲಾಂದ್ರೇ ಬಳ್ಳಾರಿಯಲ್ಲಿ ಬಿಜೆಪಿ ಇಲ್ಲ ಅನ್ನೋದು ನಾನು ಒಪ್ಪಲ್ಲ ಎಂದು ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ‌
ನಗರದ ತಮ್ಮ ನಿವಾಸದಲ್ಲಿ ಮಾಧ್ಯಗಳಿಗೆ  ಜನಾರ್ಧನರೆಡ್ಡಿ ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನಗಳ ಬಗ್ಗೆ ಪ್ರತಿಕ್ರಿಯಿಸಿ.
ಜನಾರ್ದನ ರೆಡ್ಡಿ ಕೆಆರ್ ಪಿ  ಪಕ್ಷ ಕಟ್ಟಿದ್ರಿಂದ ಶ್ರೀರಾಮುಲು ಸೇರಿದಂತೆ ನಾವೆಲ್ಲ ಸೋತಿದ್ದೇವೆ ಎನ್ನುವದು ಸುಳ್ಳು.
ಬಿಜೆಪಿಗೆ ಬಂದ್ರೇ ಮುಕ್ತಕಂಠದಿಂದ ಸ್ವಾಗತ ಮಾಡ್ತೇನೆ. ಆದರೆ ಜನಾರ್ದನ ರೆಡ್ಡಿ ಇಲ್ಲಾಂದ್ರೇ ಬಳ್ಳಾರಿಯಲ್ಲಿ ಬಿಜೆಪಿ ಇಲ್ಲ ಅನ್ನೋದು ಒಪ್ಪಲ್ಲ.
ಶಾಸಕನ್ನು ಮಾಡಿದ್ರು. ಅದೇ ಶಾಸಕರನ್ನು ಸೋಲಿಸಿದ್ರು ಇದರಿಂದಾಗಿ ಸದನದಲ್ಲಿ ‌ನೀವೇ ಹಿಂದೆ ಕೂಡೋ ಹಾಗೇ ಆಯ್ತು ಎಂದು ಸಹೋದರನ ನಡೆಯನ್ನು ಪ್ರಸ್ನಿಸಿದು.
ನಾವೇಲ್ಲ ಸೋತಿರೋದು ಕಾಂಗ್ರೆಸ್ ಗ್ಯಾರಂಟಿಯಿಂದ ಸೋತಿದ್ದೇವೆ.ಜನಾರ್ದನರೆಡ್ಡಿ ಯಿಂದಲ್ಲ ಚುನಾವಣೆ ಸ್ಟಾಟರ್ಜಿ ಮಾಡೋ ದ್ರಲ್ಲಿ ಜನಾರ್ದನ ರೆಡ್ಡಿ ಮಾಸ್ಟರ್ ಮೈಂಡ್. ಜನರ ಜೊತೆಗೆ ಇರೋದ್ರಲ್ಲಿ ಶ್ರೀರಾಮುಲು  ನಂಬರ್ ಒನ್. ಇಬ್ಬರು ಕಾಂಬಿನೇಷನ್ ಆದ್ರೇ ಲೋಕಸಭೆ ಗೆಲ್ಲೋದು ಗ್ಯಾರಂಟಿ. ಲೋಕಸಭೆಯಲ್ಲಿ
ಗೆದ್ರೇ ಶ್ರೀರಾಮುಲು ಮತ್ತಷ್ಟು ಉನ್ನತ ಸ್ಥಾನಕ್ಕೆ ಹೋಗ್ತಾರೆ ಕೇಂದ್ರ ಸಚಿವರಾಗಬಹುದು ಎಂದ ಅವರು‌. ಯಾವುದೋ‌ ಒಂದು ಕೆಟ್ಟ
ಗಳಿಗೆಯಲ್ಲಿ ಹೊಸ ಪಕ್ಷ ಕಟ್ಟಿದ್ರೂ
ಇದೀಗ ಬಿಜೆಪಿಗೆ ಬಂದ್ರೇ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತೇವೆಂದರು.
ಬಾಕ್ಸ್
ಜನಾರ್ದನ ರೆಡ್ಡಿ ಒಬ್ಬರೇ ಗೆದ್ದು ಏನು ಸಾಧನೆ ಮಾಡಿದ್ರು. ಸದನ ದಲ್ಲಿ ಒಬ್ಬ ಸಣ್ಣ ಹುಡುಗ ಏನೆಲ್ಲಾ ಮಾತನಾಡಿದ ( ಶಾಸಕ ಭರತ್ ರೆಡ್ಡಿ) ಅದು ನಮಗೂ ಬೇಸರವಾಯ್ತು.
ಮಂತ್ರಿಯಾಗಿ ಸದನದಲ್ಲಿ ಮುಂದೆ ಕೂಡಬೇಕಾದ ಜನಾರ್ದನ ರೆಡ್ಡಿ ತಾನೊಬ್ಬನೆ ಗೆದ್ದು ಹಿಂದೆ ಕೂಡುವಂತಾಯ್ತು.