ಜನಾಂಗದ ಉನ್ನತಿಗೆ ಶ್ರಮಿಸುವುದು ಅನಿವಾರ್ಯ

ಕೋಲಾರ,ನ,೯-ಜಗತ್ತಿನ ಸೃಷ್ಟಿ, ಸ್ಥಿತಿ ಲಯಗಳ ಕಾರಣಬೂತರು ನಿರಾಕಾರ ನಿರ್ಗುಣ ದೇವರಾಗಿದ್ದಾರೆ, ಮಾನವರಾದ ನಾವು ಆಧ್ಯಾತ್ಮಿಕ ಚಿತ್ತದೊಂದಿಗೆ ಪರಮಾತ್ಮನ ಕೃಪೆಯಿಂದ ಮಾನವ ಜನಾಂಗದ ಉನ್ನತಿಗಾಗಿ ಶ್ರಮಿಸು ಅನಿವಾರ್ಯ ಎಂದು ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಸಮನ್ವಯಾಧಿಕಾರಿ ಚೇತನ್ ರವರು ಅಭಿಪ್ರಾಯ ಪಟ್ಟರು
ಬಂಗಾರ ಪೇಟೆ ತಾಲೂಕಿನ ಹುದುಕುಳ ಗ್ರಾಮದ ಮುಖ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನ ನಿರ್ಮಾಣಕ್ಕೆ ೨ ಲಕ್ಷ ರೂಗಳನ್ನು ಪ್ರಸಾದ ರೂಪದಲ್ಲಿ ನೀಡುತ್ತಾ ಮಾತನಾಡಿ ಈ ಜಗತ್ತಿನಲ್ಲಿ ಯಾರು ದೇವರನ್ನು ನಂಬುತ್ತಾರೋ ಅಂತವರಿಗೆ ಕಲ್ಲು ಸಹ ದೇವರ ಪ್ರತಿರೂಪವಾಗಿ ಪ್ರತಿಬಿಂಬಿಸಲ್ಪಡುತ್ತದೆ ಯಾರು ದೇವರನ್ನು ನಂಬುವುದಿಲ್ಲವೋ ಅಂತಹವರಿಗೆ ದೇವರು ಸಹ ಕಲ್ಲಿನಂತೆ ಗೋಚರಿಸಲ್ಪಡುತ್ತದೆ ,ಆದರೆ ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘ ಲೋಕದ ಕಲ್ಯಾಣಕ್ಕಾಗಿ ಎಲ್ಲರ ಒಳಿತಿಗಾಗಿ ಮಹತ್ತರವಾದ ಸೇವೆ ಸಲ್ಲಿಸುತ್ತಿದೆ ಎಂದರು..
ಶತ ಶತಮಾನಗಳಿಂದ “ಭಕ್ತಿ ಮಂಜುನಾಥನಲ್ಲಿ ಭಯ ಅಣ್ಣಪ್ಪನಲ್ಲಿ “ಎಂಬಂತೆ ಶ್ರೀ ಧರ್ಮಸ್ಥಳ ಕ್ಷೇತ್ರ ಕ್ಷೇಮಾಭಿವೃದ್ಧಿ ಸಂಘವು ಅಭಯ, ಅನ್ನ ,ಅಕ್ಷರ, ಆರೋಗ್ಯ, ಶಿಕ್ಷಣ, ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಶ್ರಮವಹಿಸುತ್ತದೆ ,ಅನೇಕ ದೇವಾಲಯಗಳ ಜೀರ್ಣೋದ್ಧಾರಗಳಿಗೆ ಸಹಾಯ ಹಸ್ತ ನೀಡುತ್ತಿದೆ ಈ ತಾಲೂಕಿನಲ್ಲಿ ೧೩ ದೇವಸ್ಥಾನಗಳಿಗೆ ೩೨ ಲಕ್ಷ ರೂಗಳ ಅನುದಾನವನ್ನು ಕೇವಲ ಒಂದತಿಂಗಳಲ್ಲಿ ನೀಡಲಾಗಿದೆ ಎಂದರು..
ಕೆರೆಯ ನೀರನ್ನು ಕೆರೆಗೆ ಚೆಲ್ಲಿ –
ಶ್ರೀ ಧರ್ಮಸ್ಥಳದ ಧರ್ಮ ಕರ್ತರಾದ ವೀರೇಂದ್ರ ಹೆಗ್ಗಡೆಯವರು “ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಭಕ್ತಾದಿಗಳಿಂದ ಬಂದಂತಹ ಕಾಣಿಕೆ ರೂಪದ ಹಣವನ್ನು ಲೋಕ ಕಲ್ಯಾಣಾರ್ಥಕವಾಗಿ ವಿವಿಧ ರೀತಿಯ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಒದಗಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ದೇವಸ್ಥಾನದಜೀಣೋದ್ದಾರ –
ನಂತರ ನಿಕಟ ಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್‌ಎಂ ರವಿ ಮಾತನಾಡಿ ಮಹಾಪ್ರಸಾದ ರೂಪದಲ್ಲಿ ೨ ಲಕ್ಷ ರೂಗಳನ್ನು ನೀಡಲಾಗಿದೆ ಈ ಪ್ರಸಾದ ದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದೆ ಎಂದು ಹೇಳಿದರು.

ಚಿಕ್ಕ ಅಂಕಂಡ ಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀರಾಮ್, ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲ್ವಿಚಾರಕ ಅಧಿಕಾರಿ ಜನಾರ್ಧನ್, ಟ್ರಸ್ಟನ ಗೌರವ ಅಧ್ಯಕ್ಷ ಪಿಳ್ಳಪ್ಪ ,ಉಪಾಧ್ಯಕ್ಷ ಆನಂದ್, ಸದಸ್ಯರಾದ ಮುನಿರಾಜಪ್ಪ ನಾರಾಯಣಪ್ಪ, ಚಂದ್ರಪ್ಪ, ರಾಮು, ಮುನಿಸ್ವಾಮಿ, ಹರೀಶ್ ,ನಾಗರಾಜು, ಕಾರ್ಯದರ್ಶಿ ಚಲಪತಿ, ಖಜಾಂಚಿ ಮುನಿಸ್ವಾಮಿ ,ಇನ್ನೂ ಹಲವರು ಉಪಸ್ಥಿತರಿದ್ದರು.