
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25; ನಗರದ ವಿವಿಧ ಪ್ರದೇಶಗಳಿಗೆ ತೆರಳಿದ ನಗರ ಕ್ಷೇತ್ರದ ಕೆಅರ್ ಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣ ಅವರು ಜನರ ಹಿತ ಕಾಯಲು ಪುಟ್ಬಾಲ್ ಚಿನ್ಹೆಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಇಡೀ ಜಿಲ್ಲೆಯಲ್ಲಿ ಇಬ್ಬರು ಮಾತ್ರ ಮಹಿಳೆಯರು ಸ್ಪರ್ಧೆ ಮಾಡಿದ್ದಾರೆ. ಅದೂ ಬಳ್ಳಾರಿ ನಗರದ 24 ಜನ ಸ್ಪರ್ಧಿಗಳಲ್ಲಿ ನಾನೊಬ್ಬ ಮಹಿಳೆ ಇದ್ದೇನೆ. ಮಹಿಳೆಯರಿಗೆ ಆಧ್ಯತೆ ನೀಡುವ ದೃಷ್ಟಿಯಿಂದ ಒಮ್ಮೆ ನೀವು ಈ ಮಹಿಳೆಗೆ ಮತ ನೀಡಿ ಆಶಿರ್ವದಿಸಿ ಎಂದರು.
ವಿವಿಧ ಉದ್ಯಾನವನಗಳಲ್ಲಿ ದ್ದ ಮಹಿಳೆಯರನ್ನು ಭೇಟಿ ಮಾಡಿ ಮೊದಲ ಬಾರಿಗೆ ಬಳ್ಳಾರಿ ನಗರದಲ್ಲಿ ಮಹಿಳೆಯನ್ನು ಶಾಸಕಿಯನ್ನಾಗಿ ಮಾಡಿ ಎಂದು ಕೋರಿದರು.