ಜನಸಂಕಲ್ಪ ಯಾತ್ರೆಯ ಸಂಪೂರ್ಣ ಯಶಸ್ವಿ ಅಭಿನಂದನೆ 

ಸೊರಬ.ನ.೧೭: ಆನವಟ್ಟಿ ಯಲ್ಲಿ ಜರುಗಿದ ಜನಸಂಕಲ್ಪ ಯಾತ್ರೆಯ ಸಮಾವೇಶವು ಪಕ್ಷದ ಪ್ರಮುಖ ನಾಯಕರ ಹಾಗೂ ಜಿಲ್ಲಾ ಮುಖಂಡರ ಮತ್ತು ಕಾರ್ಯಕರ್ತರ ಸಂಪೂರ್ಣ ಬೆಂಬಲದಿಂದ ಯಶಸ್ವಿಯಾಗಿದೆಯೆಂದು ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮುಖಂಡರು ಸಭೆಯಲ್ಲಿ ಮಾತನಾಡಿದ ಅವರು ಸೊರಬ ತಾಲೂಕಿನಲ್ಲಿ ಜನಸಂಕಲ್ಪ ಯಾತ್ರೆಯನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ. ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ. ಗೃಹ ಸಚಿವ ಅರಗಜ್ಞಾನೇಂದ್ರ. ಬೈರತಿ ಬಸವರಾಜ.ಸಂಸದ ಬಿ ವೈ ರಾಘವೇಂದ್ರ. ಸೇರಿದಂತೆ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಂಡಲದ ಉಪಾಧ್ಯಕ್ಷ ದೇವೇಂದ್ರಪ್ಪ ಚನ್ನಾಪುರ. ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು. ಮಲ್ಲಿಕಾರ್ಜುನ ವೃತ್ತಿಕೊಪ್ಪ.ಪುರಸಭಾ ಸದಸ್ಯರಾದ ಎಂ ಡಿ ಉಮೇಶ್. ನಟರಾಜ್. ಮುಖಂಡರಾದ ಅಶೋಕ್. ಕನಕದಾಸ. ಕೃಷ್ಣಮೂರ್ತಿ. ರಮೇಶ್ ಕಿರಣ್ ಕುಮಾರ್, ಭೈರಪ್ಪ, ಪರಶುರಾಮ್ ,ಶಿವನಗೌಡ. ಚನ್ನಬಸವ. ಬಸವಣ್ಣಪ್ಪ. ಸೇರಿದಂತೆ ಮೊದಲಾದವರಿದ್ದರು.