ಜನವಾದಿ ಮಹಿಳಾ ಸಂಘಟನೆ : ಮಹಿಳಾ ದಿನಾಚರಣೆ ಆಚರಣೆ

ಸಂಜೆವಾಣಿ ವಾರ್ತೆ.
ಸಿಂಧನೂರು.ಮಾ.೧೮- ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಲ್ಲೂರ ಹಾಗೂ ಸುತ್ತಮುತ್ತಲಿನ ಗ್ರಾಮದ ೨೦೦ ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷ ಶಕುಂತಲಾ ಪಾಟೀಲ್ ಹಾಗೂ ಜಿಲ್ಲಾ ಕಾರ್ಯದರ್ಶಿ ವರಲಕ್ಷ್ಮಿ ಭಾಗವಹಿಸಿ ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಮಹಿಳೆಯರ ಇಂದಿನ ಸ್ಥಿತಿ ಮುಂದಿನ ನಡೆ ಕುರಿತು ಮಾತನಾಡಿದರು.
ಮತ್ತೋರ್ವ ಅತಿಥಿ ಎಸ್.ದೇವೇಂದ್ರಗೌಡ ಅವರು ಮಾತನಾಡಿ ಮಹಿಳೆ ಇಂದು ಎಲ್ಲಾ ರಂಗದಲ್ಲಿ ತನ್ನ ಸಾಧನೆಯನ್ನು ತೋರಿಸಿದ್ದು. ಅದರಂತೆ ಹಳ್ಳಿ ಪಟ್ಟಣಗಳಲ್ಲಿ ಶಾಂತಿ ಸೌಹಾರ್ದತೆಯಿಂದ ಬದುಕುವುದನ್ನು ಕುಟುಂಬದ ಎಲ್ಲಾ ಸದಸ್ಯರಿಗೆ ಹೇಳಬೇಕಾಯಿತು. ಹಣ ಎಷ್ಟು ಇದ್ದರು ನೆಮ್ಮದಿ ಇಲ್ಲವಾಗಿದೆ. ಕುಟುಂಬದಲ್ಲಿ ಪ್ರೀತಿ ವಿಶ್ವಾಸ ಕಡಿಮೆ ಆಗುತ್ತಿದೆ. ಹಿರಿಯರಿಗೆಲ್ಲ ಗೌರವಿಸುವ ,ಕಿರಿಯರಿಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದರು.
ಕಾರ್ಯಕ್ರಮ ಪೂರ್ವದಲ್ಲಿ ಮಹಿಳೆಯರಿಗೆ ವಿವಿಧ ರಂಗೋಲಿ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಧಾನ್ಯ ಗುರುತಿಸುವಿಕೆ,ಮ್ಯೂಸಿಕ್ ಚಾರ್ ಆಟವಾಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಊರಿನ ಹಿರಿಯರಿಗೆ ಹಾಗೂ ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕಾರ್ಯಕ್ರಮದ ಕೆಪಿಆರ್‌ಎಸ್ ಹಾಗೂ ಗ್ರಾಮದ ಯುವಕರು ಸಹಕಾರ ನೀಡಿದ್ದರು. ಕಾರ್ಯಕ್ರಮದಲ್ಲಿ ಬಸವಂತರಾಯಗೌಡ ಕಲ್ಲೂರ, ಹೆಚ್.ವೀರುಪಾಕ್ಷಗೌಡ, ನಾಗೇಶಗೌಡ, ಉಮಾದೇವಿ, ಪರಿಮಳ, ಮಹಾದೇವಿ ಭಾವಿಕಟ್ಟಿ, ಯಂಕಮ್ಮ ಪೋ.ಪಾ ಮಲ್ಲಮ್ಮ, ಸವಿತಾ, ಹಂಪಮ್ಮ ಮಡಿವಾಳ, ದೇವಮ್ಮ ಬೋವಿ, ಸುಮಂಗಲಾ ಜಾಗಲಕಲ್, ಶರಣಮ್ಮ ಕುರಬರ, ನಿರ್ಮಲಾ, ಹೆಚ್. ಹಾಗೂ ನಿರ್ಣಾಯಕರಾಗಿ ಜಲಜಾಕ್ಷೀ ಹಾಗೂ ಶೈಲಶ್ರೀ ಆಗಮಿಸಿದ್ದರು.