ಜನಸ್ನೇಹಿ ಅಧಿಕಾರಿಗಳಿಂದ ಸರ್ಕಾರದ ಜನಪ್ರಿಯತೆ ಹೆಚ್ಚಿದೆ : ಬಾಡದ ಆನಂದರಾಜ್

ದಾವಣಗೆರೆ.ಜು.27;:  ಜನಸ್ನೇಹಿ ಅಧಿಕಾರಿಗಳಿಂದ ಸರ್ಕಾರದ ಜನಪ್ರಿಯತೆ ಹೆಚ್ಚಿದೆ ಎಂದು ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್ ಹೇಳಿದ್ದಾರೆ.ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ವೇಳೆ ಮಾತನಾಡಿದ ಅವರು, ಅಧಿಕಾರಿಗಳು, ಜನಪ್ರತಿನಿಧಿಗಳು ಜೋಡೆತ್ತುಗಳಂತೆ ಕೆಲಸ ಮಾಡಿದರೆ ಸರ್ಕಾರದ ಯೋಜನೆಗಳು ಜನರನ್ನು ತಲುಪುತ್ತವೆ ಎಂದರು. ವಿಶ್ವನಾಥ್ ಮುದ್ದಜ್ಜಿ ಎಲ್ಲರಿಗೂ ಇಷ್ವಾವಾಗುವಂತ ಕೆಲಸ ಮಾಡುತ್ತಿದ್ದಾರೆ, ಜಾತಿ, ಭೇಧ ಮಾಡದೇ, ಧರ್ಮ ತಾರತಮ್ಯ ಮಾಡದೇ ಅತ್ಯುದ್ಭುತ ಕೆಲಸ ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ದಾವಣಗೆರೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂಥ ಅಧಿಕಾರಿ ಪಡೆದಿರುವ ನಾವೇ ಧನ್ಯರು ಎಂದು ಹೇಳಿದ ಅವರು, ಸರ್ಕಾರದ ಉನ್ನತ ಅಧಿಕಾರಿಗಳು ಬಡವರ ಶೋಷಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇಂಥವರಲ್ಲಿ ಮುದ್ದಜ್ಜಿ ಕೂಡ ಒಬ್ಬರು ಎಂದು ಶ್ಲಾಘಿಸಿದರು.ಈ ವೇಳೆ ನಗರ ಪಾಲಿಕೆ ಸದಸ್ಯೆ ಶಿಲ್ಪಾ ಜಯಪ್ರಕಾಶ್.ಕಾಂಗ್ರೆಸ್ ಹಿರಿಯಾ ಮುಖಂಡ ಸೋಮ್ಲಾಪುರ ಹನುಮಂತಪ್ಪ. ನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೇಲ್. ಸಾಮಾಜಿಕ ಕಾರ್ಯಕರ್ತ ಮಹಾಂತೇಶ್ ವಿ‌. ಒಣರೊಟ್ಟಿ ಅವರು ಬಸವಣ್ಣರ ಚಿತ್ರವಿದ್ದ ಫಲಕ ನೀಡಿದರು‌. ಆನಂದರಾಜ್ ಮತ್ತಿತರರು ವಿಶ್ವನಾಥ್ ಮುದ್ದಜ್ಜಿ ಅವರಿಗೆ ಶಾಲು ಹಾಕಿ ಸನ್ಮಾನಿಸಿ ಜನುಮದಿನದ ಶುಭಾಶಯ ಕೋರಿದರು.