ಜನವಾಡದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಸಚಿವ ಖೂಬಾ ಚಾಲನೆ

ಬೀದರ್:ಡಿ.1: ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದೇಶದಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳುವಂತೆ ಕರೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ತಾಲೂಕಿನ ಜನವಾಡ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಚಿವ ಖೂಬಾ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಪ್ರತಿಜ್ಞೆ ಭೋದಿಸಿ, ಭಾರತಿಯರ ನಿಷ್ಟೇ, ಪರಿಶ್ರಮ ನೋಡಿದರೆ ನಮ್ಮ ದೇಶ ಈ ಹಿಂದೆ ಎಂದೊ ಅಭಿವೃದ್ದಿ ಹೊಂದಬೇಕಾಗಿತ್ತು, ಆದರೆ ನಮ್ಮ ಹಿಂದಿನ ಸರ್ಕಾರಗಳು ನಮ್ಮ ಜನರಿಗೆ ಸೂಕ್ತ ಅವಕಾಶ ನೀಡದಿರುವುದು, ಹಿಂದಿನ ಸರ್ಕಾರದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ದೂರಾಡಳಿತದ ಕಾರಣ ನಮ್ಮ ದೇಶ ಹೇಳಿಕೊಳ್ಳುವಷ್ಟು ಅಭಿವೃದ್ದಿ ಹೊಂದಿಲ್ಲಾ, ಆದರೆ ದೇಶಕ್ಕೆ 2014ರಲ್ಲಿ ನರೇಂದ್ರ ಮೋದಿಯವರ ಆಡಳಿತ ದೇಶಕ್ಕೆ ಸಿಕ್ಕ ಮೇಲೆ, ದೇಶದ ಅಭಿವೃದ್ದಿ ಅಭೂತಪೂರ್ವವಾಗಿದೆ, ಎಲ್ಲಾ ರಂಗಗಳಲ್ಲಿ ದೇಶವು ಅಭಿವೃದ್ದಿಗೊಳ್ಳುತ್ತಿದೆ, ದೇಶದ 80 ಕೋಟಿ ಜನರು ನಮ್ಮ ಸರ್ಕಾರ ವಿವಿಧ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರು.

ನಮ್ಮ ಸರ್ಕಾರದಲ್ಲಿ ತಾಯಂದಿರಿಗೆ, ಸಹೋದರಿಯರಿಗೆ ಹೆಚ್ಚಿನ ಮಹತ್ವ ನೀಡಿ ಯೋಜನೆಗಳು ರೂಪಿಸಲಾಗಿದೆ ದೇಶದ ಹಾಗೂ ಬೀದರ ಕ್ಷೇತ್ರದ ಮಹೀಳೆಯರಿಗೆ ಸ್ವಾಭಿಮಾನದ ಬದುಕು ನೀಡಲಾಗಿದೆ. ಪ್ರತಿ ಬಡ ಹೆಣ್ಣು ಮಕ್ಕಳಿಗೆ ಉಚಿತ ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ, ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ. ಉಚಿತ ಅಕ್ಕಿ, ಸ್ವ-ಸಹಾಯ ಗುಂಪುಗಳಿಗೆ ಡಿ.ಸಿ.ಸಿ. ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿದ್ದೇವೆ, ಆಯುಷ್ಮಾನ ಭಾರತ ಯೋಜನೆಯಡಿ ಉಚಿತ ಆರೋಗ್ಯ ಸೇವೆ ಹೀಗೆ ಮುಂತಾದ ಸೇವೆಗಳು ಪಡೆದುಕೊಳ್ಳುತ್ತಿದ್ದಿರಿ, ಫಸಲ್ ಬೀಮಾ ಯೋಜನೆಯಡಿ ಒಳ್ಳೆಯ ಪರಿಹಾರ ಬರುತ್ತಿದೆ, ಈ ವರ್ಷ ಬರಗಾಲವಿರುವ ಕಾರಣ ಒಳ್ಳೆಯ ಪರಿಹಾರ ಬರುತ್ತದೆ ಎಂದು ತಿಳಿಸಿದರು.
ಅಂಚೆ ಇಲಾಖೆಯ ಮೂಲಕ ಬಡವರು ಸಹ ಪೆನಷನ್ ಪಡೆದುಕೊಳ್ಳಬಹುದು, ಅಂಚೆ ಇಲಾಖೆಗೆ ಸಂಪರ್ಕಿಸಿ, ಹೀಗೆ ದೇಶದ ಪ್ರತಿಯೊಬ್ಬರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಲಾಭ ಪಡೆದುಕೊಳ್ಳಬೇಕು, ಮುಂದಿನ 25 ವರ್ಷಗಳಲ್ಲಿ ಭಾರತ ವಿಕಸಿತ ಭಾರತವಾಗಬೇಕು, ಆರ್ಥಿಕವಾಗಿ ಸಧೃಢಗೊಳ್ಳಬೇಕು, ಇದಕ್ಕೆ ನಾವೇಲ್ಲರೂ ಶ್ರಮ ಪಡಬೇಕಾಗಿದೆ ಎಂದು ತಿಳಿಸಿದರು ಮತ್ತು ಭಾರತ ಸರ್ಕಾರದಿಂದ 18 ವೃತ್ತಿಪರರಿಗಾಗಿ ಪಿ.ಎಮ್. ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ, ಈ ಯೋಜನೆಯಡಿ ಉಚಿತ ತರಬೇತಿ ನೀಡಿ, ಸಾಲ ಒದಗಿಸಿ, ನಿಮ್ಮ ವೃತ್ತಿಯನ್ನು ಅಭಿವೃದಿಗೊಳಿಸಲಿದ್ದಾರೆ ಎಂದರು.
ನಂತರ ಜನರೊಂದಿಗೆ ಭಾರತ ಸರ್ಕಾರದ ಯೋಜನೆಗಳ ಕುರಿತಾದ ಕಿರುಚಿತ್ರ ವಿಕ್ಷಿಸಿ, ಉಜ್ವಲ 3.0 ಯೊಜನೆಯ ಲಾಭಾರ್ಥಿಗಳಿಗೆ ಉಚಿತ ಗ್ಯಾಸ್ ನೀಡಿದರು, ರೈತರು ವೈಜ್ಞಾನಿಕವಾಗಿ ಡ್ರೋಣ್ ಮೂಲಕ ರಸಗೊಬ್ಬರ ಸಿಂಪಣೆ ಮಾಡುವ ಪದ್ದತಿ ವಿಕ್ಷಿಸಿ ರೈತರು ವೈಜ್ಞಾನಿಕ ಕೃಷಿಯಲ್ಲಿಯೂ ತೊಡಗಬೇಕೆಂದು ತಿಳಿಸಿದರು. ನಂತರ ವಿವಿಧ ಯೋಜನೆಯಡಿ ಲಾಭ ಪಡೆದುಕೊಂಡ ಫಲಾನುಭವಿಗಳು ಮಾತನಾಡಿ ಅವರ ಸಂತೋಷ ಹಂಚಿಕೊಂಡರು.
ಈ ಸಂದರ್ಭದಲ್ಲಿ ಎಸ್.ಬಿ.ಐ ಬ್ಯಾಂಕಿನ ಅಧಿಕಾರಿ ನಾಗರಾಜ, ಸಂಜುಕುಮಾರ ಸುತಾಳೆ, ನಬಾರ್ಡ ಅಧಿಕಾರಿ ರಾಮರಾವ, ಹಾಗೂ ಈ ಯಾತ್ರೆಯ ಜಿಲ್ಲಾ ಸಂಯೋಜಕರಾದ ಮಲ್ಲಿಕಾರ್ಜುನ ಕುಂಬಾರ, ನಿಲೇಶ ಜಾಧವ, ಪಕ್ಷದ ಮುಖಂಡರಾದ ಶ್ರೀ ರಾಜೇಂದ್ರ ಪೂಜಾರಿ, ಸೂರಜಸಿಂಗ್ ಠಾಕೂರ ಇತರರು ಉಪಸ್ಥಿತರಿದ್ದರು.