ಜನಸಾಮಾನ್ಯರ ಮೇಲೆ ಜಿಎಸ್ ಟಿಯ ಹೊರೆ ಹೇರಿದ ಸರ್ಕಾರ

ದಾವಣಗೆರೆ. ಜು.೨೦; ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್ ಟಿ ಜನಸಾಮಾನ್ಯರ ಮೇಲೆ ಬಹಳದೊಡ್ಡ ಹೊರೆ ಹೋರಿಸುತ್ತಿದೆ ಇಡೀ ದೇಶದ ಸಾಮಾನ್ಯ ಜನರು ತಾವು ದುಡಿದ ಹಣವನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ತೆರಬೇಕಾಗಿರುವುದು ಖಂಡನೀಯ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನರು ಖರೀದಿ ಮಾಡುವಾಗ ತೆರಿಗೆ ಹಾಗೂ ಮಾರಾಟ ಮಾಡುವಾಗಲೂ ತೆರಿಗೆ ನೀಡುವ ಪರಿಸ್ಥಿತಿ ಉಂಟಾಗಿದೆ. ಕೊಡುವ ಮತ್ತು ಪಡೆದುಕೊಳ್ಳುವ ಎರಡು ಹಂತದಲ್ಲಿ ತೆರಿಗೆ ತೆರಬೇಕಾಗಿದೆ ಇದು ಜನಸಾಮಾನ್ಯರ ಮೇಲೆ ಹೇರಿದ ಹೊರೆ. ಕೆಲ ಪ್ರಭಾವಿಗಳ ಎರಡುಪಟ್ಟು ಹಣ ಸರ್ಕಾರದ ಗಮನಕ್ಕೆ ಬಾರದೆ ಸಂಚರಿಸುತ್ತದೆ. ದೊಡ್ಡ ಮಟ್ಟದಲ್ಲಿ ಹಣ ಲೆಕ್ಕಕ್ಕೆ ಬಾರದೆ ಕಣ್ಣಿಗೆ ಕಾಣದಂತೆ ನಡೆಯುತ್ತಿದೆ ಆದರೆ ಸಾಮಾನ್ಯ ಜನರು ಕಷ್ಟಪಟ್ಟು ದುಡಿದ ಹಣ ಮಾತ್ರ ತೆರಿಗೆಗೆ ಒಳಪಡುತ್ತಿರುವುದು ದುರಂತ.ದೇಶದ ಬಂಡವಾಳದಾರರು ಒಂದು ಹೊಸ ಕೈಗಾರಿಕೆ ಪ್ರಾರಂಭಿಸಿದರೆ ೨೫ ವರ್ಷ ತೆರಿಗೆ ವಿನಾಯಿತಿ ನೀಡಲಾಗುತ್ತದೆ.ನಷ್ಟ ತೋರಿಸಿದರೆ ತೆರಿಗೆ ವಿನಾಯಿತಿ ಇದೆ ಆದರೆ ಸಾಮಾನ್ಯ ಜನರು ತೆರಿಗೆ ಪದ್ದತಿಯಿಂದ ಹೊರ ಬರುವ ಪ್ರಮೇಯವೇ ಇಲ್ಲದಾಗಿದೆ. ಯಾವುದನ್ನು ಬಿಡದ ರೀತಿಯಲ್ಲಿ ತೆರಿಗೆ ಪಡೆಯಲಾಗುತ್ತಿದೆ.ಜನಸಾಮಾನ್ಯರ ದಿನಪ್ರತಿ ಬಳಕೆಯ ವಸ್ತುಗಳಿಗೆ ತೆರಿಗೆ ವಿಧಿಸಿದೆ.ಆದರೆ ವಿರೋಧಪಕ್ಷಗಳು ಮಾತ್ರ ಸುಮ್ಮನಿವೆ.ರಾಜಕೀಯ ಪ್ರತಿರೋಧಕ್ಕಾಗಿ ಪ್ರತಿಪಕ್ಷಗಳು ಸೀಮಿತವಾಗದೆ ಉಗ್ರವಾಗಿ ಖಂಡಿಸಬೇಕು.ಜಿಎಸ್ ಟಿ ಕಮಿಟಿ ಮುಂದೆ ಎಲ್ಲಾ ರಾಜ್ಯಗಳ ಅರ್ಥ ಸಚಿವರು ಭಾಗವಹಿಸಬೇಕು.ಸಂಪೂರ್ಣವಾಗಿ ವಿರೋಧಿಸಬೇಕು.ಪ್ರತಿಪಕ್ಷಗಳು ಜನರ ಪರವಾಗಿ ಧ್ವನಿಯಾಗಬೇಕು.ಆದರೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಯಾವುದೇ ಅಂತರವಿಲ್ಲ ಎನ್ನುವಂತಾಗಿದೆ.ಜನರು ಜಾಗೃತಿಯಾಗಬೇಕು.ಜನರು ಎಲ್ಲಾ ಪಕ್ಷಗಳನ್ನು ನಿಲ್ಲಿಸಿ ಅಡ್ಡಗಟ್ಟುವ ಕೆಲಸ ಮಾಡಬೇಕು.ಆಡಳಿತ ಪಕ್ಷ ಜನಸಾಮಾನ್ಯರನ್ನು ರೈತರನ್ನು ಮರೆತಿದ್ದಾರೆ.ನೀತಿ ರಾಜಕಾರಣ ಇಲ್ಲವಾಗಿದೆ.ತೆರಿಗೆ ಪದ್ದತಿ ಬಗ್ಗೆ ವಿಪಕ್ಷಗಳ‌ ಯಾವುದೇ ಸಂದೇಶ ಇಲ್.  ನಾಳೆ ವಿಪಕ್ಷಗಳು ಅಧಿಕಾರಕ್ಕೆ ಬಂದರೆ ತೆರಿಗೆ ತೆಗೆಯುತ್ತಿರಾ ಎಂಬುದನ್ನು ಜನತೆಗೆ ತಿಳಿಸಬೇಕು. ಕೇಂದ್ರ ಸರ್ಕಾರ ಎಲ್ಲಾ ಸೇವಾ ಕೇಂದ್ರಗಳನ್ನು ಖಾಸಗೀರಣ ಮಾಡುತ್ತಿದೆ.ದೇಶದ ಸೇವಾ ಕ್ಷೇತ್ರಗಳು ಖಾಸಗೀಕರಣವಾಗುತ್ತಿದೆ.ಇದಕ್ಕೆ ಪರ್ಯಾಯವಾಗಿ ವಿಪಕ್ಷಗಳ ನೀತಿ ಏನು ಎಂಬುದನ್ನು ಜನತೆಗೆ ಮನವರಿಕೆ ಮಾಡಬೇಕು.ಆಡಳಿತ ಪಕ್ಷದ  ಜನವಿರೋಧಿ ನೀತಿ,ಭ್ರಷ್ಟಾಚಾರಕ್ಕೆ ಪರ್ಯಾಯ ಏನು ಎಂಬುದನ್ನು ವಿಪಕ್ಷಗಳು
ತಿಳಿಸಬೇಕು.ಜನ ಬೀದಿಗೆ ಬಂದು ಹೋರಾಟ ಮಾಡಬೇಕಿದೆ.ರಾಜ್ಯದಲ್ಲಿ ರಸಗೊಬ್ಬರ ಅಭಾವ ಸೃಷ್ಠಿ‌ಮಾಡಲಾಗಿದೆ.ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಡಿಎಪಿ ಮತ್ತು ಎನ್ ಪಿಕೆ ಅಭಾವ ಸೃಷ್ಟಿಯಾಗಿದೆ ಇದನ್ನು ಸರ್ಕಾರ ಸರಿಯಾದ ರೀತಿಯಲ್ಲಿ ನಿಭಾಯಿಸುವಲ್ಲಿ ಸೋಲುತ್ತಿದೆ ರೈತರಿಗೆ ಸಿಟ್ಟುಬರುವ ಮುನ್ನ ಅಭಾವ ಸರಿದೂಗಿಸಬೇಕು.ಮುಂಗಾರಿನ ಹಂಗಾಮಿಗೆ ಸಮರ್ಪಕ ರಸಗೊಬ್ಬರ ನೀಡಬೇಕೆಂದುಸಿಎಂ ಗೂ ಪತ್ರ ಬರೆದಿದ್ದೇನೆ.ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು.ಈ ಬಗ್ಗೆ ಕಾರ್ಯೋನ್ಮುಖವಾಗಬೇಕು. ಚುನಾವಣೆ ಸಮೀಪದಲ್ಲಿದೆ ಚುನಾವಣೆಗೆ ಪೂರಕವಾಗಿ ಎಲ್ಲಾ ಕೆಲಸ ನಡೆಯುತ್ತಿದೆ .ಜನ ತಿರಸ್ಕರಿಸುವ ಮೊದಲು ಸರಿಯಾದ ತೆರಿಗೆ ನೀತಿ ಜಾರಿಗೆ ತರಬೇಕು ಎಂದು‌ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಭೈರೇಗೌಡ,ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಶತಕೋಟಿ ಬಸಣ್ಣ ಗಣೇಶ್ ,ಗೀತ,ಚೇತನ್ ಚಿನ್ನಸಮುದ್ರ ಶೇಖರ ನಾಯ್ಕ್ ಇದ್ದರು.