ಜನಾನುರಾಗಿಯಾಗಿದ್ದ ಡಾ.ವೈ ನಾಗಪ್ಪ; ಸ್ಮರಣೆ


ಹರಿಹರ .ನ.೧೪ : ಡಾ. ವೈ.ನಾಗಪ್ಪನವರು ನನಗೆ ರಾಜಕೀಯ ಗುರುವಾಗಿದ್ದರು. ಚುನಾವಣೆಗೆ ಸ್ಪರ್ಧಿಸುವ ಮುನ್ನ ಅವರ ಮನೆಗೆ ಹೋಗಿ ಆಶೀರ್ವಾದ ಪಡೆದಿದ್ದೆ.ಅವರ ಆದರ್ಶಗಳು ಅಳವಡಿಸಿಕೊಂಡು ಮುಂದುವರಿಯುತ್ತೇನೆಂದು  ಶಾಸಕ ಎಸ್ ರಾಮಪ್ಪನವರು, ಹೇಳಿದರು ನಗರದ ಕಾಳಿದಾಸ ವಿದ್ಯಾಸಂಸ್ಥೆಯಲ್ಲಿ  ಹಮ್ಮಿಕೊಂಡಿದ್ದ,, ಮಾಜಿ ಸಚಿವ “ಡಾ. ವೈ. ನಾಗಪ್ಪನವರ ಶ್ರದ್ಧಾಂಜಲಿ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾಗಪ್ಪನವರು ಸ್ವಾಭಿಮಾನಿ ವ್ಯಕ್ತಿತ್ವ ಉಳ್ಳವರಾಗಿದ್ದರು.ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸರ್ಕಾರಿ ವೈದ್ಯಕೀಯಉದ್ಯೋಗ ಬಿಟ್ಟು,ರಾಜಕೀಯ ರಂಗಕ್ಕೆ ಧುಮ್ಮಿಕ್ಕಿ,ಜನರ ಸೇವೆ ಮಾಡಿದ ಹಿರಿಯ ಧುರಿಣರೆoದು , ಅವರ ಆದರ್ಶಗಳನ್ನು ಕೊಂಡಾಡಿದರು.   

      ಡಾ.ವೈ ನಾಗಪ್ಪನವರ ಪುತ್ರ ,ವೈ. ಎನ್ ಮಹೇಶ್ ರವರು ಮಾತನಾಡಿ, ನಮ್ಮ ತಂದೆಯವರು ವಂಶ ರಾಜಕಾರಣಕ್ಕೆ ವಿರೋಧಿಯಾಗಿದ್ದರು.ಹಾಗಾಗಿ ಮಕ್ಕಳನ್ನು ರಾಜಕೀಯಕ್ಕೆ ತರಲು ಬಯಸಲಿಲ್ಲ. ಅವರು ವೈಯಕ್ತಿಕವಾಗಿ ಬೆಳೆಯದೆ,ಸಮಾಜದ ಹಾಗೂ ಸಮುದಾಯದ ಶಕ್ತಿಯಾಗಿ ಬೆಳೆದು,ಆನೇಕರಿಗೆ ರಾಜಕೀಯರಂಗದಲ್ಲಿ ಅವಕಾಶ ಕಲ್ಪಿಸಿಕೊಟ್ಟರು ಎಂದು ಭಾವುಕರಾದರು.    ಮಗಳು ಡಾ.ರಶ್ಮಿ ಅವರು ಮಾತನಾಡಿ,ನಮ್ಮ ತಂದೆಯವರ ಆದರ್ಶಗಳೇ ನಮ್ಮ ಬದುಕು ಹಾಗೂ ವೃತ್ತಿಗೆ ತಳಪಾಯವಾಗಿವೆ.ಅವರ ಕಾರ್ಯ ವೈಖರಿಗಳನ್ನು ಗಮನಿಸುತ್ತಲೇ ಬೆಳೆದ ನಮಗೆ,ನಮ್ಮ ಪಾಲಿನ ದೇವರು ಎಂದು ಸ್ಮರಿಸಿದರು. 

 ಎಂ.ಎನ್ ನಾಗೇಂದ್ರಪ್ಪ ವಕೀಲರು ಮಾತನಾಡಿ, ನಾಗಪ್ಪನವರ ಮನೆತನ ವ್ಯವಸಾಯದಿಂದ ಬಂದವರು.,ಆಗಿನಕಾಲದಲ್ಲಿ ಎಂಬಿಬಿಎಸ್ ದೊಡ್ಡ ವಿದ್ಯಾ ಸಂಪತ್ತು ಆಗಿತ್ತು.ಅವರು ರಾಜಕೀಯಕ್ಕೆ ಬಂದಿದ್ದುಆಕಸ್ಮಿಕ ,  ಅವರು ಎಂದು ದ್ವೇಷದರಾಜಕಾರಣ ಮಾಡದೆ,ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು.ತಮ್ಮ ರಾಜಕೀಯ ವೈರಿಗಳು ಆಗಿದ್ದರೂ ಸಹ,ಜನರ ಸೇವೆಯೇ ಕಾಯಕವೆಂದು ನಂಬಿದ್ದ ಅವರು,ನಿಷ್ಪಕ್ಷಪಾತವಾಗಿ ಕಾಯಕ ಮಾಡುತ್ತಿದ್ದರು.ಬಸವಣ್ಣನವರ ಅನುಯಾಯಿಯಾಗಿದ್ದಆವರು, ಕಾಯಕದಲ್ಲಿ ಸಂತೋಷ ಕಾಣುತ್ತಿದ್ಧ ರು. ಇಂಥವರ ಮಾರ್ಗದರ್ಶನ ನಮಗೆ ಸಿಕ್ಕಿದ್ದು ದೊಡ್ಡ ಸೌಭಾಗ್ಯ ವೆಂದರು.    ನಗರಸಭೆ ಹಾಲಿ ಸದಸ್ಯರಾದ ಬಿ ರೇವಣಸಿದ್ದಪ್ಪ ನವರು ಮಾತನಾಡಿ, ನಾಗಪ್ಪನವರು ಪೈಲ್ವಾನ್ರಾಗಿದ್ದು,ಕ್ರೀಡಾಪಟು ಜೊತೆಗೆ ಡಾಕ್ಟರಾಗಿ ಸೇವೆ ಸಲ್ಲಿಸಿದವರು. ಸವಾಲು ಹಾಕಿ ರಾಜಕೀಯ ರಂಗಕ್ಕೆ ಬಂದವರು.ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿ ಸೇವೆ ಸಲ್ಲಿಸಿದವರು.ರಾಘವೇಂದ್ರಸ್ವಾಮಿ ಭಕ್ತರಾಗಿದ್ದರವರು, ಹೊರಗಡೆ ಕೆಲಸಕ್ಕೆ ಹೋಗುವಾಗ ತಂದೆ ತಾಯಿಗೆ ನಮಸ್ಕರಿಸಿ,ಅವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದ ಸಂಸ್ಕಾರವಂತರು. ಚುನಾವಣೆಯಲ್ಲಿಸೋತಾಗ ಆತ್ಮ ವಿಮರ್ಶೆ ಮಾಡಿಕೊಳ್ಳುವ ಗುಣವಂತರು.ರಾಜಕೀಯ ಸೇಡಿನ ಮನೋಭಾವವಿಲ್ಲದೆ,ಇದ್ದ ಪಕ್ಷದಲ್ಲಿಯೇ ಕೊನೆತನಕ ಇದ್ದ ಧೀಮಂತ ನಾಯಕರಾಗಿದ್ಧರೆಂದರು.      ಕಾರ್ಮಿಕ ಮುಖಂಡ ಹೆಚ್ ಕೆ ಕೊಟ್ರಪ್ಪ ಮಾತನಾಡಿ,ನಾಗಪ್ಪನವರು ಎಲ್ಲಾ ಸಮುದಾಯದ ಮುಖಂಡರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು.ಸಮಾಜದಲ್ಲಿ ಸಮಾನತೆಯ ಬಗ್ಗೆ ಒಲವು ತೋರಿಸುತ್ತಿದ್ದ ಮಹಾನ್ ನಾಯಕರೆಂದು ಸ್ಮರಿಸಿದರು.        

  ಕುರುಬ ಸಮಾಜದ ತಾಲೂಕ ಅಧ್ಯಕ್ಷರಾದ ಕೆ. ಜಡಿಯಪ್ಪ , ಮುಖಂಡರುಗಳಾದ ಕೆಬಿ ಬಸವರಾಜಪ್ಪ, ಎಸ್ ಜಿ ಪರಮೇಶಪ್ಪ ,ವಿರುಪಾಕ್ಷಪ್ಪ ,ವಿವೇಕಾನಂದ ಸ್ವಾಮಿ .ಸಿ ಎನ್  ಹುಲಿಗೇಶ , ರವರುಗಳು ಮಾತನಾಡಿ,ನಾಗಪ್ಪನವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು,ಅಜಾತಶತ್ರು ಆಗಿ,ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ ಧೀಮಂತ  ನಾಯಕರಾಗಿದ್ಧರೆಂದು ಬಣ್ಣಿಸಿದರು.    ಅಧ್ಯಕ್ಷತೆಯನ್ನು ಕಾಳಿದಾಸ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷರಾದ ಜಿ ದ್ಯಾಮಣ್ಣ ಅವರು ವಹಿಸಿದ್ದರು.ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾದ ಕೆಎಚ್ ದಾನಪ್ಪ ಪ್ರಾಸ್ತಾವಿಕ ಮಾತುಗಳನಾ ಡಿದರು. ಕಾರ್ಯಕ್ರಮದ ನಿರೂಪಣೆ ಮುಖ್ಯ ಉಪಾಧ್ಯಾಯರಾದ ನಿಜಲಿಂಗಪ್ಪನವರು ನಿರೂಪಿಸಿದರು,ಸ್ವಾಗತವನ್ನು ನಿವೃತ್ತ ಸರ್ಕಲ್ ಇನ್ಸ್ಪೆಕ್ಟರ್ ದೇವೇಂದ್ರಪ್ಪ ಕುಣೆಬೆಳಕೆರೆ ರವರು ಮಾಡಿದರು. ಪ್ರಾರ್ಥನೆ ಕುಮಾರಿ ಪೂಜಾ ಹಾಗೂ ವನಿತಾ ಮಾಡಿದರೆ,ವಂದನಾರ್ಪಣೆ ಕೆ.ಎನ್. ಶೀಲಾ ಮಾಡಿದರು. ಸಮಾಜದ ಗಣ್ಯರಾದ ಕಡರನಾಯಕನಹಳ್ಳಿ ರಂಗನಾಥ್ ಗುಬ್ಬಿ,ಚಂದ್ರಣ್ಣ ಗುಡೇರೆ, ಹಾದಿಮನಿ ಸುರೇಶ್,ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ವಿಜಯ ಮಾಂತೇಶ, ದಾಸರ ಶೇಖರಪ್ಪ,ವಿದ್ಯಾಸಂಸ್ಥೆಯ ಸಹ  ಕಾರ್ಯದರ್ಶಿಯಾದ ಎಸ್. ಎ ನ್. ಆಂಜಿನಪ್ಪ ಹಾಗೂ ಡಾಕ್ಟರ್ ವೈ ನಾಗಪ್ಪನವರ ಆತ್ಮೀಯರು ಇದ್ದರು.