ಜನಸ್ಪಂದನಾ ಟ್ರಸ್ಟ್‌ನಿಂದ ನೀರಿನ ಅರವಟ್ಟಿಗೆ ಆರಂಭ

ಮಾನ್ವಿ ಎ ೦೧ :- ತಾಲೂಕಿನ ಜನಸ್ಪಂದನಾ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಬೇಸಿಗೆ ಪ್ರಯುಕ್ತ ಸಾರ್ವಜನಿಕರಿಗೆ ನೀರಿನ ದಾಹವನ್ನು ತಣಿಸುವುದಕ್ಕಾಗಿ ಶುದ್ದೀಕರಣ ನೀರಿನ ಅರವಟ್ಟಿಗೆಯನ್ನು ಸ್ಥಾಪಿಸಿ ಆಸ್ಪತ್ರೆಗೆ ಆಗಮಿಸುವವರಿಗೆ ಅನುಕೂಲ ಮಾಡಿದ್ದಾರೆ.
ನಂತರ ಮಾತಾನಾಡಿದ ಅವರು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಯಾದ ಬಿಸಿಲು ಆಗಮಿಸುವ ಕಾರಣದಿಂದ ಅನೇಕರಿಗೆ ಕುಡಿಯುವ ನೀರಿನ ದಾಹ ಉಂಟಾದ ಸಂದರ್ಭದಲ್ಲಿ ಅವರಿಗೆ ಹಣ ಕೊಟ್ಟು ನೀರು ಖರೀದಿಸಲು ಸಾಧ್ಯವಾಗುವುದಿಲ್ಲ ಆದರಿಂದ ನಮ್ಮ ಸಂಸ್ಥೆಯು ಬಡವರಿಗೆ ಅನುಕೂಲ ಆಗುವ ಉದ್ದೇಶದಿಂದ ಈ ಶುದ್ದೀಕರಣ ನೀರಿನ ಅರವಟ್ಟಿಗೆಯನ್ನು ಸ್ಥಾಪಿಸಲಾಗಿದೆ ಎಂದರು..

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮುದೊಡ್ಡಿ, ಪದಾಧಿಕಾರಿಗಳು, ಡಾ ದೀಪಾ, ಬಸವರಾಜ, ರಾಮು ಹೊಳೆಯಪ್ಪನವರು,ಸಲ್ಲಾವುದ್ದೀನ್, ಪಿ ರವಿಕುಮಾರ್, ಜಗನ್ನಾಥ ಚೌಧರಿ, ಆಕಾಶ ಮ್ಯಾತ್ರೀ,ಬಸವರಾಜ ನಿಲೋಗಲ್, ಶಿವರಾಜ ದೊಡ್ಡಿ ಸೇರಿದಂತೆ ಕನಿಷ್ಠ ಐವತ್ತಕ್ಕೂ ಹೆಚ್ಚಿನ ಸ್ನೇಹಿತರ ಬಳಗದವರು ಇದ್ದರು.