ಜನವಸತಿ ಪ್ರದೇಶದಲ್ಲಿ ಪಟಾಕಿ ದಾಸ್ತನು: ಅಧಿಕಾರಿಗಳು ದಾಳಿ


ಸಂಜೆವಾಣಿ ವಾರ್ತೆ
ಗಂಗಾವತಿ, ಅ.13: ಅನಧಿಕೃತ ಹಾಗೂ ಜನವಸತಿ ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿದ್ದ ಪಟಾಕಿ ಗೋಡಾನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 30 ಲಕ್ಷ ರೂ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ಅತ್ತಿಬೆಲೆ ನಡೆದ ಪಟಾಕಿ ಅವಘಡ ಹಿನ್ನಲೆ ರಾಜ್ಯ ಸರ್ಕಾರ ಅನಧಿಕೃತ ಗೋದಾಮು ಹಾಗೂ ಪಟಾಕಿ ದಾಸ್ತಾನು ಪರಿಶೀಲಿಸುವಂತೆ ಆದೇಶ ಹಿನ್ನಲೆ ತಹಶಿಲ್ದಾರ್, ಪೊಲೀಸ್ ಇಲಾಖೆ, ನಗರಸಭೆ ಸೇರಿದಂತೆ ಇತರೆ ಇಲಾಖೆಗಳು ಸೇರಿ ನಗರದಲ್ಲಿ ವಿವಿಧಡೆ ದಾಳಿ ಮಾಡಿ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಒಟ್ಟು 6 ಸ್ಥಳಗಳಲ್ಲಿ ಪಟಾಕಿ ದಾಸ್ತಾನು ಮಾಡಿದ್ದು, ಜನವಸತಿ ಪ್ರದೇಶದಲ್ಲಿ ಇಷ್ಟು ದೊಡ್ಡಪ್ರಮಾಣದ ಸಂಗ್ರಹ ಮಾಡಿಕೊಂಡಿರುವುದು ಅನಧಿಕೃತವಾಗಿ ಎಂದು ಎಲ್ಲಾ ಪಟಾಕಿಗಳನ್ನು ನಗರಸಭೆ ವಾಹನದಲ್ಲಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಈ ವೇಳೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಇ ಒ ಲಕ್ಷ್ಮೀದೇವಿ ನಗರಠಾಣೆ ಪ್ರಭಾರಿ ಪಿ ಐ ಮಂಜುನಾಥ ಸಿಲವರಿ, ನಗರಸಭೆಯ ಅರೋಗ್ಯ ಇಲಾಖೆಯ ಅಧಿಕಾರಗಳು ಉಪಸ್ಥಿತರಿದ್ದರು.