ಜನಸಾಮಾನ್ಯರ ಜೀವ ನುಂಗಲು ಕಾದು ಕುಳಿತ ಖಾಸಗಿ ಕಂಪನಿಯ ರೈಲ್ವೆ ಟ್ರ್ಯಾಕ್! ಅಧಿಕಾರವಿದ್ದರೂ ರಾಜಕಾರಣಿಗಳು ಅಧಿಕಾರಿಗಳು ವಿಫಲರಾದರು ಏಕೆ..?

ವಿಶೇಷ ಲೇಖನ: ಬಿಜನಳ್ಳಿ ಸುರೇಶ್

ಸೇಡಂ,ಮಾ,07: ಸುಮಾರು ವರ್ಷಗಳಿಂದ ವಾಸವದತ್ತ ಸಿಮೆಂಟ್ ಕಂಪನಿಯ ರೈಲ್ವೆ ಟ್ರ್ಯಾಕ್ ನಿಂದಾ ಇಲ್ಲಿನ ಜನಸಾಮಾನ್ಯರ ನೋವು ಅನುಭವಿಸುತ್ತಿದ್ದರು ಇಲ್ಲಿನ ಜನಪ್ರತಿನಿಧಿಗಳು ಅಧಿಕಾರಿಗಳು ಕಣ್ಣು ಇದ್ದು ಕುರುಡರಂತೆ ಇರುವುದು ವಿಪರ್ಯಾಸವೇ ಸರಿ.

ಪಟ್ಟಣ ದಿನೇ ದಿನೇ ಅಭಿವೃದ್ಧಿ ಜೊತೆಗೆ ಜನಸಂಖ್ಯೆಯು ಹೆಚ್ಚುತ್ತಿದೆ ಗ್ರಾಮೀಣ ಪ್ರದೇಶದ ಜನರು ನಗರದ ಒಳಗಡೆ ಇರುವಂತಹ ಶಾಲಾ ಕಾಲೇಜು, ಆಸ್ಪತ್ರೆ, ಇನ್ನಿತರ ಇಲಾಖೆಗಳಿಗೆ ಬೆಳಗ್ಗೆ ಬರುತ್ತಿದರೆ, ಸಮಸ್ಯೆಗಳು ಆರಂಭವಾಯಿತು ಎನ್ನುತ್ತಾರೆ ಇಲ್ಲಿನ ಜನರು.ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತರಗತಿ ಕಳೆದುಕೊಳ್ಳುವ ಜೊತೆಯಲ್ಲಿ ಸಾಯಂಕಾಲ ಬಸ್ಸು ತಪ್ಪಿ ರಾತ್ರಿ ಹತ್ತು ಹನ್ನೊಂದು ಗಂಟೆಗೆ ಮಹಿಳಾ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಮನೆಗೆ ತಲುಪುವಂತ ಪರಿಸ್ಥಿತಿಯಲ್ಲಿ, ಜೊತೆಗೆ ಆಸ್ಪತ್ರೆಗೆ ಹೋಗುವಂತ ಡಾಕ್ಟರಗಳು, ಸರ್ಕಾರಿ ಅಧಿಕಾರಿಗಳು, ಸೀರಿಯಸ್ನೆಸ್ ಇರುವಂತಹ ವ್ಯಕ್ತಿ ಇಂತಹ ಸಂದರ್ಭದಲ್ಲಿ ಬಂದು ನಿಂತರೆ ನಿಜವಾಗಲೂ ಅವರು ಬದುಕು ಉಳಿಯುತ್ತಾರೆಂಬ ನಿರೀಕ್ಷೆ ಬಿಡಬೇಕಾಗುತ್ತದೆ ಅದರ ಜೊತೆಗೆ ಇನ್ನಿತರ ಕೆಲಸಕ್ಕಾಗಿ ಹೋಗುವಂತಹ ಜನಸಾಮಾನ್ಯರಿಗೆ ದಿನನಿತ್ಯ ಇದರ ತೊಂದರೆ ಬರುತ್ತಿದ್ದಾರೆ.
ಕಾಂಗ್ರೆಸ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಿನ ರಾಜಕಾರಣಿಗಳು ವಿದ್ಯಾರ್ಥಿಗಳ ಅಧಿಕಾರಿಗಳ ಜನಸಾಮಾನ್ಯರ ನೋವು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು. ಸೇಡಂ ಉಪ ವಿಭಾಗ ಇದ್ದರೂ ಕೂಡ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇದೆ, ಅಧಿಕಾರಿಗಳು ಬೇರೆ ಬೇರೆ ರೀತಿಯಲ್ಲಿ ಹೇಳುವುದಾದರೆ ಖಾಸಗಿ ಕಂಪನಿಯವರ ಹಿಡಿತಕ್ಕೆ ಒಳಗಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಕೋರ್ಟಿನಿಂದ ರೈಲ್ವೆ ಟ್ರ್ಯಾಕ್ ತೆಗೆಯುವಂತೆ ನೋಟಿಸ್ ಜಾರಿ ಮಾಡಿದ್ರು ಕಂಪನಿಯವರು ನ್ಯಾಯಾಲಯದ ತೀರ್ಪುಗೆ ಕಿಮ್ಮತ್ತು ನೀಡುತ್ತಿಲ್ಲ ಎಂದರೆ ಜನಸಾಮಾನ್ಯರ ಗತಿಯನ್ನು ಏನು, ಇಲ್ಲಿಯ ರಾಜಕಾರಣಿಗಳು ಐಎಎಸ್ ಕೆಎಎಸ್ ಅಧಿಕಾರಿ ವೃಂದದವರು ಇದ್ದರು ಒಂದು ಕಂಪನಿಯ ರೈಲ್ವೆ ಟ್ರ್ಯಾಕ್ ತೆಗೆಯಲು ಮೀನಾ ಮೇಷ ಎಣಿಸುತ್ತಿರಲು ಕಾರಣವೇನು ಇರಬಹುದು, ಬರುವಂತ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ತಕ್ಕರ ನೀಡಲು ಜನತಾದಳ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಆಗಮಿಸಿ ಜನರ ಮನಸ್ಸು ಸಮಸ್ಯೆಗಳ ಮೂಲವನ್ನು ಹರಿಯುವಂತೆ ಮಾಡುತ್ತಿದ್ದಾರೆ. ಈ ಜನರು ಯಾರನ್ನು ಮತ್ತೆ ಆಯ್ಕೆ ಮಾಡುತ್ತಾರೆ ಮೂಲ ಸಮಸ್ಯೆಗಳನ್ನು ಪರಿಹಾರ ಹುಡುಕುವಂತ ನಾಯಕನನ್ನು ತರುತ್ತಾರೋ ಅಥವಾ ಇಲ್ಲ ವೋ ಎಂಬುದು ಮುಂದಿನ ದಿನಮಾನಗಳಲ್ಲಿ ಗೊತ್ತಾಗುತ್ತದೆ.

ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳನ್ನು ಅರಿತುಕೊಂಡು ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮತ್ತು ಅವರಿಗೆ ಸೇವೆ ಮಾಡಲು ಬಂದಂತಹ ರಾಜಕಾರಣಿಗಳು ಸಣ್ಣ ಪ್ರಮಾಣದ ಒಂದು ಖಾಸಗಿ ಕಂಪನಿಯಿಂದ ದಿನನಿತ್ಯ ತೊಂದರೆ ಅನುಭವಿಸುತ್ತಿರುವ ರೈಲ್ವೆ ಟ್ರ್ಯಾಕ್ ತೆಗೆಯಲು ವಿಳಂಬ ಮಾಡುತ್ತಿದ್ದಾರೆ ಎಂದರೆ ಇವರು ನಿಜವಾಗಲೂ ಸೇಡಂ ತಾಲೂಕಿನ ಜನಸಾಮಾನ್ಯರ ಸೇವಕರೇ? ಭಕ್ಷಕರೆ? ಎಂಬುದನ್ನು ಸೇಡಂ ತಾಲೂಕಿನ ಜನರು ಅರಿತುಕೊಳ್ಳಬೇಕಿದೆ.
ಮಾರ್ಕೆಟ್ ಗೆ ಹೋಗುವ ಎರಡು ದಾರಿಗಳಿದ್ದು ಒಂದು ಚಿಂಚೋಳಿ ಇನ್ನೊಂದು ಬಸ್ ಸ್ಟ್ಯಾಂಡ್ ನಿಂದ ಮತ್ತೆರಡು ದಾರಿ ಇವೆ ಒಂದು ದಾರಿ ಬಿಟ್ಟು ಇನ್ನೊಂದು ದಾರಿಗೆ ಹೋಗಬೇಕಾದರೂ ಮತ್ತೆ ಅದೇ ರೈಲ್ವೆಯ ಟ್ರ್ಯಾಕ್ ಹೋಗ್ತಾ ಇರುತ್ತದೆ ಎಮರ್ಜೆನ್ಸಿಗೆ ನಡೆದುಕೊಂಡು ಹೋಗುವಂತಹ ಮೇಲಿನ ಕಂಪನಿಯಿಂದ ಮಾಡಿಸುವಲ್ಲಿ ರಾಜಕಾರಣಿಗಳು ಅಧಿಕಾರಿಗಳು ವಿಫಲರಾಗಿದ್ದಾರೆ.
ತಾಲೂಕಿನ ಅನೇಕ ಸಂಘ ಸಂಸ್ಥೆಗಳು ರೈಲ್ವೆ ಟ್ರ್ಯಾಕ್ ನಿಂದ ಸಮಸ್ಯೆಗಳು ಆಗುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಜೊತೆಗೆ ಕಂಪನಿಯವರಿಗೂ ಸಲ್ಲಿಸುತ್ತಾರೆ ಆದರೆ ಅವರ ಮನವಿಗೆ ಒಂದಿಷ್ಟು ಕಿಮ್ಮತ್ತು ನೀಡದ ಪರಿಸ್ಥಿತಿಯಲ್ಲಿ ಇದ್ದಾರೆ.

ಇಲ್ಲಿನ ನಗರ, ಪಟ್ಟಣದ ಜನರು ಪ್ರಶ್ನೆ ಮಾಡುವುದನ್ನು ಕಳೆದುಕೊಂಡಿದ್ದಾರೆ ಯಾಕೋ ಏನೋ ಗೊತ್ತಿಲ್ಲ ಮುಂಬರುವ ದಿನಗಳಲ್ಲಾದರೂ ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಲಿ ಎಂಬುದೇ ಸಂಜೆವಾಣಿಯ ಆಶಯವಾಗಿದೆ.

ಸಾರ್ವಜನಿಕರು ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಜನಪರ ಕಾಳಜಿಯನ್ನು ಒಬ್ಬ ರಾಜಕಾರಣಿಯೂ ಪ್ರಾಮಾಣಿಕವಾಗಿ ತೋರಿಸುತ್ತಿಲ್ಲ. ಬಹುಶಃ ಎರಡು ದಶಕಗಳಿಂದ ಈ ಸಮಸ್ಯೆ ತೆವಳುತ್ತಾ ಇದೆ. ಇದು ಶೋಚನೀಯ.

ಸೇಡಂನ ಹಿರಿಯ ಸಾಹಿತಿಗಳ ಅಭಿಪ್ರಾಯ

ಇಂಥ ರಾಜಕೀಯ ವ್ಯಕ್ತಿಗಳು ಜನ ಸಾಮಾನ್ಯರ ವೋಟ್ ಪಡುಕೊಂಡು ಜನ ಸೇವೆಯನು ಮಾಡೋದು ಬಿಟ್ಟು ಅವರ ವೈತಿಕ ಲಾಭ ನೋಡುಕೊಳುತಿದ್ದರೆ… ಆದರಿಂದ ಈ ಬಾರಿ ಇಂಥ ರಾಜಕಾರಣಿಯರನು ಆರಿಸದೆ ಅವರಿಗೆ ತಕ್ಕ ಪಾಠ ಕಲಿಸಬೇಕು,ಬದಲಾವಣೆ ಮಾಡಬೇಕು.

ರೇವಣಸಿದ್ದಪ್ಪ ಸಿಂಧೆ ಅಧ್ಯಕ್ಷರು ಬಿಎಸ್ಪಿ ಸೇಡಂ

ಪಟ್ಟಣದಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಜನರು ಒಗ್ಗಟ್ಟು ಇಲ್ಲದೆ ಇರುವುದರಿಂದ ಖಾಸಗಿ ಕಂಪನಿಯವರ ಹಿಡಿತಕ್ಕೆ ಒಳಗಾಗಿದ್ದಾರೆ, ಮಕ್ಕಳ ಶಿಕ್ಷಣ ಸರ್ಕಾರ ಅಧಿಕಾರಿಗಳ ಸಮಯ ವಿಳಂಬ ಹೋರಾಡುವ ಮನೋಭಾವನೆ ಇನ್ನೂ ಬಂದಿಲ್ಲ ಕಾದು ನೋಡಬೇಕಿದೆ.

ರಾಜು ಕಾಳಗಿ

ಮಾಜಿ ಪುರಸಭೆ ಸದಸ್ಯರು ಸೇಡಂ

ಇದರ ಬಗ್ಗೆ ಯಾರು ಧ್ವನಿ ಏತುತ್ತ ಇಲ್ಲ, ಕೆಲವು ಪಟ್ಟಬಧ್ರ ಹಿತಾಸಕ್ತಿಗಳ ಕೈವಾಡ ಇದರಲ್ಲಿ ಇದೆ. ಎಲ್ಲಿಯವರೆಗೆ ಸಾರ್ವಜನಿಕರು ಧ್ವನಿ ಎತ್ತೂವುದಿಲ್ಲ ಈ ಸಮಸ್ಯೆ ಬಗೆಹರಿಯುವುದಿಲ್ಲ.
ಚುನಾವಣೆ ಬಂದಾಗ ಮಾತ್ರ ಜನರ ಕಣ್ಣಿಗೆ ಮಣ್ಣು ಎರಚಲು ಈ ರಾಜಕಾರಣಿಗಳು ನಾಟಕ ಮಾಡ್ತಾರೆ ಅಷ್ಟೇ. ಸೇಡಂ ಹೋರಾಟ ಸಮಿತಿ ಮಾಡಿಕೊಂಡು ಏನೋ ಕಡಿದುಕಟ್ಟೆ ಹಾಕ್ತೀವಿ ಅಂತ ಹೇಳಿ ಏನು ಮಾಡಲಿಲ್ಲ. ಇದಕ್ಕೆ ಒಂದು ಸುಖ ಅಂತ್ಯ ನಾವೆಲ್ಲ ಸಾರ್ವಜನಿಕ ರೆ ಮಾಡಬೇಕು.

ಶ್ರೀನಿವಾಸ ರೆಡ್ಡಿ ಪಾಟೀಲ್

ಹಲವಾರು ಅಪಘಾತ ಅವಘಡಗಳು ಸಂಭವಿಸಿದರು
ಸ್ಥಳೀಯ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಂತೆ ಇರುವುದು ಸ್ವಾರಸ್ಯಕರ ಸಂಗತಿ ಜನಗಳ ಹಿತ ಕಾಪಾಡಲು ಜನಪ್ರತಿನಿಧಿಗಳು ಮುಂದಾಗಬೇಕು.

ಆನಂದ್ ವಾರಿಕ್ ಸಮಾಜ ಸೇವಕರು

ವಾಸವದತ್ತ ಸಿಮೆಂಟ್ ನವರ ಎಂಚಲು ಕಾಸಿಗೆ ರಾಜಕೀಯ ಪಕ್ಷಗಳು ಕೈ ಗೊಂಬೆ ಆಗಿವೆ.

ವಿಜಯಕುಮಾರ್ ತೇಲ್ಕೂರ

ಇಲ್ಲಿನ ಜನರು ದಿನನಿತ್ಯ ಕಷ್ಟ ಅನುಭವಿಸುವುದು ಬೇಸರ್ ತಂದಿದೆ, ಶಾಲಾ ಮಕ್ಕಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಅನಾರೋಗ್ಯ ಪೀಡಿತ ರೋಗಿಗಳಿಗೆ, ಎಮರ್ಜೆನ್ಸಿ ವೇಳೆಯಲ್ಲಿ ಸಾವು ಪಡೆಯುವ ಸಾಧ್ಯತೆಗಳು ಹೆಚ್ಚು.

ಜಿ ಲಲ್ಲೇಶ್ ರೆಡ್ಡಿ ಕೆಆರ್ ಪಿಪಿ ಶಾಸಕ ಅಭ್ಯರ್ಥಿ ಸೇಡಂ

ಇಲ್ಲಿನ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸಮಸ್ಯೆ ಆಗುತ್ತಿರುವುದರ ಗಮನಕ್ಕೆ ಇದೆ ಆದರೆ ರೈಲ್ವೆ ಟ್ರ್ಯಾಕ್ ತಿರುಗಾಡುವ ಸಮಯ ಬದಲಾಯಿಸುವಂಥ ಮನಸ್ಸಾದರೂ ಮಾಡಲಿ.

ಶೇಖರ್ ನಾಟಿಕರ್ ಪ್ರಜಾ ಕಾರ್ಮಿಕ ಸೇಡಂ

ಈಗಾಗಲೇ ನಮ್ಮ ಕಂಪನಿಯ ರೈಲ್ವೆ ಟ್ರ್ಯಾಕ್ ತಿರುಗಾಡುವ ವೇಳ ಸಮಯ ಬದಲಾಯಿಸಲು ಸಂಬಂಧಪಟ್ಟ ರೈಲ್ವೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಕೆಲವೇ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ಗೂಡ್ಸ್ ರೈಲ್ವೆ ಓಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿ ಸಮಸ್ಯೆ ಆಗದಂತೆ ತಡೆಯುತ್ತೇವೆ.

ವಾಸವದತ್ತ ಸಿಮೆಂಟ್ ಕಂಪನಿ ಅಧಿಕಾರಿಗಳ ಅಭಿಪ್ರಾಯ

ಪರೀಕ್ಷೆ ಸಮಯದಲ್ಲಿ ಒಂದು ಬಾರಿ ರೈಲ್ವೆ ಗೂಡ್ಸ್ ಗಾಡಿ ಹೋಗುತ್ತಿರುವಾಗ ಲೇಟ್ ಮಾಡಿ ಎಕ್ಸಾಮ್ ಹಾಲಿಗೆ ಹೋಗಿದ್ದೆ.
ಶಾಲಾ ವಿದ್ಯಾರ್ಥಿ ಅಭಿಪ್ರಾಯ.