ಜನವರಿ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸದಸ್ಯರ ಒತ್ತಾಯ

ಸಿರವಾರ.ನ.೦೬- ಪಟ್ಟಣ ಪಂಚಾಯತಿಯ ನೂತನ ಕಟ್ಟಡ ಕಾಮಗಾರಿಯನ್ನು ಜನವರಿ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸರ್ವ ಸದಸ್ಯರು ಒತ್ತಾಯಿಸಿದ್ದರು.
ಪಟ್ಟಣದ ವೈ.ಎ.ಜಿ. ಲೇಔಟ್ ನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಪ.ಪಂಚಾಯತಿಯ ಕಟ್ಟಡವನ್ನು ವಿಕ್ಷಣೆ ಮಾಡಿದ ಸದಸ್ಯರು, ಸಿರವಾರ ಪಂಚಾಯತಿಯ ಕಟ್ಟಡವು ಹಳೆಯದಾಗಿರುವದರಿಂದ ನೂತನ ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿದೆ. ಜನವರಿ ಒಳಗಾಗಿ ಪೂರ್ಣಗೊಳಿಸಬೇಕು.
ಈ ಸಂದರ್ಭದಲ್ಲಿ ಜೆಇ ಹಸನ್, ಸದಸ್ಯರಾದ ಹುಸೇನ್ ಅಲಿಸಾಬ್,ಸೂರಿದುರುಗಣ್ಣನಾಯಕ, ವೈ.ಭೂಪನಗೌಡ, ಮಾರ್ಕಪ್ಪ, ಮೌಲಾಸಾಬ್ ವರ್ಚಸ್, ಹಾಜಿ ಚೌದ್ರಿ, ಅಮರೇಶಗಡ್ಲ, ಬಸವರಾಜ, ಮಲ್ಲಪ್ಪ, ರಂಗನಾಥ ಭೋವಿ, ಶರಣಬಸವ ಸೇರಿದಂತೆ ಇನ್ನಿತರರು ಇದ್ದರು.