
ಸಂಜೆವಾಣಿ ವಾರ್ತೆ
ಬಳ್ಳಾರಿ ಮೇ 7: ನಗರ ಕ್ಷೇತ್ರದ ಜನಹಿತ ಪಕ್ಷದ ಅಭ್ಯರ್ಥಿ ಹಂಪೇರು ಅಲೇಶ್ವರಗೌಡ ಅವರು ನಗರದ ಲಾರಿ ಟರ್ಮಿನಲ್ ನಲ್ಲಿ ಮತಯಾಚನೆ ಮಾಡಿದರು
ಈ ಸಂದರ್ಭ ದಲ್ಲಿ ಲಾರಿ ಮಾಲೀಕರು, ಲಾರಿ ಚಾಲಕರು ಮತ್ತು ಕ್ಲೀನರ್ ಗಳನ್ನು ಭೇಟಿ ಮಾಡಿ ತಮ್ಮ ಗುರುತಾದ ,ಲಾರಿಗೆ, ಮತ ನೀಡುವಂತೆ ಮನವಿ ಮಾಡಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ತಾವು ಸ್ಪಂದಿಸುವುದಾಗಿ ತಿಳಿಸಿದರು.
ನಗರದಲ್ಲಿ ನೀರಿನ ಸಮಸ್ಯೆ ಇದ್ದು ದಿನ ಬಿಟ್ಟು ದಿನ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸುತ್ತೇನೆ, ಮನೆ ರಹಿತರಿಗೆ ಮನೆ ಕಲ್ಪಿಸಲಾಗುವುದು, ಪಟ್ಟಾ ಇಲ್ಲದ ಮನೆಗಳಿಗೆ ಪಟ್ಟಾ ಕೊಡಿಸಲಾಗುವುದು, ಆಸ್ಪತ್ರೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಿ ಜನರಿಗೆ ನೆರವಾಗುವುದಾಗಿಯೂ, ಒಳ ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದೆಂದು ಭರವಸೆ ನೀಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ಸಂಸ್ಥಾಪಕರಾದ ವಿ ಜಯರಾಮ್, ಜಿಪಿ ರಾವ್ ಇನ್ನೂ ಅನೇಕ ಬೆಂಬಲಿಗರಿದ್ದರು