ಜನಾಂಗೀಯ ನಿಂದನೆ: ಮಾರ್ಗನ್, ಬಟ್ಲರ್ ವಿರುದ್ಧ ತನಿಖೆ

ಲಂಡನ್, ಜೂ.9- ಭಾರತೀಯರ ಬಗ್ಗೆ ಜನಾಂಗೀಯ ನಿಂದನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ ವಿರುದ್ದ‌ ತನಿಖೆಗೆ ಆದೇಶಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರು ಕ್ರಿಕೆಟ್ ಆಟಗಾರರು ಮಾಡಿದ ಜನಾಂಗೀಯ ನಿಂದನೆ ಕುರಿತ‌ ಟ್ವೀಟ್ ವೈರಲ್ ಆಗಿತ್ತು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೂಕ್ತ ಕ್ರಮಕೈಗೊಳ್ಳುವು ದಾಗಿ ಭರವಸೆ ನೀಡಿದೆ.
2012 ಮತ್ತು 2013ರಲ್ಲಿ ಏಷ್ಯಾದ ಜನರನ್ನು ಅವಹೇಳನ ಮಾಡಿ ಟ್ವೀಟ್ ಮಾಡಿದ್ದ ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಮಾನತು ಮಾಡಿತ್ತು.
ಈ ಕ್ರಮದ ಬೆನ್ನಲ್ಲೇ ಮೊರ್ಗನ್ ಮತ್ತು‌ ಬಟ್ಲರ್ ಭಾರತೀಯರನ್ನು ಟ್ವಿಟರ್ ನಲ್ಲಿ ಸರ್ ಎಂದು ಸಂಭೋದಿಸಿ ಹಾಸ್ಯ ಮಾಡಿದ್ದರು.
ಈ ರೀತಿಯ ವಿವಾದಾಸ್ಪದ ಟ್ವೀಟ್ ಗಳನ್ನು ಮಾಡದಂತೆ ಆಟಗಾರರಿಗೆ ಎಚ್ಚರಿಕೆ ನೀಡಿದ್ದರೂ ಅವಹೇಳನಕಾರಿ ಟ್ವೀಟ್ ಮಾಡಿ‌ ಈ ಇಬ್ಬರು ಇಸಿಬಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಈ ಇಬ್ಬರು ಆಡುತ್ತಿದ್ದಾರೆ. ಮಾರ್ಗನ್ ಕೆಕೆಅರ್ ಹಾಗೂ ಬಟ್ಲರ್ ಆರ್ ಆರ್ ತಂಡದ ಪರ ಆಡುತ್ತಿದ್ದಾರೆ.