ಜನಸಂಖ್ಯೆ ಹೆಚ್ಚಳ ಲಾಭಕ್ಕಿಂತ ನಷ್ಟ ಹೆಚ್ಚು- ಡಾ. ರಾಮಶೆಟ್ಟಿ


ಸಂಜೆವಾಣಿ ವಾರ್ತೆ
ಸಂಡೂರು:ಜು: 12: ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾವನ್ನು ಇಂದು ಭಾರತ ಹಿಂದಿಕ್ಕಿ 142 ಕೋಟಿಯನ್ನು ಹೊಂದಿದ್ದು ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಅದ್ದರಿಂದ ನಿಯಂತ್ರಣ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಡಾ. ರಾಮಶೆಟ್ಟಿ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಅಭಿಯಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಮಕ್ಕಳನ್ನು ಪಡೆಯುವುದು ಆಯ್ಕೆಯಾಗಬೇಕರೆ ಹೊರತು ಅನಿವಾರ್ಯವಾಗಿರಬಾರದು, ಅದಕ್ಕಾಗಿ ಸರ್ಕಾರ ಕುಟುಂಬ ಕಲ್ಯಾಣ ಯೋಜನಾ ವಿಧಾನಗಳನ್ನು ಜಾರಿಗೆ ತಂದಿದ್ದು ಅದನ್ನು ಉಚಿತವಾಗಿ ಸರ್ಕಾರಿ ಅಸ್ಪತ್ರೆಗಳಲ್ಲಿ ಮಾಡಲಾಗುತ್ತದೆ, ಪ್ರಮುಖವಾಗಿ ನಿಯಂತ್ರಣಕ್ಕೆ ಮಹಿಳೆಯರಿಗೆ ಟ್ಯೂಬೆಕ್ಟಮಿ : ಸಿಜೇಯರಿನ್ ಶಸ್ತ್ರಚಿಕಿತ್ಸೆ ಸಮಯದಲ್ಲಿ, ಹೆರಿಗೆಯಾದ ಏಳು ದಿನಗಳೊಳಗೆ, ಇಂಟರ್‍ವೆಲ್ ( ಮಿನಿಲ್ಯಾಪ್) ಸಮಯದಲ್ಲಿ ಕೈಗೊಳ್ಳಬೇಕು, ಉದರ ದರ್ಶಕ ಶಸ್ತ್ರಚಿಕಿತ್ಸೆ ( ಲ್ಯಾಪೆರೋಸ್ಕೋಪಿ)ಯನ್ನು ಹೆರಿಗೆಯಾದ ಆರುವಾರದ ನಂತರ, ಮುಟ್ಟಾದ ಐದು ದಿನದಿಂದ ಹದಿನೈದು ದಿನದೊಳಗೆ ಮಾಡಿಸಿಕೊಳ್ಳಬೇಕು, ಇನ್ನು ಪುರುಷರಿಗೆ ಸಂತಾನ ನಿಯಂತ್ರ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಪ್ರಮುಖವಾಗಿ ಅದು ಸರಳ ಹಾಗೂ ಸುರಕ್ಷಿತವಾಗಿರುತ್ತದೆ, ಗಾಯ ಮತ್ತು ಹೊಲಿಗೆಯಲ್ಲದ ವಿಧಾನ, 5 ರಿಂದ 10ನಿಮಿಷದಲ್ಲಿ ಮಾಡಲಾಗುತ್ತದೆ, ಯಾವುದೇ ರೀತಿಯ ಲೈಂಗಿಕ ನಿಶ್ಯಕ್ತಿ ಮತ್ತು ಪುರುಷತ್ವಕ್ಕೆ ಕುಂದುಂಟಾಗುವುದಿಲ್ಲ, ಮೊದಲಿನಂತೆ ಕೆಲಸ ನಿರ್ವಹಿಸಬಹುದು, ಯಾವುದೇ ರೀತಿಯ ಅಡ್ಡ ಪರಿಣಾಮಗಳಿರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಭಾರತ್ ತಾಲೂಕು ವೈದ್ಯಾಧಿಕಾರಿ ನೆರವೇರಿಸಿ ಮಾತನಾಡಿ ಜನಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ, ಅದರೆ ಭೂಮಿ ಇದ್ದಷ್ಟೇ ಇದೆ, ಅದ್ದರಿಂದ ನಿಯಂತ್ರಣ ಮಾಡದೇ ಇದ್ದಲ್ಲಿ ಬಾಂಬ್ ಸ್ಪೋಟಕ್ಕಿಂತಲೂ ದೊಡ್ಡ ಸಮಸ್ಯೆ ಉಂಟಾಗುತ್ತದೆ, ಅದ್ದರಿಂದ ನಿಯಂತ್ರಣ ಮಾಡಿಕೊಳ್ಳಲು ಜಾಗೃತಿ ಅತಿ ಅಗತ್ಯವಾಗಿದ್ದು ತಾಲೂಕಿನಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನು ಡಾ. ಕುಶಾಲ್‍ರಾಜ್ ಮಾತನಾಡಿದರು, ಡಾ. ಸಾಧಿಯಾ, ಡಾ. ಹರೀಶ್, ವಿಠಲಾಪುರ, ಡಾ. ಅಕ್ಷಯ್ಯ, ಚೋರನೂರು, ಡಾ. ಅಕ್ಷಯ.ಎ.ಬಿ., ತಾರಾನಗರ, ತಾಲೂಕು ಲೆಕ್ಕಾಧಿಕಾರಿ ಕೊಟ್ರೇಶ್, ಅಪ್ತಸಮಾಲೋಚಕ ನಾಗಭೂಷಣ.ಕೆ.ಎಂ. ಉಪಸ್ಥಿತರಿದ್ದರು, ಬಂಡೇಗೌಡ ಸ್ವಾಗತಿಸಿದರು, ಜಲಜಾಕ್ಷಿ ಪ್ರಾರ್ಥಿಸಿದರು,