ಜನಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡ ಸೋಮಣ್ಣ

ಬೆಂಗಳೂರು,ಜು.೨೦- ಜನತೆ ದೇವರು ಸಮಾನ ಅವರ ಸೇವೆ ಮಾಡುವುದೇ ನನ್ನ ನಿತ್ಯ ಕಾಯಕ ಜನ ಸೇವೆಯಲ್ಲೇ ಸಾರ್ಥಕತೆ ಕಂಡುಕೊಂಡಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಕರ್ನಾಟಕ ರಾಜ್ಯ ವಿ.ಸೋಮಣ್ಣಅಭಿಮಾನಿಗಳ ಬಳಗದ ವತಿಯಿಂದ ಸಚಿವ ವಿ. ಸೋಮಣ್ಣ ಅವರ ಜನ್ಮದಿನದ ಅಂಗವಾಗಿ
ಬಾಲಗಂಗಾಧರನಾಥ ಕ್ರೀಡಾಂಗಣದಲ್ಲಿ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಮತ್ತು ವಿಕಲಚೇತನರಿಗೆ ವೀಲ್ ಚೇರ್,ವಿಕಲಚೇತನ ಮಕ್ಕಳಿಗೆ ಸಮವಸ್ತ್ರ,ಅಂಧರಿಗೆ ವಾಕಿಂಗ್ ಸ್ಟಿಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಚಿವರಾದ ವಿ.ಸೋಮಣ್ಣರವರು ಕಳೆದ ೪೦ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಶಾಸಕನಾಗಿ,ಸಚಿವನಾಗಿ ಕೆಲಸ ಮಾಡಲು ನನ್ನ ಹೆಗಲಿಗೆ,ಹೆಗಲು ಕೊಟ್ಟ ಮತದಾರ ದೇವರುಗಳು ಋಣ ತೀರಿಸಲು ಆಸಾಧ್ಯ. ಮತದಾರರೆ ನನ್ನ ಪಾಲಿಗೆ ದೇವರು ಸಮಾನ ಅವರ ನೋವು,ನಲಿವುಗಳಿಗೆ ಸ್ಪಂದಿಸಿ, ಅವರ ಒಡನಾಡಿಯಾಗಿ ಅವರ ಸೇವೆ ಮಾಡುವುದೇ ನನ್ನ ನಿತ್ಯ ಕಾಯಕ ಎಂದು ಭಾವಿಸಿದ್ದೇನೆ ಎಂದರು.
ಈ ನಿಟ್ಟಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಯೆ ಸಿಗಲು ದಾಸರಹಳ್ಳಿ ಮತ್ತು ಪಂತರಪಾಳ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತಿ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ಐ.ಎ.ಎಸ್ ಮತ್ತು ಐ.ಪಿ.ಎಸ್ ಪರೀಕ್ಷೆ ತರಭೇತಿ ಕೇಂದ್ರವನ್ನು ಜ್ಞಾನಸೌಧ ಮತ್ತು ಕನಕಭವನದಲ್ಲಿ ಆರಂಭಿಸಲಾಗಿದೆ.ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿರವರ ಜನಪರ ಕಾರ್ಯಕ್ರಮಗಳು ದೇಶದ ಜನರು ಮನ ಸೋತಿದ್ದಾರೆ.ರಾಜ್ಯದಲ್ಲಿ ವಸತಿ ಇಲಾಖೆಯಲ್ಲಿ ಧ್ವನಿ ಇಲ್ಲದ,ಆಸರೆ ಇಲ್ಲದ ಲಕ್ಷಾಂತರ ಜನರಿಗೆ ವಸತಿ ಭಾಗ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಂದಾಯ ಸಚಿವರಾದ ಆರ್.ಅಶೋಕ್,ಶಾಸಕರಾದ ಪ್ರೀತಮ್ ಗೌಡ,ಚಲನಚಿತ್ರನಟ ಗಣೇಶ್,ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ. ಅರುಣ್ ಸೋಮಣ್ಣರವರು, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ,ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ಡಾ. ಎಸ್.ರಾಜು, ಮೋಹನ್ ಕುಮಾರ್,ವಾಗೇಶ್,
ದಾಸೇಗೌಡ, ಹೆಚ್. ರವೀಂದ್ರ, ರೂಪಲಿಂಗೇಶ್ವರ್, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರಾದ ಸೋಮಶೇಖರ್. ಬಿ.ಜೆ.ಪಿ.ಮುಖಂಡರುಗಳಾದ ಸಿ.ಎಂ ರಾಜಪ್ಪ, ಶ್ರೀಧರ್ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.