ಜನಸ್ನೇಹಿ ಪೊಲೀಸ್ ಇಲಾಖೆಗೆ ಕೈಜೋಡಿಸಿ; ಸತೀಶ್ ಕುಮಾರ್

ಹರಿಹರ.ಜ.೧೨; ಸಮಾಜದಲ್ಲಿ ಶಾಂತಿ ನೆಲೆಸಲು  ಪ್ರತಿಯೊಬ್ಬರು ಪೋಲಿಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ನೂತನ ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ ಯು  ಹೇಳಿದರು  ಹರಿಹರ ತಾಲ್ಲೂಕಿಗೆ ವೃತ್ತ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು  ಇಸ್ಪೀಟ್ ಜೂಜಾಟ ಮಟ್ಕಾ ಕಳ್ಳತನ ದೊಂಬಿ ಗಲಾಟೆ ಸಮಾಜ ಘಾತಕ ಪ್ರಕರಣಗಳನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು. ಸಾರ್ವಜನಿಕರ ಆಸ್ತಿಪಾಸ್ತಿ ಮಾನ ಹಾನಿ ರಾಜಕೀಯ ಕಾರ್ಯಕ್ರಮಗಳು  ಹಬ್ಬ ಹರಿದಿನಗಳು ಜಾತ್ರಾ ಮಹೋತ್ಸವದಲ್ಲಿ ಬಂದೋಬಸ್ತ್ ಏರ್ಪಡಿಸಿ ಪೋಲಿಸರು  ಕುಟುಂಬವನ್ನೇ ಲೆಕ್ಕಿಸದೆ  ಹಗಲು ರಾತ್ರಿ ಎನ್ನದೆ ಕರ್ತವ್ಯವನ್ನು ನಿರ್ವಹಿಸುತ್ತ ಬಂದಿರುತ್ತೇವೆ ಅಪರಾಧ ಪ್ರಕರಣಗಳನ್ನು ಮುಕ್ತ ಗೊಳಿ ಸುವುದಕ್ಕೆ ಮತ್ತು ಸಮಾಜದಲ್ಲಿ ಶಾಂತಿ ನೆಮ್ಮದಿ ಸೌಹಾರ್ದತೆ ಸಾಮರಸ್ಯ ನೆಲಸಬೇಕಾದರೆ  ಕಾನೂನು ಸುವ್ಯವಸ್ಥೆ ಸಂಚಾರ ನಿಯಮಗಳನ್ನು ತಪ್ಪದೆ ಪ್ರತಿಯೊಬ್ಬರೂ ಪಾಲಿಸಬೇಕು ಜನಸ್ನೇಹಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದರು  ಚನ್ನಗಿರಿ ಹಿರಿಯೂರು ಗ್ರಾಮಾಂತರ ಇತರೆ ಗ್ರಾಮಗಳಲ್ಲಿ ಪಿಎಸ್ಸೈ ಯಾಗಿ ಕರ್ತವ್ಯಗಳನ್ನು ನಿರ್ವಹಿಸಿ ನಂತರ ದಾವಣಗೆರೆ ಡಿಎಸ್ ಪಿ ವಿಭಾಗದಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿ  ಐತಿಹಾಸಿಕ ಸ್ಥಳಕ್ಕೆ ವರ್ಗಾವಣೆಯಾಗಿ ಬಂದಿದ್ದೇನೆ  ಚುನಾಯಿತ  ಪ್ರತಿನಿಧಿಗಳು ಊರಿನ ಹಿರಿಯ ಮುಖಂಡರುಗಳು ಸಂಘ ಸಂಸ್ಥೆಯವರು ಸಾರ್ವಜನಿಕರು ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಸಲಹೆ ಸಹಕಾರವನ್ನು ನೀಡಬೇಕು ಉತ್ತಮವಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದರು ಈ ಹಿಂದೆ 1ವರ್ಷಗಳ ಕಾಲ ಹರಿಹರದಲ್ಲಿ ವೃತ್ತ ನಿರೀಕ್ಷಕರಾಗಿ  ಶಿವಪ್ರಸಾದ್ ಎಂ ಇವರು  ತಮ್ಮ ಕರ್ತವ್ಯವನ್ನು ನಿಷ್ಠೆ ಪ್ರಾಮಾಣಿಕತೆಯಿಂದ ನಿರ್ವಹಿಸಿ ದಾವಣಗೆರೆಗೆ ವರ್ಗಾವಣೆ ಆಗಿರುತ್ತಾರೆ ಎಂದು ಹೇಳಿದರು ಮಲೆಬೆನ್ನೂರು ಪಿಎಸ್ ಐ ವೀರಬಸಪ್ಪ ಕುಸಲಾಪುರ .ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ ಐ ರವಿಕುಮಾರ್ ಡಿ. ನಗರ ಠಾಣೆ ಪಿಎಸ್ ಐ ಸುನಿಲ್ ಬಸವರಾಜ ತೇಲಿ .ನೂತನ  ವೃತ್ತ ನಿರೀಕ್ಷಕರಿಗೆ ಸ್ವಾಗತ ಕೋರಿದರು ಈ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳಾದ ಲಿಂಗರಾಜ್. ಕರಿಯಪ್ಪ. ಶಿವರಾಜ್ ಎಸ್ .ಸತೀಶ್ ಟಿ ವಿ. ಶಿವಕುಮಾರ್ ಜೆ .ಇಲಿಯಾಸ್ ಅಹ್ಮದ್ .ನಾಗರಾಜ್ .ಮುರಳೀಧರ ವಿ ವಿ .ಸಿದ್ದಣ್ಣ .ನೇತ್ರಾವತಿ . ಇದ್ದರು