ಜನಸ್ನೇಹಿ ಪೊಲೀಸರಾಗಿ : ಪಿ. ಹರಿಶೇಖರನ್

ಧಾರವಾಡ, ನ 15: ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು, ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮವಾದ ಸಂಪರ್ಕ ಮತ್ತು ಸೌಹಾರ್ದಯುತವಾದ ಸಂಬಂಧ ಹೊಂದಿದ್ದರೆ ಮಾತ್ರ ಜನಸ್ನೇಹಿ ಪೆÇಲೀಸ್ ಆಗಲು ಸಾಧ್ಯ ಎಂದು ಪೆÇಲೀಸ್ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕರಾದ ಪಿ. ಹರಿಶೇಖರನ್ ಹೇಳಿದರು.
ಅವರು ಇಂದು ಧಾರವಾಡ ಪೆÇಲೀಸ್ ತರಬೇತಿ ಶಾಲೆಯಿಂದ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ 7 ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪೆÇಲೀಸ್ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳು ಅಸಹಾಯಕರ, ಬಡವರ ಬಗ್ಗೆ ಸದಾ ಕಾಳಜಿ ಹೊಂದಿರಬೇಕು ಎಂದು ಹೇಳಿದರು.
ಪೆÇಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸಾರ್ವಜನಿಕರ ಸಂಪರ್ಕದ ಕೊರತೆ ಇದ್ದಾಗ ಅಲ್ಲಿ ಕಾನೂನು, ಸುವ್ಯವಸ್ಥೆಯ ಕೊರತೆ ಉಂಟಾಗುತ್ತದೆ. ಜನರೊಂದಿಗೆ ಬೆರೆತು ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಪೆÇಲೀಸ್ ಇಲಾಖೆ ಜನಸಂಪರ್ಕ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ಇಲಾಖೆಗೆ ಇತ್ತೀಚೆಗೆ ಪದವಿ, ಸ್ನಾತಕೋತ್ತರ ಪದವಿಧರರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಅರ್ಹತೆ ಇರುವಂತವರಿಗೆ ಹೆಚ್ಚುವರಿ ಜವಾಬ್ದಾರಿ, ಕಾಲಕಾಲಕ್ಕೆ ಪದೋನ್ನತಿ ನೀಡಲು ಸರಕಾರ ಕ್ರಮವಹಿಸಿದೆ. ತಾಂತ್ರಿಕ ಶಿಕ್ಷಣ ಪಡೆದ ಅನೇಕರು ಪೆÇಲೀಸ್ ಇಲಾಖೆಗೆ ಬರುತ್ತಿದ್ದು, ಅವರಿಗೆ ನೀಡುವ ತರಬೇತಿ ಪಠ್ಯದಲ್ಲಿ ಸೈಬರ್ ಕ್ರೈಮ್, ಸೆಲ್ ಪೆÇೀನ್ ಟೆಕ್ನಾಲಜಿ ಮುಂತಾದ ಪ್ರಸ್ತುತ ಅಗತ್ಯ ಇರುವ ವಿಷಯಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೆÇಲೀಸ್ ತರಬೇತಿ ಶಾಲೆಯ ಸ್ಮರಣ ಸಂಚಿಕೆಯಾದ ಸ್ಪೂರ್ತಿ ಅನ್ನು ಬಿಡುಗಡೆ ಮಾಡಿದರು.
ಪೆÇೀಲಿಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪೆÇಲೀಸ್ ಅಧೀಕ್ಷಕ ಉಮೇಶ ಪಿ. ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ತರಬೇತಿ ಶಾಲೆಯ ವರದಿ ವಾಚಿಸಿದರು. ಉಪ ಪ್ರಾಂಶುಪಾಲರಾದ ಡಿಎಸ್‍ಪಿ ಹರಿಶ್ಚಂದ್ರ ನಾಯ್ಕ ವಂದಿಸಿದರು.
ಕಾರ್ಯಕ್ರಮದಲ್ಲಿ ಪೆÇಲೀಸ್ ಅಧಿಕಾರಿಗಳಾದ ಆರ್.ಬಿ. ಬಸರಗಿ, ಫೈಜುದ್ದೀನ, ಹಮಜಾ ಹುಸೇನ್, ಅಮ್ ಸಿದ್ದ ಗೋಂದಳಿ, ಶರಣಪ್ಪ ಸುಳಿಭಾವಿ ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.