ಜನವರಿ ೨೦ ಕ್ಕೆ ಚೂಟಿಪೋರಿ ಆಲ್ಬಂ ಹಾಡು ಬಿಡುಗಡೆ – ಕರಿಬಸವ ತಡಕಲ್

ಮಾನ್ವಿ.ಜ.೧೮- ಉತ್ತರ ಕರ್ನಾಟಕ ಜಾನಪದ ಶೈಲಿಯಲ್ಲಿ ಪಕ್ಕಾ ಜವಾರಿ ಚೂಟಿಪೋಲಿ ಶೀರ್ಷಿಕೆಯ ಅದ್ಭುತವಾದ ಸಾಹಿತ್ಯ ಸಂಗೀತ ಸಂಕಲನದಿಂದ ಕೂಡಿದ ಹಾಡೊಂದು ಇದೆ ಜನವರಿ ೨೦ ಕ್ಕೆ ಕರಿಬಸವ ತಡಕಲ್ ಯೂಟ್ಯೂಬ್ ಚಾನೆಲಿನಲ್ಲಿ ಬಿಡುಗಡೆಯಾಗುತ್ತಿದ್ದು ರಾಜ್ಯದ ಸಿನಿ ಪ್ರೇಕ್ಷಕರು,ಸಾಹಿತ್ಯ ಆಸಕ್ತಿರು, ವಿಶೇಷವಾಗಿ ನಮ್ಮ ಉತ್ತರ ಕರ್ನಾಟಕದ ಜನರು ನಮ್ಮ ವಿಡಿಯೋ ನೋಡುವುದರ ಜೊತೆಗೆ ನಮ್ಮ ತಂಡಕ್ಕೆ ಪ್ರೋತ್ಸಾಹ ನೀಡುವಂತೆ ಕನ್ನಡ ಕೋಗಿಲೆ ಪ್ರಖ್ಯಾತಿಯ ಕರಿಬಸವ ತಡಕಲ್ ಇವರು ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಹಿಂದಿನ ದಿನಗಳಲ್ಲಿ ಒಂದು ಸಾಹಿತ್ಯಕ್ಕೆ ಅದರದೇ ಆಗಿರುವ ಸತ್ವ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅರ್ಥವಿಲ್ಲದ ಹಾಡುಗಳನ್ನು ಬರೆದು ಜನರಲ್ಲಿ ಗೊಂದಲವಾದ ವಿಷಯ ಸೃಷ್ಟಿಸುತ್ತಿದ್ದಾರೆ ನಮ್ಮ ಉತ್ತರ ಕರ್ನಾಟಕ ಶೈಲಿಯ ಹಾಡುಗಳು ಅದ್ಬುತವಾದ ಸಾಹಿತ್ಯವನ್ನು ಹೊಂದಿವೆ ಅದನ್ನು ಪರಿಗಣಿಸಿ ಇತ್ತೀಚಿನ ಯುವ ಮನಸ್ಸುಗಳಿಗೆ ಹೋಲುವಂತೆ ಸಾಹಿತ್ಯದೊಂದಿಗೆ ಅತ್ಯುತ್ತಮ ನಿರ್ದೇಶನ, ಸಂಗೀತ, ಸಂಕಲನ, ಉತ್ತಮ ನಟನೆಯ ಕಲಾವಿದರೊಂದಿಗೆ ಈ ಹಾಡನ್ನು ನಿರ್ಮಾಣ ಮಾಡಲಾಗಿದ್ದು ಕರ್ನಾಟಕ ಜನರ ಆಶಿರ್ವಾದ ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವರಾಜ ಇಲಿ ಗಬ್ಬೂರು,ನಾಗರಾಜ ಗೌಡ ಪೋತ್ನಾಳ್, ನಾಗರಾಜ ಗಂಗೂಲಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.