ಜನಸೇವೆಯ ವೈದ್ಯ ಮಲ್ಲೆಯವರಿಗೆ ದ. ಕ. ಸಂಘ ಅಭಿನಂದನೆ

ಕಲಬುರಗಿ.ಸೆ.7:ಬಡವರ ಮತ್ತು ಅಶಕ್ತರ ಪಾಲಿನ ವೈದ್ಯರಾಗಿ “10 ರೂ. ಡಾಕ್ಟರ್” ಎಂದೇ ಪ್ರಸಿದ್ಧಿ ಪಡೆದ ಕಲಬುರಗಿಯ ಖ್ಯಾತ ವೈದ್ಯರಾದ ಡಾ. ಮಲ್ಲಾ ರಾವ್ ಮಲ್ಲೆ ಅವರ ಅನುಪಮ ಸೇವೆಗೆ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಇತ್ತಿಚಿಗೆ ಪ್ರಶಂಸಾಪತ್ರ ಕಳುಹಿಸಿ ಶುಭಕೋರಿದ್ದಾರೆ.
ಡಾ. ಮಲ್ಲೆಯವರು ಜನಸೇವೆಯನ್ನು ಇನ್ನೂ ಮುಂದುವರಿಸಲಿ ಎಂದು ಹಾರೈಸಿ ಕಲಬುರಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮತ್ತು ಕಾರ್ಯದರ್ಶಿ ರಾಮಕೃಷ್ಣ ಕೆದಿಲಾಯ ಅವರು ‘ಅನನ್ಯ ಮಹಾದೇವ’ ಕೃತಿ ನೀಡಿ ಇತ್ತೀಚೆಗೆ ಗೌರವಿಸಿದರು.