ಜನವಿರೋದಿ ಕಾಯ್ದೆಗಳ ತಿದ್ದುಪಡಿ ಖಂಡಿಸಿ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ :ನ.07 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಮತ್ತು ವಿದ್ಯುಚ್ಛಕ್ತಿ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಹೊರಟಿರುವುದ ಜನವಿರೋಧಿ ನೀತಿಯಾಗಿದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷ ಬಿ.ಸಿದ್ದನಗೌಡ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಖಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯಾದ್ಯಂತ ಹೋರಾಡಲು ಎಐಕೆಎಸ್‍ಸಿಸಿಯುವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ನಮ್ಮ ಹೋರಾಟಕ್ಕೆ ರಾಜ್ಯ ರೈತ ಸಂಘ, ಪ್ರಂತ ರೈತ ಸಂಘ, ಕರ್ನಾಟಕ ಜನಶಕ್ತಿ ಹೀಗೆ ಹಲವು ಸಂಘಟನೆಗಳು ಬೆಂಬಲದಿಂದ ಎಐಕೆಎಸ್‍ಸಿಸಿಯು ಹೋರಾಟವನ್ನು ತೀವ್ರಗೊಳಿಸುತ್ತದೆ ಎಂದರು.
ಪ್ರಾಂತ ರೈತ ಸಂಘದ ಮಲ್ಲಿಕಾರ್ಜುನ ಕೊಟಗಿ ಮಾತನಾಡಿ, ರೈತ ಬೆಳೆದ ವಿವಿಧ ಕೃಷಿ ಉತ್ಪನ್ನಗಳಿಗೆ ದೇಶಾಧ್ಯಂತ ಚಾಲ್ತಿಯಲ್ಲಿರುವ ಬೆಂಬಲ ಬೆಲೆಯು ಕಡಿಮೆ ಬೆಲೆಯಿಂದ ಸ್ಪಷ್ಟವಾಗಿದೆ. ಹೈಪ್ ಮಾಡಲಾದ ಕೇಂದ್ರದ ಕೃಷಿ ಕಾಯ್ದೆಗಳು ಯಾವುದೇ ರೈತರಿಗೂ ಪ್ರಯೋಜನವಾಗುವುದಿಲ್ಲ. ಆಲೂಗಡ್ಡೆ ಮತ್ತು ಇತರ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವು ಯಾವುದೇ ಉತ್ಪಾದನಾ ಕೊರತೆ ಇಲ್ಲದಿರುವುದು ಈಗಾಗಲೇ ಶಾಸನಗಳ ವ್ಯತಿರಿಕ್ತ ಪರಿಣಾಮವೆಂದು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಎಲ್ಲಾ ರೈತರಿಗೆ ಸಂಭಾವನೆ ನೀಡುವ ಎಂಎಸ್‍ಟಿಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯುನ ಜಗನ್ನಾಥ, ಬಿ.ಮಾಳಮ್ಮ, ಗ್ರಾಕೂಸ್‍ನ ಉಮೇಶ್, ಕೊಟ್ರಮ್ಮ, ಅಕ್ಕಮಹಾದೇವಿ, ತ್ರಿವೇಣಿ, ಜಿ.ವಸಂತ ಕುಮಾರ್, ರುದ್ರಮುನಿ ಸ್ವಾಮಿ, ಬಸವರಾಜ, ಆರ್.ಸಿದ್ಧರೆಡ್ಡಿ, ಮಹೇಶಪ್ಪ, ಹನುಮಂತಪ್ಪ, ರಂಗಪ್ಪ ದಾಸರ, ಎಸ್.ಹುಲಿಗೆಮ್ಮ, ಆನಂದ, ಒಗ್ಗಪ್ಪ ಇತರರಿದ್ದರು.