ಜನಾಕರ್ಷಿಸಿದ ನಾಯಿಗಳ ಪ್ರದರ್ಶನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಜ.22:  ಪ್ರಥಮ ಬಾರಿಗೆ  ಬಳ್ಳಾರಿ ಉತ್ಸವದ ಅಂಗವಾಗಿ  ಇಂದು ನಗರದ ವಾರ್ಡ್ಲಾ ಕಾಲೇಜು ಮೈದಾನದಲ್ಲಿ ನಡೆದ ನಾಯಿಗಳ ಪ್ರದರ್ಶನ ಜನಾಕರ್ಷಣೀಯವಾಗಿತ್ತು.
ಬಳ್ಳಾರಿ ನಗರ ಮತ್ತು ಸುತ್ತಮುತ್ತಲ ಪಟ್ಟಣಗಳಿಂದ ಸೈಬೇರಿಯನ್ ಹಸ್ಕಿ, ಜರ್ಮನ್ ಷಪರ್ಡ್, ಗೋಲ್ಡನ್ ರಿಟ್ರೀವರ್, ಪಗ್, ಲ್ಯಾಬ್ರೋ ಡಾಗ್, ಇಂಡಿಯನ್ ಸ್ಪಾಟಿಜ್, ಬೀಗಲ್, ಮಿದೋಳ್, ಸೇಂಟ್ ಬರ್ನಾಡ್,  ಸಮೂಯನ್,  ಪಮೇರಿಯನ್, ಡಾಮರ್ ಮ್ಯಾನ್, ಬೀಗಲ್ ಮೊದಲಾದ ತಳಿಯ ನಾಯಿಗಳನ್ನು ಅವುಗಳ ಮಾಲೀಕರು ಕರೆತಂದು ಪ್ರದರ್ಶನದಲ್ಲಿ ಅವನ್ನು ಹಿಡಿದುಕೊಂಡು ನಡೆದಾಡಿದರು.
ರಷ್ಯನ್ ಮೂಲದ ಕಕೇಷಿಯ ಷಪರ್ಡ್  ತಳಿಯ 20 ಕೋಟಿ ರೂ ಮೌಲ್ಯದ ನಾಯಿ ನೆರೆದವರನ್ನು ವಿಶೇಷವಾಗಿ ಆಕರ್ಷಿಸುತು‌.
ಶಾಸಕ ಸೋಮಶೇಖರರೆಡ್ಡಿ ಪ್ರದರ್ಶನಕ್ಕೆ ಚಾಲನೆ ನೀಡಿದರು.