ಜನಸಾಮಾನ್ಯರಿಗೆ ಕಾನೂನು ನೆರವು ಅಗತ್ಯ-ಬಸನಗೌಡ ಬ್ಯಾಗವಾಟ

ಮಾನ್ವಿ.ನ.೧೦- ದೇಶದ ಪ್ರತಿಯೊಬ್ಬ ಸಾಮಾನ್ಯ ಜನರಿಗೂ ಕೂಡ ಕಾನೂನಿನ ಅರಿವು ಅಗತ್ಯವಾಗಿದೆ ಎಂದು ಮಾನ್ವಿಯ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಹೇಳಿದರು.
ಬ್ಯಾಗವಾಟ ಗ್ರಾಮದಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಯಚೂರು ತಾಲೂಕ ಕಾನೂನು ಸೇವಾ ಸಮಿತಿ ಮಾನ್ವಿ,ವಕೀಲರ ಸಂಘ ಮಾನ್ವಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪ್ರತಿಯೊಬ್ಬ ಜನರು ಕಾನೂನುಗಳನ್ನು ಪಾಲನೆ ಮಾಡಬೇಕು ಕಾನೂನಿನ ಕನಿಷ್ಠ ಜ್ಞಾನ ಇರಬೇಕು ಎಂದು ಹೇಳಿದರು,ತಮ್ಮ ದಿನನಿತ್ಯದ ಜೀವನದಲ್ಲಿ ಕಾನೂನು ಬಹಳ ಮುಖ್ಯವಾಗಿದೆ ಕಾನೂನುಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಹಿರಿಯ ವಕೀಲರಾದ ಎಂ ಈರನಗೌಡ ಪೊತ್ನಾಳ ಮಾತನಾಡಿ ಒಬ್ಬ ವ್ಯಕ್ತಿ ಹುಟ್ಟಿನಿಂದಲೇ ಅವನಿಗೆ ಕಾನೂನು ಆರಂಭವಾಗುತ್ತದೆ ಕೊನೆಗೆ ವ್ಯಕ್ತಿ ಸತ್ತಾಗಲೂ ಕಾನೂನಿನಣೆವು ಬಹಳ ಮುಖ್ಯವಾಗುತ್ತದೆ,ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಬಾರದು ವರದಕ್ಷಿಣೆ ಪಡೆಯುವುದು ಕಾನೂನು ಬಾಹಿರ,ಗಾಡಿಯ ಪರವಾನಿಗೆ ಇಲ್ಲದೆ ವಾಹನ ಚಲಾವಣೆ ಮಾಡುವುದು, ಅನಗತ್ಯ ಕಾನೂನು ಬಾಹಿರ ಕೆಲಸಗಳನ್ನು ಮಾಡಬಾರದು ಎಂದರು.
ನಂತರ ಮಾತನಾಡಿದ ಹನುಮಂತ ಬ್ಯಾಗವಾಟ ವಕೀಲರು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕಾನೂನು ಅವಶ್ಯಕತೆ ಇದೆ,ಪ್ರತಿಯೊಬ್ಬ ಮಕ್ಕಳು ಶಿಕ್ಷಣವನ್ನು ಕಲಿಯಬೇಕು ಅಂದಾಗ ಮಕ್ಕಳಲ್ಲಿ ಕೌಶಲ್ಯ ಬೆಳೆಯುತ್ತದೆ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ,ಗ್ರಾಮೀಣ ಭಾಗದ ಜನರಿಗೆ ಶಿಕ್ಷಣದ ಕೊರತೆಯಿಂದಾಗಿ ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುತ್ತಾರೆ ಬಾಲ್ಯ ವಿಹಾಹ ಅಂತ ಕಾನೂನು ಬಾಹಿರ ಕೆಲಸಗಳನ್ನು ಮಾಡುತಿದ್ದಾರೆ,ಕರ್ನಾಟಕದಲ್ಲಿ ಬಾಲ್ಯವಿವಾಹದಲ್ಲಿ ಕೊಪ್ಪಳ ಮೊದಲನೆ ಸ್ಥಾನವಿದೆ ಎಂದರು.ಮಕ್ಕಳನ್ನು ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳುವುದು ಅಪರಾದ ಆದರೂ ಇಂದಿಗೂ ಕೂಡ ಬಾಲ ಕಾರ್ಮಿಕ ಪದ್ದತಿ ಜೀವಂತ ಇದ್ದು ಚಿಕ್ಕ ಚಿಕ್ಕ ಮಕ್ಕಳನ್ನು ಹೊಟೇಲ್,ಗ್ಯಾರೇಜ್,ಇತರೆ ಕೆಲಸಗಳಲ್ಲಿ ದುಡಿಸಿಕೊಳ್ಳುತಿದ್ದಾರೆ,ಭಾರತ ಸಂವಿಧಾನ ಬಂದ ಮೇಲೆ ಸಾಮಾನ್ಯ ಬಡಕುಟುಂಬದ ವ್ಯಕ್ತಿಯೂ ಕೂಡ ಇಂದು ದೇಶದ ಅತ್ಯುನ್ನತ ಹುದ್ದೆಗಳನ್ನು ಪಡೆಯಲೂ ಕಾನೂನು ನೆರವಾಗಿದೆ ಎಂದರು.
ನಂತರ ಯಲ್ಲಪ್ಪ ವಕೀಲರು ಬಾದರದಿನ್ನಿ ಮಾತನಾಡಿ ಇಂದಿಗೂ ಕೂಡ ಮಹಿಳೆಯರ ಮೇಲ ದೌರ್ಜನ್ಯ ದಬ್ಬಾಳಿಕೆಯಾಗುತ್ತಿರುವುದು ದುರಂತ,ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ಪೊಕ್ಸೋ ಕಾಯಿದೆ ತುಂಬ ಉತ್ತಮವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಮನೋಹರ್,ಹನುಮಂತ ನಂದಿಹಾಳ,ಗ್ರಾಮ ಪಂ.ಅದ್ಯಕ್ಷೇ ಬಸಲಿಂಗಮ್ಮ,ಉಪಾಧ್ಯಕ್ಷ ಅಮರೇಶ,ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಊರಿನ ನಾಗರಿಕರು ಇದ್ದರು.