ಜನಸಾಂದ್ರತೆಯಿಂದ ಸಾಂಕ್ರಾಮಿಕ ರೋಗದ ಸಾಧ್ಯತೆ; ಮುನ್ನೆಚ್ಚರಿಕೆ ಕ್ರಮ ಅಗತ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೨೨: ದೇವರ ಜಾತ್ರೆಗಳು ಗ್ರಾಮಗಳ ಒಂದು ಪ್ರಮುಖ ಪರಂಪರೆ. ಸಾಮಾನ್ಯವಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಒಂದು ಕಡೆ ಸೇರುವುದನ್ನೇ ಜಾತ್ರೆ ಎನ್ನಲಾಗುತ್ತದೆ. ಜಾತ್ರೆ ಜನರಿಗೆ ಸಂಭ್ರಮ, ಆದರೆ, ಅತಿಯಾದ ಜನಸಾಂದ್ರತೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ಎಂ.ಎಸ್.ಅನುರೂಪ ಹೇಳಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನ ಕೇಂದ್ರದಲ್ಲಿ ವಿವೇಕ್ ಕಾರ್ಯಾಗಾರದ ಅಡಿಯಲ್ಲಿ ಆಯೋಜಿಸಲಾಗಿದ್ದ ಎಲ್ಲೆಲ್ಲೂ ಜಾತ್ರೆಯ ಸಂಭ್ರಮಾಚರಣೆ, ಹೆಚ್ಚುತ್ತಿರುವ ಸಾಂಕ್ರಮಿಕ ಕಾಯಿಲೆಗಳ ಬಗ್ಗೆ ಅರಿವಿರಲಿ ಎನ್ನುವ ವಿಷಯ ಕುರಿತು ಮಾಹಿತಿ ನೀಡಿದರು.ಜಾತ್ರೆ ಸಮಯದಲ್ಲಿ ಹಲವಾರು ಸಾಂಕ್ರಮಿಕ ರೋಗಗಳು ಹರಡಿ ಸಾವುಗಳಿಗೆ ಕಾರಣವಾಗಬಹುದು. ಸಾಂಕ್ರಮಿಕ ರೋಗಗಳೆಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ರೋಗಗಳು. ಜಾತ್ರೆಗಳಲ್ಲಿ ಅತಿಯಾದ ಜನಸಾಂದ್ರತೆಯಿಂದ ಕುಡಿಯುವ ನೀರು, ಸೇವಿಸುವ ಆಹಾರ, ಉಸಿರಾಡುವ ಗಾಳಿ, ರೋಗಾಣುಗಳಿಂದ ಕಲುಶಿತಗೊಂಡು ಸಾಂಕ್ರಮಿಕ ರೋಗಗಳು ಹರಡುತ್ತವೆ ಎಂದರು.ಸೋಂಕಿತ ವ್ಯಕ್ತಿಯ ಇತರರಿಗೆ ರೋಗವನ್ನು ಹರಡುವ ಸಂಭವ ಜಾತ್ರೆಗಳಲ್ಲಿ ಅಧಿಕವಾಗಿರುತ್ತದೆ. ಜಾತ್ರೆಗಳ ಸಮಯದಲ್ಲಿ ಹರಡುವ ರೋಗಗಳೆಂದರೆ ಜಠರ ಮತ್ತು ಕರುಳಿನ ಸೋಂಕುಗಳು, ಅತಿಸಾರ, ಉಸಿರಾಟದ ಸೋಕುಗಳು, ದಡಾರ, ಚಿಕನ್‌ಫಾಕ್ಸ್ ಚರ್ಮದರೋಗಗಳು ವಾಹಕಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯ ಎಂದು ತಿಳಿಸಿದರು.