ಜನಸೇವೆಯೇ ಮುಖ್ಯ: ಬಿ. ದಯಾನಂದ

ಕಲಬುರಗಿ.ಏ.5 ಸಾಮಾನ್ಯರಂತೆ ಜೀವನ ನಡೆಸುವುದಕ್ಕಾಗಿ ಪೆÇಲೀಸ್ ಇಲಾಖೆಗೆ ಸೇರುವುದು ಸರಿಯಾದ ಆಯ್ಕೆಯಲ್ಲ. ಇಲ್ಲಿ ಸಮಾಜದ ರಕ್ಷಣೆ, ಸುಭದ್ರ ದೇಶ ನಿರ್ಮಾಣಕ್ಕಾಗಿ ಪೆÇಲೀಸ್ ಇಲಾಖೆಗೆ ಸೇರಲು ಸದಾವಕಾಶ ಇದೆ ಎಂದು ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಬಿ. ದಯಾನಂದ ಅವರು ತಿಳಿಸಿದರು.
ಇಂದು ನಗರದ ಹೊರವಲಯದ ನಾಗನಹಳ್ಳಿಯಲ್ಲಿರುವ ಪೆÇಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ನಡೆದ 3ನೇ ತಂಡದ ಪಿ.ಎಸ್.ಐ (ಗುಪ್ತವಾರ್ತೆ), 5ನೇ ತಂಡದ ಪಿ.ಎಸ್.ಐ (ನಿಸ್ತಂತು) ಹಾಗೂ 5ನೇ ತಂಡದ ವಿಶೇಷ ಆರ್.ಎಸ್.ಐ, ಆರ್.ಎಸ್.ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪೆÇಲೀಸ್ ಇಲಾಖೆ ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಎದುರಿಸಲು ನೀವೆಲ್ಲರೂ ಸಿದ್ದಗೊಳ್ಳಬೇಕು. ಇಲಾಖೆಗೆ ಯಾವ ಉದ್ದೇಶ ಇಟ್ಟುಕೊಂಡು ಸೇರಿದ್ದಿರೋ ಅದೇ ಉದ್ದೇಶ ನಿಮ್ಮ ಸೇವಾವಧಿಯಲ್ಲಿ ದಾರಿದೀಪವಾಗಬೇಕು. ಇಂದು ನಿರ್ಗಮನ ಪಥಸಂಚಲದಲ್ಲಿ ಭಾಗಿಯಾಗಿರುವ 108 ಪ್ರಶಿಕ್ಷಣಾರ್ಥಿಗಳು ತಮ್ಮ ಮುಂದಿನ ಸೇವಾವಧಿಯಲ್ಲಿ ಒಂದು ವರ್ಷದ ಮಟ್ಟಿಗೆ ಹೆಚ್ಚಿನ ತರಬೇತಿ ಪಡೆದು, ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಲು ಅಣಿಯಾಗಬೇಕು ಎಂದು ಸಲಹೆ ನೀಡಿದರು.
ನಾಗನಹಳ್ಳಿ ಪಿ.ಟಿ.ಸಿ. ಪ್ರಾಂಶುಪಾಲ ಮತ್ತು ಪೆÇಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಸಂಸ್ಥೆಯ ವರದಿ ವಾಚನ ಮಾಡಿದರು.
ಬಹುಮಾನ ವಿತರಣೆ:
ತರಬೇತಿ ಸಮಯದಲ್ಲಿ ಏರ್ಪಡಿಸಿದ ಒಳಾಂಗಣ ವಿಭಾಗದಲ್ಲಿ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಪಿ.ಎಸ್.ಐ (ಗುಪ್ತವಾರ್ತೆ)ಯ ಚೈತ್ರ ಅವರು ಹೊರಹೊಮ್ಮಿದರೆ, ಪಿ.ಎಸ್.ಐ (ನಿಸ್ತಂತು) ವಿಭಾಗದ ಸೈಯ್ಯದ ಹರ್ಮೆನ್ ಸರ್ವರಿ ಒಳಾಂಗಣ ಕ್ರೀಡೆಯಲ್ಲಿ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಪ್ರಶಸ್ತಿ ಪಡೆದುಕೊಂಡರು. ಇನ್ನು ವಿಶೇಷ ಆರ್.ಎಸ್.ಐ,ಆರ್.ಎಸ್.ಐ ಒಳಾಂಗಣ ವಿಭಾಗದಲ್ಲಿ ಅಮರೇಶ ಬಿರಾದಾರ ಪ್ರಥಮ ಸ್ಥಾನ ಪಡೆದರು. ಹೊರಾಂಗಣ ಕ್ರೀಡೆಯಲ್ಲಿ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಮಹಾಲಿಂಗ ಗಂಗಪ್ಪತೇಲಿ ಬಹುಮಾನ ಪಡೆದರು. 9 ಎಂ.ಎಂ ಪಿಸ್ತೂಲ್ ಶೂಟಿಂಗ್‍ನಲ್ಲಿ ಪರಶುರಾಮ ಕಾಂಬಳೆ ಪ್ರಥಮ ಸ್ಥಾನ ಗಳಿಸಿದ, ಎಸ್.ಎಲ್.ಆರ್ ರೈಫಲ್ ಶೂಟಿಂಗ್‍ನಲ್ಲಿ ಅಂಬರೀಷ ಮೇತ್ರಿ ಪ್ರಥಮ ಸ್ಥಾನ ಪಡೆದರು. ಒಟ್ಟಾರೆ ಆಲ್ ರೌಂಡರ್ ಬೆಸ್ಟ್ ಸ್ಥಾನ ಗಳಿಸಿದ ಮಹಾಲಿಂಗ ಗಂಗಪ್ಪತೇಲಿ ಅವರಿಗೆ ಅತಿಥಿ ಗಣ್ಯರು ಬಹುಮಾನ ನೀಡಿ ಗೌರವಿಸಿದರು.
ನಿರ್ಗಮನ ಪಥಸಂಚಲನದ ಪರೇಡನ ಪ್ರಧಾನ ದಂಡ ನಾಯಕನಾಗಿ ಡಿ.ಎ.ಆರ್ ಆರಕ್ಷಕ ಉಪ ನಿರೀಕ್ಷಕ ಪುನೀತಕುಮಾರ ಸಿ.ಎಸ್ ಹಾಗೂ ದ್ವಿತೀಯ ದಂಡ ನಾಯಕನಾಗಿ 4ನೇ ಪಡೆಯ ಎಸ್.ಆರ್.ಪಿ ಆರಕ್ಷಕ ಉಪ ನಿರೀಕ್ಷಕ ಅಭಿಷೇಕ ನಾಡಗೌಡರ್ ಅವರು ಮುಂದಾಳತ್ವ ವಹಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಕೆ. ಎಸ್. ಆರ್. ಪಿ 6ನೇ ಪಡೆಯ ಕಾಮಾಡೆಂಟ್ ಬಸವರಾಜ ಜಿಳ್ಳೆ ಹಾಗೂ ಪೆÇಲೀಸ್ ಇಲಾಖೆಯ ಇನ್ನಿತರ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು. ಪಿ.ಟಿ.ಸಿಯ ಹೊರಾಂಗಣ ವಿಭಾಗದ ಡಿ.ಎಸ್.ಪಿ ಎಂ.ಎಂ. ಯಾದವಾಡ ಸ್ವಾಗತ ಕೋರಿದರು. ಪೆÇಲೀಸ್ ಇನ್ಸ್ಪೆಕ್ಟರ್ ಮೊಹಮ್ಮದ್ ಗೌಸ್ ವಂದಿಸಿದರು. ಶಶಿಕಲಾ ಜಡೆ ನಿರೂಪಣೆ ಮಾಡಿದರು.