ಜನಾಂಗೀಯ ಗಲಭೆ ನಿಲ್ಲಿಸಲು ಒತ್ತಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಅಖಿಲ ಭಾರತ ಜನವಾದಿ ಮಹಿಳಾ ಸಂಘ,
ಭಾರತ  ಪ್ರಜಾಸತ್ತಾತ್ಮಕ ಯುವಜನ ಸಂಘ ಹಾಗು ಪ್ರಗತಿ ಪರ ಸಾಹಿತಿಗಳು, ಅಂಬೇಡ್ಕರವಾದದ ಡಿಎಸ್ ಎಸ್ ಸಂಘಟನೆಗಳು ಇಂದು ಮಣಿಪುರ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ-ಪೈಶಾಚಿಕ ನಗ್ನ ಮೆರವಣಿಗೆ ಖಂಡಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಪರಾಧಿಗಳನ್ನು  ಕಠಿಣ ಶಿಕ್ಷಗೆ ಒಳಪಡಿಸಲು ಆಗ್ರಹಿಸಿ ಹಾಗೂ ಜನಾಂಗೀಯ ಗಲಭೆ ನಿಲ್ಲಿಸಲು ಒತ್ತಾಯಿಸಿದರು.
ಮಣಿಪುರದಲ್ಲಿ ಮೂರು ಕುಕಿ ಮಹಿಳೆಯರ ಮೇಲೆ ನಡೆದ ಕ್ರೂರ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ  ಕೃತ್ಯ ಇಡೀ ಮಾನವ ಕುಲವೇ ತಲೆತಗ್ಗಿಸುವ ಆಘಾತಕಾರಿ ಘಟನೆ ಎಂದರು.
ಸಂಘಟನೆಯ ಮುಖಂಡರುಗಳಾದ ಜೆ. ಸತ್ಯ ಬಾಬು ಜೆ. ಚಂದ್ರ ಕುಮಾರಿ, ಯರ್ರಿಸ್ವಾಮಿ.  ಪಿ ಆರ್ ವೆಂಕಟೇಶ್ ಮೊದಲಾದವರು ಇದ್ದರು.

One attachment • Scanned by Gmail