ಜನಸಂಖ್ಯೆ ಹೆಚ್ಚಳ ಬಡತನ ನಿರುದ್ಯೋಗಕ್ಕೆ ರತ್ನಕಂಬಳಿ ಹಾಸಿದಂತೆ:ಶಾಸಕ.ರಾಮಚಂದ್ರ ಆತಂಕ

ಜಗಳೂರು.ಜು.೨೭; ಜನಸಂಖ್ಯೆ ಹೆಚ್ಚಳದಿಂದ ಬಡತನ,ನಿರುದ್ಯೋಗಕ್ಕೆ ರತ್ನಕಂಬಳಿ ಹಾಸಿದಂತೆ ಎಂದು  ಶಾಸಕ ಎಸ್.ವಿ.ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸಕ್ತವಾಗಿ ದೇಶದಲ್ಲಿ ಗಣತಿಯಾಧಾರಿತವಾಗಿ 141 ಕೋಟಿ ಜನಸಂಖ್ಯೆ ಹೊಂದಿದ್ದು.ಚೀನಾದೇಶ ಅಗ್ರಸ್ಥಾನದಲ್ಲಿದ್ದರೆ ಭಾರತ ದ್ವಿತೀಯ ಸ್ಥಾನದಲ್ಲಿದೆ.ಜನಸಂಖ್ಯೆ ಇಳಿಮುಖವಾಗಲು ಗ್ರಾಮೀಣ ಭಾಗದಿಂದಲೇ ಸರ್ವರೂ ಕೈಜೋಡಿಸಬೇಕು.ಆಶಾ ಕಾರ್ಯಕರ್ತೆಯರು ಮನೆಬಾಗಿಲಿಗೆ ತೆರಳಿ ಹೆಣ್ಣು ಮಕ್ಕಳಿಗೆ ಎರಡು ಮಕ್ಕಳು ಬೇಕು ಮೂರು ಸಾಕು ಎಂಬುದನ್ನು ಮನವರಿಕೆ ಮಾಡಬೇಕು ಎಂದು ಹೇಳಿದರು.ಜನಸಂಖ್ಯೆ ಹೆಚ್ಚಾದಂತೆ ಕುಟುಂಬಗಳು ವಿಭಜನೆಯಾಗಿ ಮನೆಗಳಲ್ಲಿ ವಾಸಿಸಲು ಸ್ಥಳಾವಕಾಶ ವಿರದೆ.ಕಿಷ್ಕಿಂದೆಯಲ್ಲಿ ವಾಸಿಸುವಂತಾಗುತ್ತದೆ.ಆರ್ಥಿಕ ಸಂಕಷ್ಟದಿಂದ ಮಕ್ಕಳ ಶಿಕ್ಷಣದಿಂದ ವಂಚಿತರಾಗುತ್ತಾರೆ.ದುಡಿಮೆಗಾಗಿ  ಹೋಟೆಲ್,ಗ್ಯಾರೇಜ್ ಗಳನ್ನು ಅವಲಂಬಿಸುವಂತಾಗುವುದು ಎಂದು ಕಿವಿಮಾತು ಹೇಳಿದರು.ಕೋವಿಡ್ ನಿಂದ ಜಿಲ್ಲೆಯಲ್ಲಿ ಬೆಡ್ ಗಳು ಸಿಗದಂತಾಗಿತ್ತು.ತಾಲೂಕಿನ ಆಶಾ ಕಾರ್ಯಕರ್ತೆಯರು ಜಾಗರೂಕತೆಯ ಸೇವೆಯಿಂದ ತಾಲೂಕಿನಲ್ಲಿ ಕೋವಿಡ್ ನಿಂಯತ್ರಣಕ್ಕೆ ಬಂದಿತ್ತು.ನಿಮ್ಮ ಸೇವೆ ಮೆಚ್ಚುಗೆಗೆ ಒಟ್ಟು 200 ಜನ ಆಶಾ ಕಾರ್ಯಕರ್ತೆಯರನ್ನು ವಾರಕ್ಕೊಮ್ಮೆ 50 ಜನರ ತಂಡ ರಚಿಸಿ.ಪ್ರತಿವಾರಕ್ಕೊಮ್ಮೆ ಜೋಗ ಜಲಪಾತದ ಸಿರಿ,ಸಿಗಂದೂರು,ಕೆಮ್ಮಣ್ಣುಗುಂಡಿ ಪ್ರೇಕ್ಷಣೀಯ ಸ್ಥಳಗಳಿಗೆ ಸ್ವಂತ ಖರ್ಚಿನಲ್ಲಿ ಪ್ರವಾಸ ಕಳಿಸುವೆ.ತಾಲೂಕಿಗೆ 3300 ಕೋಟಿ ವೆಚ್ಚದ ಅನುದಾನದಲ್ಲಿ  ಶೀಘ್ರ ಹರಿಯಲಿರುವ ಭದ್ರಾ ನದಿಯನ್ನು ಕಣ್ತುಂಬಿ ವೀಕ್ಷಿಸಬೇಕು ಎಂದರು.