ಜನಸಂಖ್ಯೆ ಅಧಾರಿತ ಮೀಸಲಾತಿ ಜಾರಿಗೆ ಒತ್ತಾಯ

ಕೋಲಾರ,ಜ,೧೮-ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನ ಮಾದಿಗ ದಂಡೋರ ಸಮಿತಿ ವಿರೋಧಿಸುತ್ತದೆ. ರಾಜ್ಯದ ೩೧ ವರ್ಷದಿಂದ ವಿರೋಧಿಸುತ್ತಾ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಯಾವ ಸರ್ಕಾರವು ಸ್ಪಂದಿಸುತ್ತಿಲ್ಲ. ಇದರ ವಿರುದ್ದ ಜ ೧೮ ರಿಂದ ಫೆ,೨೦ರವರೆಗೆ ಒಂದು ತಿಂಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ರಾಜ್ಯ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಸಂಘನಾ ಕಾರ್ಯದರ್ಶಿ ದೇವರಾಜ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮಾದಿಗ ಮತ್ತು ಛಲವಾದಿ ಎರಡು ಪ್ರಮುಖ ಜಾತಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡೆದಲ್ಲಿದೆ. ಮಾದಿಗ ಜಾತಿಯಲ್ಲಿ ೫೯ ಹಾಗೂ ಛಲವಾದಿ ಜಾತಿಯಲ್ಲಿ ೧೦೧ ಉಪ ಜಾತಿಗಳನ್ನು ಹೊಂದಿದ್ದು ೧೯೯೭ರಲ್ಲಿ ಸಾಮಾಜಿಕ ಹೋರಾಟ ಮಾಡಿದ ಹಿನ್ನಲೆಯಲ್ಲಿ ಶೇ ೧೫ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಎಂದರು.
ಶ್ರೀ ದೇವರಾಜು ಅರಸು ಆಡಳಿತದಲ್ಲಿ ಹಾವನೂರು ವರದಿಯನ್ನು ನೀಡಲಾಯಿತು ಇದರಲ್ಲಿ ಬೋವಿ, ಕೊರಚ ಕೊರಮ ಈ ಮೂರು ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿರುವ ಹಿನ್ನಲೆಯಲ್ಲಿ ಮಾದಿಗ ಸಮುದಾಯದವರು ಸೇರಿದಂತೆ ೧೯೯ ಜಾತಿಗಳಿಗೆ ಮೀಸಲಾತಿಯಲ್ಲಿ ವಂಚಿತರಾಗಿದ್ದಾರೆ. ರಾಜ್ಯದ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾದಿಗ ಮತ್ತು ಛಲವಾದಿ ಜಾತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದಾರೆ. ಜಾತಿಗಣತಿಯನ್ನು ಜನಸಂಖ್ಯೆ ಅಧಾರದ ಮೇಲೆ ಮಾಡಿದಾಗ ಮಾತ್ರ ಸಮಾಜಿಕ ನ್ಯಾಯ ದೊರೆಯಲು ಸಾಧ್ಯ ಎಂದರು.
ನ್ಯಾಯಮೂರ್ತಿ ಸದಾಶಿವಾ ಆಯೋಗವನ್ನು ಕಾಂಗ್ರೇಸ್ ಸರ್ಕಾರದಲ್ಲಿ ರಚಿಸಿದರೆ, ಬಿಜೆಪಿ ಸರ್ಕಾರವು ವರದಿ ರಚಿಸಲು ಹಣ ಬಿಡುಗಡೆ ಮಾಡಿತು, ಜೆ.ಡಿ.ಎಸ್. ಪ್ರಣಾಳಿಕೆ ಬಿಡುಗಡೆ ಮಾಡಿತು.ನ್ಯಾಯಮೂರ್ತಿ ಸದಾಶಿವ ವರದಿ ರಚನೆಗೆ ಸುಮಾರು ೩.೫ ವರ್ಷಗಳ ಕಾಲವಧಿಯಲ್ಲಿ ರಚಿಸಿದ್ದು, ೧೨ ವರ್ಷಗಳ ಕಾಲವಾಗಿದೆ. ಈ ಕುರಿತು ಸದನದಲ್ಲಿ ಚರ್ಚಿಸಿ ಸರ್ಕಾರಕ್ಕೆ ಶಿಫಾರಾಸ್ ಮಾಡಲು ಇಷ್ಟು ವರ್ಷಗಳಿಂದ ವಿಳಂಭ ಮಾಡುತ್ತಿದೆ ಎಂದು ವಿಷಾಧಿಸಿದರು,
ಈ ಸಂಬಂಧವಾಗಿ ಹುಬ್ಬಳಿಯ ಕಾಂಗ್ರೇಸ್ ಸಮಾವೇಶದಲ್ಲಿ ಮಾಜಿ ಮುಖ್ಯ ಮಂತ್ರಿ ಮಾದಿಗ ಸಮುದಾಯದವರಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಆಶ್ವಾಸನೆಯನ್ನು ನೀಡಿ ವಿಶ್ವಾಸಕ್ಕೆ ತೆಗೆದು ಕೊಳ್ಳದೆ ತಪ್ಪು ಮಾಡಿದ ಹಿನ್ನಲೆಯಲ್ಲಿ ನನಗೆ ಚುನಾವಣೆಯಲ್ಲಿ ಸೋಲೊಂಟಾಯಿತು ಎಂದು ವಿಷಾಧಿಸಿದ್ದಾರೆ ಎಂದು ಹೇಳಿದರು,
ಲಂಬಾಣಿ ಮತ್ತು ಬಂಜಾರ ಸಮುದಾಯಕ್ಕೆ ಶೇ ೩ ರಷ್ಟು ಮೀಸಲಾತಿ ನೀಡಿರುವುದು ಅನ್ಯಾಯವಾಗಿದೆ ಎಂದಾಗ ಸಿದ್ದರಾಮಯ್ಯ ಅವರನು ಈ ಮೀಸಲಾತಿಯನ್ನು ಜಾರಿ ಮಾಡಲಿಲ್ಲ ಎಂದ ಅವರು ಉಪಜಾತಿಗಳಿಗೆ ಮೀಸಲಾತಿಯನ್ನು ವಿಂಗಡನೆ ಮಾಡಿರುವ ಹಿನ್ನಲೆಯಲ್ಲಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡುತ್ತಿರುವುದಾಗಿ ತಿಳಿಸಿದ ಅವರು ಈ ಮೀಸಲಾತಿಯನ್ನಯನ್ನು ಜಾತಿಗೆ ತಂದರೆ ಬಹಳಷ್ಟು ನಷ್ಟವಾಗುತ್ತದೆ ಎಂದ ಅವರು ಬೋವಿ, ಕೊರಚ, ಕೋರಮ ಜಾತಿಗಳನ್ನು ಬೇರೆ ರಾಜ್ಯಗಳಲ್ಲಿ ಓಸಿ ಮತ್ತು ಬಿ.ಸಿ.ವರ್ಗಗಳಿಗೆ ಸೇರ್ಪಡೆ ಮಾಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲು ಮಾಡಬೇಕು, ಬಾರತದಲ್ಲಿ ಎಲ್ಲಾ ರಾಜ್ಯಗಳಿಗೂ ಇರುವುದು ಒಂದೇ ಸಂವಿಧಾನವಾದರೂ ಇಂಥ ತಾರತಾಮ್ಯಗಳೇಕೆ ಎಂದು ಪ್ರತಿಪಾದಿಸಿದರು,