ಜನಸ್ಪಂದನ ಸೇವಾ ಸಂಸ್ಥೆ : ಸರ್ಕಾರಿ ಶಾಲೆಯಲ್ಲಿ ಪಠ್ಯಪುಸ್ತಕ ವಿತರಣೆ

ಮಾನ್ವಿ.ಆ.೦೫- ಜನಸ್ಪಂದನ ಸೇವಾ ಟ್ರಸ್ಟ (ರಿ) ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡಲಾಗಿದ್ದು.
ಪಟ್ಟಣದ ಕೋನಾಪುರ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇಯ ತರಗತಿಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ರಾಮು ದೊಡ್ಡಿ ಹೇಳಿದರು.ಪಟ್ಟಣದ ಕೋನಾಪುರ ಪೇಟೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದ ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವೀರೇಶ ನಾಯಕ ಬೆಟ್ಟದೂರ ಸರಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಉನ್ನತವಾದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ನೀವು ಮುಂದೆ ಉನ್ನತವಾದ ಸ್ಥಾನಗಳನ್ನು ಪಡೆದುಕೊಳ್ಳಿ ಎಂದು ಉರಿದುಂಬಿಸಿದರು.
ಮುಖ್ಯ ಅಥಿತಿಯಾಗಿ ಜೆ.ಡಿ.ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷರಾದ ಪಿ.ರವಿಕುಮಾರ ಮಾತನಾಡಿ ಬಡತನದಲ್ಲಿ ಬೆಳೆದ ರಾಮು ದೊಡ್ಡಿ ಬಡ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಕೊಡುವುದು ಶ್ಲಾಘನೀಯ. ಮಹಾನ ವ್ಯಕಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಸುರೇಶ ಕುರ್ಡಿ ಸರಕಾರಿ ನೌಕರ ಸಂಘದ ಜಿಲ್ಲಾ ಉಪಾದ್ಯಕ್ಷರು ಪ್ರಾಸ್ತವಿಕ ನುಡಿಗಳನ್ನು ಟ್ರಸ್ಟಿನ ಬಗ್ಗೆ ಹೇಳಿದರು. ಅದೇ ರೀತಿಯಾಗಿ ಇನ್ನೋರ್ವ ಮುಖ್ಯ ಅಥಿತಿಗಳಾಗಿ ಆಗಮಿಸಿದ ಆಂಜನೇಯ ನಸಲಾಪುರ ಉಪನ್ಯಾಸಕರು ಮಾತನಾಡಿ ವಿದ್ಯಾರ್ಥಿಗಳಲ್ಲಿ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಬೇಕು. ಕಟ್ಟಿಕೊಂಡ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು.
ನಂತರ ಮುಖ್ಯಶಿಕ್ಷಕರು ಅಧ್ಯಕ್ಷರ ನುಡಿಯನ್ನ ನುಡಿದು ರಾಮು ದೊಡ್ಡಿಯವರು ಬಡಮಕ್ಕಳ ಸೇವೆಗೆ ಶುಭ ಹಾರೈಸಿ ಮುಂದಿನ ದಿನಗಳಲ್ಲಿ ನಿಮ್ಮ ಸಂಸ್ಥೆಯಿಂದ ಹೆಚ್ಚಿನ ಸೇವೆಯನ್ನು ಮಾಡುವಂತ ಆ ಶಕ್ತಿ ದೇವರು ನೀಡಲಿ ಎಂದು ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದಾಗುವ ಅನುಕೂಲಗಳ ಕುರಿತು ಮಾಹಿತಿ ನೀಡಿದರು.
ನಂತರ ಈ ಕಾರ್ಯಕ್ರಮದಲ್ಲಿ ಕಾಲೇಶ ಸ್ವಾಮಿ, ಶಂಕರ ಜಗ್ಲಿ, ರಾಜು ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು. ರಾಮಪ್ಪ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರೆ, ಜ್ಯೋತಿ ಶಿಕ್ಷಕರು ಸ್ವಾಗತಿಸಿದರು, ಶಿವಮ್ಮ ಶಿಕ್ಷಕರು ವಂದಿಸಿದರು.