ಜನವರಿ ತನಕ ಸಿಡಿಪಿ ಮಾಸ್ಟರ್ ಪ್ಲ್ಯಾನ್: ಬಿಡಿಎ ಅಧ್ಯಕ್ಷ ಬಾಬು ವಾಲಿ

ಬೀದರ್ :ನ.17:ನಗರಾಭಿವೃದ್ಧಿ ಪ್ರಾಕಾರ (ಬಿಡಿಎ) ಮುಂಬರುವ 10 ವರ್ಷದ ಅವಗೆ ನಗರಾಭಿವೃದ್ಧಿ ಯೋಜನೆಯನ್ನು (ಸಿಡಿಪಿ) ಸಿದ್ಧಪಡಿಸುತ್ತಿದೆ. ಸ್ಮಾರ್ಟ್ ಸಿಟಿಗೆ ಪೂರಕವಾಗಿ ಯೋಜನೆ ರೂಪಿಸುತ್ತಿದ್ದು, ಜನವರಿ ಒಳಗಾಗಿ ಜಾರಿಗೊಳಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಬಾಬು ವಾಲಿ ಹೇಳಿದರು. ನಗರದ ಸುಂದರೀಕರಣ, ರಸ್ತೆ ಅಗಲೀಕರಣ, ಹೊಸ ರಿಂಗ್ ರೋಡ್, ಪ್ರಾಧಿಕಾರದ ವ್ಯಾಪ್ತಿ ವಿಸ್ತರಣೆ, ಹೊಸ ಬಡಾವಣೆ, ಅಪಾರ್ಟ್‍ಮೆಂಟ್ ನಿರ್ಮಾಣ ಸೇರಿ ಹಲವು ಕಾಮಗಾರಿಗಳು ಯೋಜನೆಯಲ್ಲಿ ಇವೆ ಎಂದರು.

ಬೀದರ್ ನಗರ ವ್ಯಾಪ್ತಿಯಲ್ಲಿ ಇರುವ ಎರಡು ಕೈಗಾರಿಕೆ ಪ್ರದೇಶಗಳನ್ನು ಹೊರಗಡೆ ಸ್ಥಳಾಂತರಿಸಲು ಸರ್ಕಾರಕ್ಕ್ಕೆ ಪತ್ರ ಬರೆಯಲಾಗಿದೆ. ಇಲ್ಲಿನ ಗಾಂಗಂಜ್ ಕೈಗಾರಿಕೆ ಪ್ರದೇಶ ಹಾಗೂ ನೌಬಾದ್ನಲ್ಲಿನ ಕೈಗಾರಿಕೆ ಪ್ರದೇಶ ನಗರದ ಒಳಗಡೆ ಇವೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ನಗರದಿಂದ ದೂರ ಸ್ಥಳಾಂತರಿಸಲು ಕೋರಲಾಗಿದೆ ಎಂದು ಹೇಳಿದರು.

ಪ್ರಾಧಿಕಾರ ವ್ಯಾಪ್ತಿಗೆ ಬರುವ ಭೂಮಿ ಎನ್‍ಎ ಮಾಡಿಕೊಂಡು 2 ವರ್ಷದೊಳಗೆ ಅಭಿವೃದ್ಧಿ ಪಡಿಸಿಕೊಳ್ಳಬೇಕೆಂಬ ನಿಯಮ ಇದೆ. ಆದರೆ ಅಭಿವೃದ್ಧಿ ಮಾಡದ ಭೂಮಿಯ ಎನ್‍ಎ ರದ್ದು ಪಡಿಸಬೇಕು ಎಂದು ಡಿಸಿ ಅವರಿಗೆ ಪತ್ರ ಬರೆಯಲಾಗಿದೆ. ಯೋಜನೆ ಪ್ರಕಾರ ಅನುಮತಿ ಪಡೆದು ಅಭಿವೃದ್ಧಿ ಪಡಿಸದ ಲೇಔಟ್ಗಳಿಗೆ ನೋಟಿಸ್ ಜಾರಿಗೆ ಮಾಡಲಾಗಿದೆ ಎಂದರು.

ನಗರದ ವಿವಿಧ ಬಡಾವಣೆಗಳಲ್ಲಿನ ಉದ್ಯಾನವನಗಳಿಗೆ ಮಹಾತ್ಮರ ಹೆಸರು ನಾಮಕರಣ ಕಾನೂನು ನಿಯಮದಂತೆ ಮಾಡಲಾಗುತ್ತಿದೆ. ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ, ಒಮ್ಮತದ ನಿರ್ಣಯದಂತೆ ಕ್ರಮ ವಹಿಸಲಾಗಿದೆ. ಆದರೆ ಅರಳಿ ಅವರು ಯಾವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಹಿಂದಿನ ಕಾಂಗ್ರೆಸ್ ಸರಕಾರÀದಲ್ಲಿ ಸಿದ್ದರಾಮಯ್ಯ ಬಡಾವಣೆ, ಎಸ್.ಎಂ. ಕೃಷ್ಣ ಬಡಾವಣೆ ಎಂದು ಹೆಸರಿಟ್ಟಾಗ ನಾವು ವಿರೋಧ ವ್ಯಕ್ತಪಡಿಸಿಲ್ಲ. ಪ್ರಾಕಾರದ ಬಡಾವಣೆಗೆ ಬಿ.ಎಸ್. ಯಡಿಯೂರಪ್ಪ ಹೆಸರಿಟ್ಟರೆ ವಿರೋಧ ಮಾಡುತ್ತಿರುವುದು ಸಲ್ಲದು. ಎಷ್ಟೇ ಬೊಬ್ಬೆ ಹಾಕಿದರು ಹೆಸರು ಬದಲಾವಣೆ ಸಾಧ್ಯವಿಲ್ಲ ಎಂದರು.

ನಾನು ಅಧ್ಯಕ್ಷನಾದ ನಂತರ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿರುವೆ. ಬಿ.ಎಸ್. ಯಡಿಯೂರಪ್ಪ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಲಾಟರಿ ಮೂಲಕ ಯ್ಯೂಟೂಬ್‍ನಲ್ಲಿ ಲೈವ್ ಪ್ರಸಾರವಿಟ್ಟು ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ. 188 ಸೈಟ್ ಹರಾಜು ಮಾಡಲಾಗಿದೆ. ಇನ್ನೂಳಿದ 100 ನಿವೇಶನ ಶೀಘ್ರದಲ್ಲಿ ಆನ್ಲೈನ್ ಮೂಲಕ ಹರಾಜು ಮಾಡಲಾಗುವುದು. ಬಿಎಸ್ವೈ ಬಡಾವಣೆ ಸಮೀಪ ಬಸ್ ತಂಗುದಾಣ, ವಾಚನಾಲಯ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ನಗರದಲ್ಲಿ 75 ಉದ್ಯಾನವನಗಳಿಗೆ ಮಹಾತ್ಮರ ಹೆಸರು ಹೆಸರಿಡಲು ಪ್ರಾಕಾರದ ಸಭೆಯಲ್ಲಿ ಚರ್ಚಿಸಿ ಅನುಮತಿ ಪಡೆಯಲಾಗಿದೆ. ಈಗಾಗಲೇ ನಮೋ, ಅಟಲ್, ವೀರ್ ಸಾವಕ್‍ಕರ್, ಶಾಮಪ್ರಸಾದ್ ಮುಖರ್ಜಿ, ಪಂಡಿತ್ ದಿನದಯಾಳ ಉಪಾಧ್ಯಯ ಬಯಲು ರಂಗ ಮಂದಿರ, ಸರದಾರ್ ವಲ್ಲಭಭಾಯಿ ಪಟೇಲ್, ಗುರುಪಾದಪ್ಪ ನಾಗಮಾರಪಳ್ಳಿ ಸೇರಿ ಇತರ ಮಹಾತ್ಮರ ಹೆಸರಿನಲ್ಲಿ ಪಾರ್ಕ್‍ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಕನಕ ಉದ್ಯಾನವನ ಮತ್ತು ಸಿದ್ಧಾರೂಢ ಉದ್ಯಾನವನ ಹೆಸರಿನ ಎರಡು ಪಾರ್ಕ್‍ಗಳನ್ನು ಒಂದು ವಾರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.

ಖಾಸಗಿ ಬಡಾವಣೆಯಲ್ಲಿ ಕಾಯ್ದಿರಿಸಿದ 25 ಸಿಎ ಸೈಟ್ಗಳನ್ನು ಸಂಘ-ಸಂಸ್ಥೆಗಳಿಗೆ ಹರಾಜು ಮಾಡಲಾಗುತ್ತಿದೆ. ಇನ್ನುಳಿದ 20 ಸೈಟ್ ಹರಾಜು ಮಾಡಲಾಗುವುದು. ನಗರದ ನಾಲ್ಕು ದಿಕ್ಕಿನಲ್ಲಿ ಸ್ವಾಗತ ಕಮಾನ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಒಂದು ವಾರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.

ಬೀದರ್ ನಗರಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ಬಾಬು ವಾಲಿ ಆರೋಪ

ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರು

ಮತದಾರರ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹೆಸರು ಎರಡು ಕಡೆಯಲ್ಲಿ ಇದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ಬಾಬು ವಾಲಿ ಆಗ್ರಹಿಸಿದ್ದಾರೆ.

ಬೀದರ್ ಮತ್ತು ದಾವಣಗೆರೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅರಳಿ ಹೆಸರಿದೆ. ಇದು ಕಾನೂನು ಪ್ರಕಾರ ಅಕ್ರಮ. ಅರಳಿ ಅವರ ಪ್ರಾಕಾರದ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬೆದರಿಸುವ ಹೆದರಿಸುವ ತಂತ್ರಗಾರಿಕೆ ಇದು ಹೊಸದೆನಲ್ಲ, ಜಿಲ್ಲಾಧಿಕಾರಿ ರಾಮಚಂದ್ರ, ಮಹಾದೇವ್, ಇಗ ಗೋವಿಂದ ರೆಡ್ಡಿ, ಈ ಡ್ರಾಮ ನಿಲ್ಲಲ್ಲಿ.

ನಾವೂ ಯಾವ ತನಿಖೆಗು ಸಿದ್ಧ, ಇವರು ಮಾಡುವ ಬೆದರಿಕೆ ತಂತ್ರಗಾರಿಕೆ ನಮಗೆ ಮನೋರಂಜನೆ, ಇದು ನಿಲ್ಲಿಸಲಿ.

ಪಾರ್ಕ್‍ನಲ್ಲಿದ್ದ ಅಕ್ರಮ ಸೈಟ್‍ನ್ನು ಕ್ರಮಬದ್ಧವಾಗಿ ಮಾಡುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಕೇಳಿಕೊಂಡಾಗ ಇದು ನಿಯಮಬಾಹಿರು ಇದೆ ಎಂದು ಹೇಳಿದ್ದಾಗ ಆಯುಕ್ತರಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಅವರನ್ನು ಹೆದರಿಸಿದರೆ ಎಲ್ಲ ಅಧಿಕಾರಿಗಳು ಹದ್ದುಬಸ್ತಿನಲ್ಲಿರುತ್ತಾರೆ ಎಂದು ಎಂಎಲ್ಸಿ ಅರಳಿ ತಿಳಿದುಕೊಂಡಿದ್ದಾರೆ. ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಮಂಡಿಸಿವುದು ಅರಳಿ ಕೆಲಸ ಮಾಡಿಕೊಂಡಿದ್ದಾರೆ. ಇವರ ಕಾಟದಿಂದ ಅಕಾರಿಗಳು ಬೇಸತ್ತಿದ್ದಾರೆ. ಇವರನ್ನು ಯಾಕೇ ಎಂಎಲ್ಸಿ ಮಾಡಿದ್ದೇವೆ ಎಂದು ಖುದ್ದು ಕಾಂಗ್ರೆಸ್ನವರು ಗೊಳ್ಳು ಹೇಳಿಕೊಳ್ಳುತ್ತಿದ್ದಾರೆ. ಕಾರ್ಯಕರ್ತನಾಗಿದ್ದ ಅರಳಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಸಿಕ್ಕಿರುವುದು ಜಿಲ್ಲೆಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ ಎಂದು ಹೇಳಿದರು.