ಜನಾದೇಶಕ್ಕೆ ತಲೆ ಬಾಗಿ ಸಮಾಜ ಸೇವೆ ಮುಂದುವರೆಸುತ್ತೇನೆ

ಕೋಲಾರ,ಮೇ,೧೮- ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಅವರು ಕೋಲಾರ ವಿಧಾನ ಸಭಾ ಕ್ಷೇತ್ರದ ಸರ್ವಂಗೀಣ ಅಭಿವೃದ್ದಿಗೆ ಶ್ರಮಿಸುವಂತಾಗಲಿ, ಅವರ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ ಎಂದು ಜೆ.ಡಿ.ಎಸ್ ಪಕ್ಷದ ಸಿ.ಎಂ.ಆರ್. ಶ್ರೀನಾಥ್ ತಿಳಿಸಿದರು
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮತದಾರರ ಪ್ರಭುಗಳು ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ನೀಡಿರುವಂತ ಜನಾದೇಶವನ್ನು ತಲೆ ಬಾಗಿಸಿ ಸ್ವೀಕರಿಸುತ್ತೇನೆ. ಜೀವನದಲ್ಲಿ ಸೋಲು-ಗೆಲವು ಎರಡು ಸಹಜವಾದದ್ದು. ನನಗೆ ೫೩ ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿರುವುದನ್ನು ಗೌರವದಿಂದ ಸ್ವೀಕರಿಸುತ್ತೇನೆ, ಮತದಾರರು ಏಕೆ ನನ್ನನ್ನು ಪೂರ್ಣವಾಗಿ ಸ್ವೀಕರಿಸಿಲ್ಲ, ಎಲ್ಲಿ ನಾನು ತಪ್ಪು ಮಾಡಿದ್ದೇನೆಂದು ತಿಳಿದು ಸರಿ ಪಡೆಸಿ ಕೊಂಡು ಪಕ್ಷವನ್ನು ಸಧೃಢವಾಗಿ ಸಂಘಟಿಸಿ ಕೊಂಡು ಮುಂದುವರೆಯುವುದಾಗಿ ತಿಳಿಸಿದರು,
ಚುನಾವಣೆಯಲ್ಲಿ ಸೋಲು ಗೆಲವು ಎಂದಿಗೂ ಶಾಶ್ವತವಲ್ಲ. ಜೀವನದಲ್ಲಿ ಜನ್ಮ ಮತ್ತು ಕರ್ಮ ಎರಡನ್ನು ಅರಿತು ಜೀವನದಲ್ಲಿ ಮುಂದುವರೆಯ ಬೇಕು, ಪಕ್ಷದ ಕಾರ್ಯಕರ್ತರು ಧೃತಿಗಡೆದೆ ಆತ್ಮಸ್ಥೆರ್ಯವನ್ನು ರೋಡಿಸಿ ಕೊಂಡು ಸಂಘಟನೆಯಲ್ಲಿ ತೊಡಗಿಸಿ ಕೊಳ್ಳ ಬೇಕು, ನಿಮ್ಮಗಳ ಜತೆಗೆ ನಾನಿದ್ದೇನೆಂದು ಹೇಳಿದರು,
ಕಳೆದ ೨೦೧೮ರ ನಂತರ ರಾಜಕೀಯ ಕ್ಷೇತ್ರದಲ್ಲಿ ಹಲವು ಬದಲಾವಣೆ ಕಂಡು ಬಂದಿದ್ದು ರಾಜಕೀಯವು ವ್ಯವಹಾರಿಕವಾಗಿರುವುದನ್ನು ನಿಯಂತ್ರಿಸುವಂತಾಗ ಬೇಕು, ಟಿ.ಚೆನ್ನಯ್ಯ, ಪಟ್ಟಾಭಿರಾಮನ್, ಪಿ.ವೆಂಕಟಗಿರಿಯಪ್ಪ, ಸಿ.ಬೈರೇಗೌಡ, ಮುಂತಾದ ದಿಗ್ಗಜ ಮಹನೀಯರು ಕ್ಷೇತ್ರದಲ್ಲಿ ನಡೆಸಿದ ಆಡಳಿತದ ಗತವೈಭವ ಮರುಕಳುಹಿಸುವಂತಾಗ ಬೇಕೆಂದು ಆಶಿಸಿದ ಅವರು ನಂಬಿಕೆ,ವಿಶ್ವಾಸಗಳಿಗೆ ಪೂರಕವಾಗಿ ಆಡಳಿತ ನಡೆಸಲು ರಾಜಕೀಯ ಪರಿಶುದ್ದತೆ, ಭ್ರಷ್ಟಮುಕ್ತಗೊಳಿಸಲು ಸಮಾಜ ಸೇವೆಯಲ್ಲಿ ಜಾತ್ಯಾತೀತವಾಗಿ ತೊಡಗಿಸಿ ಕೊಂಡು ಮುಂದುವರೆಯುವುದಕ್ಕೆ ನಿಮ್ಮೆಲ್ಲಾರ ಸಹಕಾರ ಅಗತ್ಯವಾಗಿದೆ ಎಂದರು,
ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಬಡ ಜನತೆ ಸಂಕಷ್ಟಕ್ಕೆ ಸಿಲುಕಿದ್ದು ಅನಾಥ್ ಪ್ರಜ್ಞೆ ಕಾಡಿದ್ದ ಸಂದರ್ಭದಲ್ಲಿ ಹಾಲಿ ಹಾಗೂ ಮಾಜಿ ಶಾಸಕರುಗಳು, ಸಚಿವರುಗಳು, ಸಂಸದರುಗಳು ಯಾರ ಜನರ ಮಧ್ಯೆ ಸುಳಿಯಲಿಲ್ಲ.ಇಂಥಹ ಸಂದರ್ಭದಲ್ಲಿ ಜನರ ಮಧ್ಯೆ ತೆರಳಿ ಸೇವೆಗೆ ಮುಂದಾಗಿದ್ದೆ. ಕೊವೀಡ್ ಸೊಂಕು ತಾಕಿದರೂ ಸಹ ಲೆಕ್ಕಿಸದೆ ನಿರಂತರವಾಗಿ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದೆ ಎಂದರು,
ಬಡ ಜನತೆಗೆ ಜಾತ್ಯಾತೀತವಾಗಿ ಮನೆಬಾಗಿಲಿಗೆ ತೆರಳಿ ದಿನಸಿ ಕಿಟ್, ಔಷಧಿಗಳು, ಕಂಬಳಿ ಬೆಡ್‌ಸೀಟ್, ಅತಿವೃಷ್ಠಿಯ ಮಳೆಯಿಂದಾಗಿ ಮನೆಗಳ ದುರಸ್ಥಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಸಮಸ್ಯೆಗಳನ್ನು ಬಗೆಹರಿಸಲಾಯಿತು, ಒಂದೆ ಕುಟುಂಬದವರೆಂಬ ಭಾವನಾತ್ಮಕ ಸಂಬಂಧವನ್ನು ಹೊಂದಿ ನೆರವು ನೀಡಲಾಯಿತು, ಸಮಸ್ಯೆ ಎಂದು ಬಂದವರನ್ನು ಎಂದಿಗೂ ಬರಿಗೈಯಲ್ಲಿ ಕಳಹಿಸಿಲ್ಲ ಎಂದು ನೆನಪಿಸಿ ಕೊಂಡರು. ಚುನಾವಣೆ ಪ್ರಕ್ರಿಯೆಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡು ೬ ತಿಂಗಳು ಮೊದಲೆ ಪಕ್ಷದ ಅಭ್ಯರ್ಥಿಯೆಂದು ಕುಮಾರಸ್ವಾಮಿ ಘೋಷಿಸಿದ್ದರೂ,ಗ್ರಾಮ ಪಂಚಾಯಿತಿ ಮಟದಿಂದ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಾರ್ಯನಿರ್ವಹಿಸಿದ್ದೇನೆ, ಸಮಸ್ಯೆಗಳ ಪರಿಹಾರಗಳನ್ನು ಪ್ರಣಾಳಿಕೆಯನ್ನಾಗಿಸಿ ಕೊಂಡು ಆರ್ಹಫಲಾನುಭವಿಗಳಿಗೆ ತಲುಪಿಸುವ ಕೆಲಸ ನಿರ್ವಹಿಸಿದ್ದೇನೆ. ಬೇಕು,ಬೇಡಾಗಳ ಪಟ್ಟಿ ಮಾಡಿ ಕೊಂಡು ಜಾತ್ಯಾತೀತವಾಗಿ ಈಡೇರಿಸಲು ಕ್ರಮ ಕೈಗೊಂಡಿದ್ದೆ ಅದರೂ ಒಂದು ಸಮುದಾಯದವರು ಮಾತ್ರ ಅಂತಿಮ ಗಳಿಗೆಯಲ್ಲಿ ಬದಲಾಗಿದ್ದು ರಾಜ್ಯದಿಂದ ಬಂದ ಸಂದೇಶದ ಪ್ರಕಾರ ಮತ ಚಲಾಯಿಸಿದ್ದರಿಂದ ತಮಗೆ ಹಿನ್ನಡೆಯಾಗಿದೆ ಎಂದು ವಿಷಾಧಿಸಿದರು,
ಚುನಾವಣೆಯಲ್ಲಿ ಸೋಲಲು ಕಾರಣದ ಬಗ್ಗೆ ಆತ್ಮವಿಮರ್ಷೆ ಮಾಡಿ ಕೊಂಡು ತಪ್ಪುಗಳಿದ್ದಲ್ಲಿ ತಿದ್ದಿ ಕೊಂಡು ಮುಂಬರಲಿರುವ ಲೋಕಸಭೆ, ಪಂಚಾಯಿತಿ ಚುನಾವಣೆಗಳಿಗಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡು ಮುಂದುವರೆಯುತ್ತೇನೆ ಎಲ್ಲರೂ ಇನ್ನು ಹೆಚ್ಚಿನ ರೀತಿಯಲ್ಲಿ ಬೆಂಬಲಿಸ ಬೇಕೆಂದು ಮನವಿ ಮಾಡಿದರು
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಜಿ.ಪಂ. ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ, ರಾಜ್ಯ ಒಕ್ಕಲಿಗ ಸಂಘದ ಸದಸ್ಯರಾದ ಡಾ.ರಮೇಶ್, ಯೂನಿಯನ್ ನಿರ್ದೇಶಕ ಸೊಣ್ಣೇಗೌಡ, ಜೆ.ಡಿ.ಎಸ್. ಜಿಲ್ಲಾ ಕಾರ್ಯಧ್ಯಕ್ಷ ಬಣಕನಹಳ್ಳಿ ನಟರಾಜ್,ತಾಲ್ಲೂಕು ಅದ್ಯಕ್ಷ ಬಾಬುಮೌನಿ, ರಾಜ್ಯ ಕುರುಬರ ಸಂಘದ ನಿರ್ದೇಶಕ ಜೆಟ್ ಆಶೋಕ್,ಮುಖಂಡರಾದ ಬಾಲಗೋವಿಂದ್,ಪುಟ್ಟಣ ಮುಂತಾದವರು ಉಪಸ್ಥಿತರಿದ್ದರು,